ನೀಟ್ ಪರೀಕ್ಷೆಗೆ ಬಂದ ವಿದ್ಯಾರ್ಥಿನಿಯ ಬ್ರಾ ತೆಗೆಸಿದ ಪರೀಕ್ಷಾ ವೀಕ್ಷಕರು – ವಿದ್ಯಾರ್ಥಿನಿ ದೂರು : ಘಟನೆಗೆ ಸಂಬಂಧಿಸಿದಂತೆ ಕೇರಳದಲ್ಲಿ ಕೇಸ್ ದಾಖಲು..!!

ತಿರುವಂತನಪುರಂ: ದೇಶಾದ್ಯಂತ ಮೇ 6ರಂದು ಭಾನುವಾರ ಮೆಡಿಕಲ್ ಹಾಗೂ ದಂತ ವೈದ್ಯಕೀಯ ಸೀಟುಗಳಿಗೆ ನಡೆಯುವ ನೀಟ್ ಪರೀಕ್ಷೆ ನಡೆದಿದೆ.

ವಿದ್ಯಾರ್ಥಿನಿಯೊಬ್ಬರು ಪರೀಕ್ಷೆಯ ದಿನ ನನಗೆ ಒಳ ಉಡುಪು ಬಿಚ್ಚುವಂತೆ ಹೇಳಿದ್ದರು ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ಕೇರಳದ ಪಾಲಕ್ಕಾಡ್ ಸಮೀಪದ ಕೊಪ್ಪಾದ ಲಯನ್ಸ್ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ನೀಟ್ ಪರೀಕ್ಷೆ ಬರೆಯುವ ಮುನ್ನ ಪರೀಕ್ಷಾ ವೀಕ್ಷಕರು ವಿದ್ಯಾರ್ಥಿನಿಯ ಒಳಉಡುಪು ಬಿಚ್ಚುವಂತೆ ಹೇಳಿ ಅಸಭ್ಯವಾಗಿ ನಡೆದುಕೊಂಡಿದ್ದಾರೆ.

ವಿದ್ಯಾರ್ಥಿನಿ ಪರೀಕ್ಷೆ ಬರೆಯಲು ಕೊಠಡಿಗೆ ಹೋಗುವ ಸಂದರ್ಭದಲ್ಲಿ ಪರೀಕ್ಷಾ ವೀಕ್ಷಕರು ಪರೀಕ್ಷಿಸಿದ್ದಾರೆ. ಆಗ ವಿದ್ಯಾರ್ಥಿನಿ ಸೇರಿದಂತೆ ಕೆಲ ವಿದ್ಯಾರ್ಥಿನಿಯರ ಒಳ ಉಡುಪಿನಲ್ಲಿ ಮೆಟಲ್ ಹುಕ್ ಇದ್ದ ಕಾರಣ ಪರೀಕ್ಷಾ ವೀಕ್ಷಕರು ಶಂಕಿಸಿ ಒಳ ಉಡುಪುಗಳನ್ನು ತೆಗೆಸಿ ಪರೀಕ್ಷೆ ಬರೆಸಿದ್ದಾರೆ.

ತಾನು ಪರೀಕ್ಷೆ ಬರೆಯುವ ವೇಳೆ ಪರೀಕ್ಷಾ ವೀಕ್ಷಕರು ತನ್ನನ್ನು ಅನುಚಿತ ರೀತಿಯಲ್ಲಿ ನೋಡುತ್ತಿದ್ದರು. ಆದ್ದರಿಂದ ನಾನು ಸರಿಯಾಗಿ ಪರೀಕ್ಷೆ ಬರೆಯಲು ಸಾಧ್ಯವಾಗಿಲ್ಲ ಎಂದು ನೊಂದ ವಿದ್ಯಾರ್ಥಿನಿ ಹೇಳಿದ್ದಾರೆ.

ಪರೀಕ್ಷಾ ವೀಕ್ಷಕರು ನನ್ನ ಸಹೋದರಿ ಬಳಿ ಬಂದು ನಿಲ್ಲುತ್ತಿದ್ದರು. ಆದ್ದರಿಂದ ಆಕೆ ಪ್ರಶ್ನೆಪತ್ರಿಕೆಗಳಿಂದ ತನ್ನನ್ನು ಮುಚ್ಚಿಕೊಳ್ಳಲು ಯತ್ನಿಸುತ್ತಿದ್ದಳು. ಇದರಿಂದ ನನ್ನ ಸಹೋದರಿಗೆ ಮಾನಸಿಕವಾಗಿ ಹಿಂಸೆಯಾಗಿದ್ದು, ಪರೀಕ್ಷೆಯನ್ನು ಸರಿಯಾಗಿ ಬರೆಯಲಿಲ್ಲ ಎಂದು ವಿದ್ಯಾರ್ಥಿನಿಯ ಸಹೋದರಿ ಹೇಳಿದ್ದಾರೆ.

ವಿದ್ಯಾರ್ಥಿನಿಯ ದೂರಿನ ಆಧಾರದ ಮೇರೆಗೆ ಪೊಲೀಸರು ಈ ಪ್ರಕರಣವನ್ನು ಐಪಿಸಿ ಸೆಕ್ಷನ್ 509 ಅಡಿಯಲ್ಲಿ ದಾಖಲಿಸಿಕೊಂಡಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ. ಅದೇ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆದ ಇತರೆ ವಿದ್ಯಾರ್ಥಿಗಳನ್ನು ವಿಚಾರಣೆ ಮಾಡಿ ನಂತರ ಈ ಪ್ರಕರಣದ ಬಗ್ಗೆ ವಿಚಾರಣೆ ಮಾಡುವುದಾಗಿ ಪೊಲೀಸರು ಹೇಳಿದ್ದಾರೆ.

ಈ ಬಾರಿ ಕೇರಳದಲ್ಲಿ ಸುಮಾರು ಒಂದು ಲಕ್ಷಕೂ ಅಧಿಕ ವಿದ್ಯಾರ್ಥಿಗಳು ನೀಟ್ ಪರೀಕ್ಷೆ ಬರೆದಿದ್ದಾರೆ.

👍👍 ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ 👍👍

>
%d bloggers like this: