ಯೋಧನ ಮಗನ ಮೆಡಿಕಲ್​ ಬಿಲ್ ಬರೋಬ್ಬರಿ​​ 16 ಕೋಟಿಯೇ..!? ಬಿಲ್​ ನೋಡಿ ದಂಗಾಗಿರುವ ಸೇನಾಧಿಕಾರಿಗಳು..!

ಭೋಪಾಲ್​​: ಮಧ್ಯಪ್ರದೇಶದ ಭಿಂಡ್​ ಜಿಲ್ಲೆಯ ಆಯುರ್ವೇದ ಆಸ್ಪತ್ರೆಯೊಂದು ಯೋಧನ ಪುತ್ರನಿಗೆ ಚಿಕಿತ್ಸೆ ನೀಡಿದ ಬಿಲ್​ ಎಷ್ಟುಗೊತ್ತಾ? ​ ಕೇಳಿದ್ರೆ ಖಂಡಿತಾ ಶಾಕ್​ ಆಗ್ತೀರಾ! 2014 ರಿಂದ 17 ರ ವರೆಗೆ, ಅರ್ಥಾತ್​ ಮೂರು ವರ್ಷಗಳ ಕಾಲ, ಯೋಧನ ಮಗನೊಬ್ಬ ಈ ಆಸ್ಪತ್ರೆಯಲ್ಲಿ ಟ್ರೀಟ್​​ಮೆಂಟ್​ ಪಡೆದಿದ್ದ. ಅದಕ್ಕಾಗಿ ಆಸ್ಪತ್ರೆ ಬರೋಬ್ಬರಿ 16 ಕೋಟಿ! ಹೌದು, ಇನ್​​ಫ್ಯಾಂಟ್ರಿ ರೆಜಿಮೆಂಟ್​​ನ ಯೋಧ ಸೌರವ್​ ರಾಜವತ್​​ನ ಕಥೆಯಿದು.

ರಾಜವತ್​ ಸೇನೆಯಲ್ಲಿದ್ದಾಗ ಆತನ ಮಗ ಸೂರಬ್​ ರಾಜವತ್​​ನ ತಲೆಗೆ ಬಲವಾದ ಪೆಟ್ಟು ಬಿದ್ದಿರುತ್ತೆ. ಹೀಗಾಗಿ ಆತನನ್ನ ಆಯುರ್ವೇದ ಆಸ್ಪತೆಗೆ ದಾಖಲಿಸಲಾಗುತ್ತೆ.

ವೈದ್ಯರು ಸೂರಬ್​​ಗೆ ಅಲೋಪತಿ ಟ್ರೀಟ್​ಮೆಂಟ್​ ನೀಡಿರುತ್ತಾರೆ. ಆದ್ರೆ, ಬೇಗ ಗುಣಮುಖರಾಗದ ಕಾರಣ ಸತತ ಮೂರು ವರ್ಷಗಳ ಕಾಲ ಚಿಕಿತ್ಸೆ ಮುಂದುವರೆದಿದೆ. ಇದಕ್ಕಾಗಿ ಆಸ್ಪತ್ರೆ 16 ಕೋಟಿ ಬಿಲ್​ ಮಾಡಿದೆಯಂತೆ.

ಇನ್ನು, ಈ ವಿಷಯ ಬಹಿರಂಗವಾಗಿದ್ದು ಸೇನೆಗೆ ನೀಡಿರುವ ಮೆಡಿಕಲ್​ ಬಿಲ್​​ನಲ್ಲಿ. ಸದ್ಯ, ಬಿಲ್​ ನೋಡಿ ದಂಗಾಗಿರುವ ಸೇನಾಧಿಕಾರಿಗಳು, ತನಿಖೆ ನಡೆಸುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದಾರೆ. ಈ ಬಗ್ಗೆ ವೈದ್ಯರನ್ನ ಕೇಳಿದ್ರೆ, ನಾವು ನೀಡಿರೋದು 1,60,000 ರೂಪಾಯಿ ಮಾತ್ರ. ಅದು 16 ಕೋಟಿ ಹೇಗಾಯ್ತೊ ನಮಗೆ ಗೊತ್ತಿಲ್ಲ ಎನ್ನುತ್ತಾರೆ. ಇನ್ನು, ರಾಜವತ್​ನನ್ನ ವಿಚಾರಿಸಿದ್ರೆ, ನನ್ನ ಮಗನ ತಲೆಗೆ ರಾಡ್​ನಿಂದ ಹೊಡೆತ ಬಿದ್ದಿದ್ದು, ಗಂಭೀರ ಗಾಯವಾಗಿತ್ತು. ಇದಕ್ಕಾಗಿ 16 ಕೋಟಿ ಬಿಲ್​ ಆಗಿರೋದು ನಿಜ. ಆದ್ರೆ, ಸೇನೆಯು ಈ ವಿಷಯವನ್ನ ಮುಚ್ಚಿಡಲು ಪ್ರಯತ್ನಿಸುತ್ತಿದೆ ಅಂತಾ ಹೇಳುತಿದ್ದಾನೆ. ಒಟ್ನಲ್ಲಿ, ಈ ಬಗ್ಗೆ ತನಿಖೆ ಆರಂಭಗೊಂಡಿದ್ದು, ‘ಇದ್ದ ಇಬ್ಬರಲ್ಲಿ ಕದ್ದವರ್‍ಯಾರು’ ಎನ್ನುವಂತಾಗಿದೆ.

ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಕನ್ನಡನಾಡಿ.com ಪೇಜ್ ಲೈಕ್ ಮಾಡಿ..