ಮಹಿಳೆಯ ಪಕ್ಕದಲ್ಲಿ ಕುಳಿತು ಕುಚೇಷ್ಟೆ : ಮಹಿಳೆ ಮೇಲೆ ಕೈ ಹಾಕಿ ಏಟು ತಿಂದ ಪೇದೆ..!

ಮುಂಬೈ: ಪೊಲೀಸರು ಎದುರಿಗೆ ಬಂದ್ರೆ ನಾವು ಸೇಫ್​ ಅನ್ನೋ ಭಾವನೆ ಎಲ್ಲರಲ್ಲೂ ಬರಬೇಕು. ಆದ್ರೆ, ಪೊಲೀಸರೇ ದಾರಿ ತಪ್ಪಿದ್ರೆ ಬೇಲಿಯೇ ಎದ್ದು ಹೊಲ ಮೇಯ್ದಂತೆ ಅಲ್ವಾ..? ಮಹಿಳೆಯರ ಮೇಲೆ ಇತ್ತೀಚೆಗೆ ಕಾಮುಕರ ದೌರ್ಜನ್ಯ ಹೆಚ್ಚಾಗ್ತಿದೆ. ಕಾಮುಕರಿಗೆ ಕಡಿವಾಣ ಹಾಕಲು ಇರುವ ಖಾಕಿಯೇ ಆ ಹಾದಿ ಹಿಡಿದ್ರೆ ಸ್ತ್ರೀ ಎಲ್ಲಿಗೆ ಹೋಗಬೇಕು..? ಮುಂಬೈನ ರೇಲ್ವೇ ಪ್ಲಾಟ್ ಫಾರಂನಲ್ಲಿ ನಡೆದ ಘಟನೆ ನಿಜಕ್ಕೂ ನಾಗರೀಕ ಸಮಾಜವೇ ತಲೆ ತಗ್ಗಿಸುವಂತದ್ದು..

ಮಹಿಳೆ ಮೇಲೆ ಕೈ ಹಾಕಿ ಏಟು ತಿಂದ ಪೇದೆ..!

ಮುಂಬೈನ ರೇಲ್ವೇ ಪ್ಲಾಟ್​ ಫಾರಂನಲ್ಲಿ ಮಹಿಳೆಯೊಬ್ಬಳು ರೈಲಿಗಾಗಿ ಕಾಯುತ್ತಿದ್ದಳು. ಈ ವೇಳೆ ಮಹಿಳೆಯ ಪಕ್ಕಾ ಬಂದು ಕುಳಿತಿದ್ದ ರೇಲ್ವೇ ಪೇದೆ ಜಾನಿಗಿರ್​ ಆಕೆಯ ಮೇಲೆ ಕಣ್ಣು ಹಾಕಿದ್ದಾನೆ. ಬಳಿಕ ಮಹಿಳೆಯ ಮೈ ಕೈ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದಾನೆ. ಪೇದೆಯ ಕುಚೇಷ್ಟೆಯನ್ನ ಎದುರಿಗೆ ಕುಳತಿದ್ದವರು ಮೊಬೈಲ್​ನಲ್ಲಿ ಸೆರೆಹಿಡಿದಿದ್ದಾರೆ. ಜಾನಿಗಿರ್​ ಆಟಾಟೋಪ ಮಿತಿ ಮೀರಿದ್ದನ್ನ ಕಂಡು ಸ್ಥಳದಲ್ಲೇ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಧರ್ಮದೇಟು ಬೀಳ್ತಿದ್ದಂತೆ ಪೇದೆ ಜಾನಿಗಿರ್​ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಆದ್ರೆ, ಮೊಬೈಲ್​ನಲ್ಲಿ ಸೆರೆಯಾಗಿದ್ದ ವಿಡಿಯೋ ವೈರಲ್​ ಆಗುತ್ತಿದ್ದಂತೆ ಅದನ್ನೇ ಆಧಾರವನ್ನಾಗಿಟ್ಟುಕೊಂಡು ಸೆಂಟ್ರಲ್​​ ರೈಲೈ ಡಿವಿಷನಲ್​​ ಕಮೀಷನರ್ ಸಚಿನ್​ ಭಲೋಡೆ ಜಾನಿಗಿರ್​​ನನ್ನು ಸಸ್ಪೆಂಡ್​ ಮಾಡಿದ್ದಾರೆ. ಒಟ್ಟಾರೆ, ಜಾನಿಗಿರ್​ ಮೇಲೆ ಮಹಿಳೆ ದೂರು ನೀಡದಿದ್ರೂ ಅವಳಿಗಾದ ದೌರ್ಜನ್ಯಕ್ಕೆ ಸ್ಪಂದಿಸಿದ ವರಿಷ್ಠಾಧಿಕಾರಿ ನ್ಯಾಯ ಒದಗಿಸಿದ್ದಾರೆ. ವೈರಲ್ ವೀಡಿಯೋ ಇಲ್ಲಿ ನೋಡಿ..

ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಕನ್ನಡನಾಡಿ.com ಪೇಜ್ ಲೈಕ್ ಮಾಡಿ..