ಶಿಶುಗಳನ್ನ ರಸ್ತೆಯಲ್ಲಿ ಬಿಸಾಡೋದು ನೋಡಿದ್ರೆ ಎದೆ ಝಲ್​ ಎನ್ನುತ್ತೆ..! ವೀಡಿಯೋ ನೋಡಿ..

ಉತ್ತರಪ್ರದೇಶ: ಕೇರಳದಲ್ಲಿ 2 ದಿನದ ಹಸುಗೂಸನ್ನ ಪೋಷಕರೇ ಚರ್ಚ್​ವೊಂದರ ಆವರಣದಲ್ಲಿ ಎಸೆದು ಹೋಗಿದ್ದ ಮನಕಲಕುವ ಘಟನೆಯೇ ಇನ್ನು ಜನರ ಚಿತ್ತದಿಂದ ಆರಿಲ್ಲ.

ಅಷ್ಟರಲ್ಲಿ ಇಂತಹುದೇ ಮತ್ತೊಂದು ಘಟನೆ ಉತ್ತರಪ್ರದೇಶ ಸಾಕ್ಷಿಯಾಗಿದೆ.

ಉತ್ತರ ಪ್ರದೇಶದ ಮುಜಾಫರ್​​ ನಗರದಲ್ಲಿ ಮಹಿಳೆಯೊಬ್ಬಳು ನವಜಾತ ಶಿಶುವೊಂದನ್ನ ಕಾರಿನಲ್ಲಿ ತೆಗೆದುಕೊಂಡು ಬಂದು ರಸ್ತೆ ಬದಿ ಎಸೆದು ಹೋಗಿದ್ದಾಳೆ. ಸ್ಯಾಂಟ್ರೋ ಕಾರ್​​ನಲ್ಲಿ ಬಂದಿದ್ದ ಮಹಿಳೆ ರಸ್ತೆಯಲ್ಲಿ ಕಾರ್​​ನ ವಿಂಡೋ ಓಪನ್​ ಮಾಡಿ, ಮಗುವನ್ನು ಎಸೆದು ಹೋಗಿದ್ದಾಳೆ. ಈ ದೃಶ್ಯ ಅಲ್ಲಿನ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ಇನ್ನೂ ಮಹಿಳೆ ಬಿಟ್ಟು ಹೋಗಿರುವ ಮಗುವಿನ ಸ್ಥಿತಿ ಚಿಂತಾಜನಕವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮತ್ತೊಂದೆಡೆ ಪೊಲೀಸರು ಮಗು ಬಿಟ್ಟು ಹೋದ ಮಹಿಳೆಗಾಗಿ ಹುಡುಕಾಟ ನಡೆಸ್ತಿದ್ದಾರೆ.

ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಕನ್ನಡನಾಡಿ.com ಪೇಜ್ ಲೈಕ್ ಮಾಡಿ..