ದೆಹಲಿಯ ನಡುರಸ್ತೆಯಲ್ಲಿ ಹೆಣವಾಗಿ ಪತ್ತೆಯಾದ ಸೇನಾಧಿಕಾರಿಯ ಪತ್ನಿ ..!

ನವದೆಹಲಿ: ಸೇನೆಯ ಮೇಜರ್​ರೊಬ್ಬರ ಪತ್ನಿಯನ್ನು ಕೊಲೆ ಮಾಡಿ ನಂತರ ಶವವನ್ನು ರಸ್ತೆಯಲ್ಲಿ ಬಿಸಾಡಿ ಹೋಗಿರುವ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ. ದಹೆಲಿಯ ಕಂಟೋನ್ಮೆಂಟ್​ ಮೆಟ್ರೋ ಸ್ಟೆಷನ್ ​​ಬಳಿಯ ರಸ್ತೆಯಲ್ಲಿ ಸೇನಾಧಿಕಾರಿಯ ಪತ್ನಿ ಶವವಾಗಿ ಪತ್ತೆಯಾಗಿದ್ದಾರೆ.

ಕುತ್ತಿಗೆ ಸೀಳಿ ಕಾರು ಹರಿಸಿದ್ದರು..!

ಸೇನಾಧಿಕಾರಿಯ ಪತ್ನಿ ನಿನ್ನೆ ಫಿಸಿಯೋಥೆರಪಿ ಸೆಷನ್​ಗಾಗಿ ಪತಿಗೆ ನೀಡಿದ್ದ ಇಲಾಖೆಯ ಕಾರಿನಲ್ಲೇ ತೆರಳಿದ್ದರು. ಕಾರಿನ ಚಾಲಕ ​ಅವರನ್ನು ಆಸ್ಪತ್ರೆಯ ಬಳಿ ಬಿಟ್ಟು ವಾಪಸ್​ ಬಂದಿದ್ದ. ಬಳಿಕ ವಾಪಸ್​ ಕರೆದುಕೊಂಡು ಬರಲು ಹೋದಾಗ ಆಕೆ ಆಸ್ಪತ್ರೆಗೆ ಬಂದೇ ಇರಲಿಲ್ಲ ಎಂಬ ಮಾಹಿತಿ ಗೊತ್ತಾಗಿದೆ.

ಅರ್ಧಗಂಟೆಯ ಬಳಿಕ ಸ್ಥಳೀಯ ಪೊಲೀಸರಿಗೆ ರಸ್ತೆಯಲ್ಲಿ ಮಹಿಳೆಯ ಶವ ಬಿದ್ದಿರುವ ಸುದ್ದಿಯ ಬಗ್ಗೆ ಕರೆ ಬಂದಿದೆ. ಸ್ಥಳಕ್ಕೆ ತೆರಳಿ ನೋಡಿದಾಗ ಮೇಜರ್​ ಪತ್ನಿಯ ಕುತ್ತಿಗೆ ಸೀಳಿ ಹತ್ಯೆ ಮಾಡಲಾಗಿತ್ತು. ಇನ್ನು, ದುಷ್ಕರ್ಮಿಗಳು ಮೇಜರ್​​ ಪತ್ನಿಯ ಕುತ್ತಿಗೆ ಸೀಳಿ ನಂತರ ಆಕೆಯ ಮೇಲೆ ಕಾರು ಹರಿಸಿದ್ದಾರೆ. ಅಪಘಾತವೆಂದು ಬಿಂಬಿಸಲು ಹಂತಕರು ಹಾಗೇ ಮಾಡಿರಬಹದು ಅಂತ ಪೊಲೀಸರು ಶಂಕಿಸಿದ್ದಾರೆ.

ಅಲ್ಲದೇ, ಚಾಲಕ ಆಕೆಯನ್ನು ಆಸ್ಪತ್ರೆಗೆ ಬಿಟ್ಟು ಹೋದ ಬಳಿಕ ಆಕೆ ಆಸ್ಪತ್ರೆಯಿಂದ ಬೇರೊಂದು ಕಾರಿನಲ್ಲಿ ತೆರಳಿರುವ ಬಗ್ಗೆಯೂ ಮಾಹಿತಿ ಲಭ್ಯವಾಗಿದೆ. ಹಂತಕರ ಬಗ್ಗೆ ಮಾಹಿತಿ ಕಲೆ ಹಾಕುತ್ತಿರುವ ಪೊಲೀಸರು ಶೀಘ್ರವೇ ಆತನನ್ನು ಹಿಡಿಯುವ ಭರವಸೆ ನೀಡಿದ್ದಾರೆ.

ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಕನ್ನಡನಾಡಿ.com ಪೇಜ್ ಲೈಕ್ ಮಾಡಿ..