2 ಲಕ್ಷ ಸಂಬಳ ತರುವ ಪತಿ ಬಿಟ್ಟು ಈತನ ಜೊತೆ ಓಡಿ ಬಂದ್ಲು ಮಹಿಳೆ..!

ಮಧ್ಯಪ್ರದೇಶದ ರಿವಾದಲ್ಲಿ ಮಹಿಳೆಯೊಬ್ಬಳು ನಾಪತ್ತೆಯಾಗಿದ್ದಳು. ಸ್ಥಳೀಯ ಕಾಲೇಜೊಂದರ ಅಧ್ಯಾಪಕರ ಪತ್ನಿ ಎರಡು ಮಕ್ಕಳ ತಾಯಿ ಬಗ್ಗೆ ಯಾವುದೇ ಮಾಹಿತಿ ಪತ್ತೆಯಾಗಿರಲಿಲ್ಲ. ಅಧ್ಯಾಪಕರು ಪೊಲೀಸರಿಗೆ ದೂರು ನೀಡಿದ್ದರು. ಮೊಬೈಲ್ ನಂಬರ್ ಮೂಲಕ ಮಹಿಳೆ ಬಿಹಾರ್ ನಲ್ಲಿದ್ದಾಳೆಂಬ ಸಂಗತಿ ಪೊಲೀಸರಿಗೆ ಗೊತ್ತಾಯ್ತು.

ಪೊಲೀಸ್ ಜೊತೆ ಅಲ್ಲಿಗೆ ಹೋದ ಅಧ್ಯಾಪಕರು ಬರಿಗೈನಲ್ಲಿ ಮನೆಗೆ ಬಂದಿದ್ದಾರೆ. ಫೇಸ್ಬುಕ್ ನಲ್ಲಿ ಯುವಕನನ್ನು ಪ್ರೀತಿ ಮಾಡಿ ತನ್ನಿಷ್ಟದಂತೆ ಆತನ ಜೊತೆ ಬಂದಿದ್ದೇನೆಂದು ಮಹಿಳೆ ಹೇಳಿದ್ದಾಳೆ. ಫೇಸ್ಬುಕ್ ನಲ್ಲಿ ಶುರುವಾದ ಸ್ನೇಹ ಪ್ರೀತಿಗೆ ತಿರುಗಿತ್ತಂತೆ. ಇಬ್ಬರು ಮಕ್ಕಳನ್ನು ಬಿಟ್ಟು ಮಹಿಳೆ ಬಿಹಾರಕ್ಕೆ ಓಡಿ ಬಂದಿದ್ದಾಳೆ.

ಅಧ್ಯಾಪಕರು ಪತ್ನಿ ಮನವೊಲಿಸಲು ಸಾಕಷ್ಟು ಪ್ರಯತ್ನ ಮಾಡಿದ್ದಾರೆ. ಪೊಲೀಸರು ಸಂಧಾನ ನಡೆಸಿದ್ದಾರೆ. ಆದ್ರೆ ಯಾವುದೂ ಪ್ರಯೋಜನಕ್ಕೆ ಬರಲಿಲ್ಲ. ಮಹಿಳೆ ಪ್ರೇಮಿ ಜೊತೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾಳೆ.

ತಿಂಗಳಿಗೆ 2 ಲಕ್ಷ ಸಂಬಳ, ಮುದ್ದಾದ ಮಕ್ಕಳು, ಸ್ವಂತ ಮನೆ ಹೊಂದಿದ್ದ ಮಹಿಳೆ ತಿಂಗಳಿಗೆ 8 ಸಾವಿರ ಸಂಬಳ ತರುವ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಹುಡುಗನಲ್ಲಿ ಏನು ನೋಡಿದ್ಲು ಎಂಬ ಪ್ರಶ್ನೆ ಎಲ್ಲರನ್ನು ಕಾಡ್ತಿದೆ. ಪ್ರೀತಿ ಕುರುಡು ಎಂಬುದು ಈಗ ಸತ್ಯ ಎನ್ನಿಸುತ್ತಿದೆ.

ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಕನ್ನಡನಾಡಿ.com ಪೇಜ್ ಲೈಕ್ ಮಾಡಿ..