ಯುವತಿಯರೇ ಎಚ್ಚರ ಎಚ್ಚರ..!!! ಇಂಥವರೂ ಇರ್ತಾರೆ..!!! ಮದ್ವೆಯಾಗ್ತೀನಿ ಅಂತ ಲಾಡ್ಜ್ ಗೆ ಕರೆದುಕೊಂಡು ಹೋಗಿ ತಾನು ಅತ್ಯಾಚಾರವೆಸಗಿದ, ಸಹೋದರ ಹಾಗೂ ಸ್ನೇಹಿತನಿಂದ್ಲೂ ರೇಪ್ ಮಾಡಿಸ್ದ..!!

ಚೆನ್ನೈ: 25 ವರ್ಷದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ತಮಿಳುನಾಡಿನ ಧರ್ಮಪುರಿ ಜಿಲ್ಲೆಯಲ್ಲಿ ನಡೆದಿದೆ.

ಆರೋಪಿಗಳನ್ನು ನಯೀನ್, ನಫಿಜ್ ಮತ್ತು ರಂಜಿತ್ ಎಂದು ಗುರುತಿಸಲಾಗಿದೆ. ನಯೀನ್ ಸಂತ್ರಸ್ತೆಯನ್ನು ಮದುವೆಯಾಗುವುದಾಗಿ ಹೇಳಿದ್ದನು.

ನಡೆದಿದ್ದೇನು?: ಸಂತ್ರಸ್ತೆ ಧರ್ಮಪುರಿ ಅರೂರ್ ಮಂಡಲ ಮೊರಪ್ಪುರ್ ಗ್ರಾಮದವರಾಗಿದ್ದು, ತನ್ನ ವಿಧವೆ ತಾಯಿಯೊಂದಿಗೆ ವಾಸವಾಗಿದ್ದರು. ತನ್ನ ಅಜ್ಜ ಅನಾರೋಗ್ಯಕ್ಕೀಡಾಗಿದ್ದರಿಂದ ಆಸ್ಪತ್ರೆಗೆ ದಾಖಲಿಸಿದ್ದರು. ಹೀಗಾಗಿ ಸಂತ್ರಸ್ತೆ ತನ್ನ ಅಜ್ಜನನ್ನು ನೋಡಿಕೊಳ್ಳಲು ಪ್ರತಿದಿನ ಆಸ್ಪತ್ರೆಗೆ ಹೋಗುತ್ತಿದ್ದರು. ಆಗ ನಯೀಮ್ ನನ್ನು ಭೇಟಿ ಮಾಡುತ್ತಿದ್ದರು.

ಪರಿಚಯ ಸ್ನೇಹವಾಗಿದ್ದು, ನಯೀಮ್ ಏಪ್ರಿಲ್ 29 ರಂದು ಮದುವೆಯ ಪ್ರಸ್ತಾಪವನ್ನು ಮಾಡಿದ್ದಾನೆ. ಇದಕ್ಕೆ ಸಂತ್ರಸ್ತೆ ಒಪ್ಪಿಗೆ ಸೂಚಿಸಿದ್ದಾರೆ. ಬಳಿಕ ಆರೋಪಿ ನಯೀನ್ ಸೇಲಂನಲ್ಲಿ ತಾನು ಇದ್ದ ಲಾಡ್ಜ್ ಗೆ ಕರೆದುಕೊಂಡು ಹೋಗಿದ್ದಾನೆ. ಬಳಿಕ ರೂಮಿನಲ್ಲಿ ಆಕೆಗೆ ಮದ್ಯ ಬೆರಸಿರುವ ಕೂಲ್ ಡ್ರಿಂಕ್ ನನ್ನ ಕುಡಿಯಲು ಕೊಟ್ಟಿದ್ದಾನೆ. ಅದನ್ನು ಕುಡಿದ ಸಂತ್ರಸ್ತೆ ಪ್ರಜ್ಞಾಹೀನಳಾಗಿ ಬಿದ್ದಿದ್ದಾಳೆ. ಬಳಿಕ ನಯೀಮ್ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಅಲ್ಲದೇ ಆತ ತನ್ನ ಸಹೋದರ ನಫೀಜ್ ಮತ್ತು ಸ್ನೇಹಿತ ರಂಜಿತ್ ರನ್ನು ಲಾಡ್ಜ್ ಗೆ ಕರೆಸಿ ಅವರಿಂದಲೂ ಅತ್ಯಾಚಾರ ಮಾಡಿಸಿದ್ದಾನೆ.

rape video hydrabadh - kannadanaadi news

ಸಂತ್ರಸ್ತೆಗೆ ಪ್ರಜ್ಞೆ ಬಂದ ಮೇಲೆ ಆಕೆಯ ಬಳಿ ಇದ್ದ ಎಟಿಎಂ ಕಾರ್ಡ್ ಕಿತ್ತುಕೊಂಡು, ಈ ವಿಚಾರವನ್ನು ಯಾರಿಗಾದರೂ ಹೇಳಿದರೆ ನಿನ್ನ ತಾಯಿಯನ್ನು ಕೊಲೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ. ಬಳಿಕ ಸಂತ್ರಸ್ತೆ ಅಲ್ಲಿಂದ ತಪ್ಪಿಸಿಕೊಂಡು ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಿದ್ದಾರೆ. ಸದ್ಯಕ್ಕೆ ಮೂವರು ಆರೋಪಿಗಳನ್ನು ಪೊಳೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

👍👍 ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ 👍👍