ರೈಲಿನ ಟಾಯ್ಲೆಟ್ ನಲ್ಲಿತ್ತು ರುಂಡವಿಲ್ಲದ ಮಹಿಳೆಯ ದೇಹ..!

ರುಂಡವಿಲ್ಲದ ಮಹಿಳೆಯ ಮೃತದೇಹ ರೈಲಿನ ಟಾಯ್ಲೆಟ್ ನಲ್ಲಿ ಪತ್ತೆಯಾದ ಘಟನೆ ಒಡಿಶಾದ ಪುರಿಯಲ್ಲಿ ನಡೆದಿದೆ. ಅಂದಾಜು 40 ವರ್ಷದ ಈ ಮಹಿಳೆ ಯಾರೆಂಬುದರ ಪತ್ತೆ ಕಾರ್ಯ ನಡೆದಿದ್ದು, ರೈಲಿನಲ್ಲಿಯೇ ಆಕೆಯ ಹತ್ಯೆ ನಡೆದಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.

ಬುಧವಾರ ಬೆಳಗ್ಗೆ ರೈಲ್ವೆ ಪೊಲೀಸರಿಗೆ ಕರೆ ಮಾಡಿದ್ದ ಪ್ರಯಾಣಿಕರೊಬ್ಬರು ರೈಲಿನ ಟಾಯ್ಲೆಟ್ ನಲ್ಲಿ ರುಂಡವಿಲ್ಲದ ಮಹಿಳೆ ಮೃತದೇಹವಿರುವ ಕುರಿತು ಮಾಹಿತಿ ನೀಡಿದ್ದು, ಪುರಿಯಿಂದ 20 ಕಿಮೀ ದೂರದಲ್ಲಿರುವ ದೆಲಂಗಾ ಬಳಿಯ ರೈಲು ಹಳಿ ಮೇಲೆ ಮಹಿಳೆಯ ರುಂಡ ಸಿಕ್ಕಿದೆ.

ರಾತ್ರಿ ವೇಳೆ ರೈಲಿನಲ್ಲಿ ಈ ಹತ್ಯೆ ನಡೆದಿರಬಹುದೆಂಬ ಅನುಮಾನ ಹೊಂದಿರುವ ರೈಲ್ವೆ ಪೊಲೀಸರು, ಮೃತ ಮಹಿಳೆಯ ಗುರುತು ಪತ್ತೆ ಹಚ್ಚಲು ಮುಂದಾಗಿದ್ದಾರೆ.

ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಕನ್ನಡನಾಡಿ.com ಪೇಜ್ ಲೈಕ್ ಮಾಡಿ..