ಶಾಕಿಂಗ್! ಠಾಣೆಯಲ್ಲೇ ಅತ್ಯಾಚಾರವೆಸಗಿದ ಪೊಲೀಸ್ ಅಧಿಕಾರಿ..!!

ಮಹಿಳೆಯ ಮೇಲೆ ಪೊಲೀಸ್ ಅಧಿಕಾರಿಯೇ ಅತ್ಯಾಚಾರ ನಡೆಸಿದ ಆಘಾತಕಾರಿ ಘಟನೆ ಅಸ್ಸಾಂ ನ ಹಜೋದಲ್ಲಿ ನಡೆದಿದೆ. ವರದಿಗಳ ಪ್ರಕಾರ ಠಾಣೆಯ ಒಳಗಡೆಯೇ ಮಹಿಳೆ ಮೇಲೆ ಪೊಲೀಸ್ ಅಧಿಕಾರಿ ಅತ್ಯಾಚಾರ ಎಸಗಿದ್ದಾನೆ ಅಂತಾ ಹೇಳಲಾಗ್ತಿದೆ.

ರಾಮ್ಡಿಯಾ ಪೊಲೀಸ್ ಸ್ಟೇಷನ್ ನ ಬಿನೋದ್ ದಾಸ್ ಮಹಿಳೆಯನ್ನ ರೇಪ್ ಮಾಡಿದ ಪೊಲೀಸ್ ಅಧಿಕಾರಿ. ಈ ಸಂಬಂಧ ಹಜೋ ಪೊಲೀಸ್ ಸ್ಟೇಷನ್ ನಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗ್ತಿದೆ.

ಮಹಿಳೆಯ ದೂರು ಆಧರಿಸಿ, ಆ ಪೊಲೀಸ್ ಅಧಿಕಾರಿಯನ್ನು ಬಂಧಿಸಲಾಗಿದ್ದು, ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಹಾಗೆಯೇ ಸಂತ್ರಸ್ಥೆಯ ವೈದ್ಯಕೀಯ ತಪಾಸಣೆ ನಡೆಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಘಟನೆ ಸಂಬಂಧ ಅಸ್ಸಾಂನ ಮಾಜಿ ಸಿಎಂ ತರುಣ್ ಗೋಗಯ್ ಪ್ರತಿಕ್ರಿಯಿಸಿದ್ದು, ಇದೊಂದು ಅತ್ಯಂತ ಹೀನಾಯ ಘಟನೆ. ಜನರನ್ನು ರಕ್ಷಿಸಬೇಕಾದವರೇ, ಭಕ್ಷಕರಾಗಿದ್ದಾರೆ ಅಂತಾ ಕಿಡಿಕಾರಿದ್ದಾರೆ. ಈ ಸಂಬಂಧ ಆರೋಪಿ ಪೊಲೀಸ್ ಅಧಿಕಾರಿಗೆ ಕಠಿಣ ಶಿಕ್ಷೆ ನೀಡುವಂತೆ ಆಗ್ರಹಿಸಿದ್ದಾರೆ. ಅಲ್ಲದೇ, ಸರ್ಕಾರ ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸುವ ವೇಳೆ ಅವರ ಮಾನಸಿಕ ಸ್ಥಿತಿಯನ್ನು ಪರೀಕ್ಷಿಸಿ, ಅವರನ್ನ ಆಯ್ಕೆ ಮಾಡುವಂತೆ ಸಲಹೆ ನೀಡಿದ್ದಾರೆ.

👍👍 ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ 👍👍

>
%d bloggers like this: