ಬಿಗ್ ಬ್ರೇಕಿಂಗ್: ಗೌರಿ ಲಂಕೇಶ್ ಗೆ ಗುಂಡಿಟ್ಟು ಹತ್ಯೆ ಮಾಡಿದ್ದ ಆರೋಪಿ ಅರೆಸ್ಟ್..! ಯಾರು ಆ ಕಿರಾತಕ ? ಇಲ್ಲಿದೆ ಡೀಟೇಲ್ಸ್

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮತ್ತೊಬ್ಬ ಆರೋಪಿ ಪರಶುರಾಮ್ ವಾಗ್ಮೋರೆ(26)ಯನ್ನ ಎಸ್‌ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಮಹಾರಾಷ್ಟ್ರದಲ್ಲಿ ಪರಶುರಾಮ್ ವಾಗ್ಮೋರೆಯನ್ನ ಅರೆಸ್ಟ್ ಮಾಡಲಾಗಿದೆ. ವಿಜಯಪುರ ಜಿಲ್ಲೆ ಸಿಂದಗಿ ಮೂಲದವನಾದ ಪರಶುರಾಮ್‌ನನ್ನ ಎಸ್‌ಐಟಿ  3ನೇ ಎಸಿಎಂಎಂ ಕೋರ್ಟ್‌ಗೆ ಹಾಜರುಪಡಿಸಿದೆ.

SIT ವಿಚಾರಣೆ ವೇಳೆ  ಪರಶುರಾಮ್ ತಾನೇ ಗೌರಿಗೆ ಗುಂಡಿಕ್ಕಿರುವುದಾಗಿ  ತಪ್ಪೊಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ಬಂಧಿತ ಆರೋಪಿಯನ್ನ  3ನೇ ಎಸಿಎಂಎಂ ಕೋರ್ಟ್‌ಗೆ ಹಾಜರು ಪಡಿಸಲಾಗಿದೆ. 14 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡುವಂತೆ ತನಿಖಾಧಿಕಾರಿಗಳು ಕೋರ್ಟ್‌ಗೆ ಮನವಿ ಸಲ್ಲಿಸಿದ್ದಾರೆ.

ಕೋರ್ಟ್‌ನಲ್ಲಿ ನ್ಯಾಯಾಧೀಶರು ವಕೀಲರನ್ನು ನೇಮಕ ಮಾಡಬೇಕಾ ಎಂದು ಪರಶುರಾಮ್‌ಗೆ ಪ್ರಶ್ನೆ ಹಾಕಲಾಗಿದೆ. ಈ ವೇಳೆ ಆರೋಪಿ ಪರಶುರಾಮ್ ನಾನೇ ವಾದ ಮಾಡ್ತೀನಿ ಅಂತಾ ಉತ್ತರಿಸಿದ್ದಾನೆ.

ಗೌರಿ ಹತ್ಯೆ ಪ್ರಕರಣದಲ್ಲಿ ಪರಶುರಾಮ್ ಪಾತ್ರವೇನು?

ಸದ್ಯ ಎಸ್ ಐ ಟಿ ಖಚಿತವಾಗಿ ಪ್ರಕರಣದಲ್ಲಿ ಪರಶುರಾಮ್ ಪಾತ್ರದ ಏನು ಎಂದು ಖಚಿತಪಡಿಸಿಲ್ಲ. ಆದ್ರೆ ಮನೋಹರ ಯಡವೆ ನಿಯೋಜನೆಯಂತೆ ಪರಶುರಾಮ್ ಗೌರಿ ಹತ್ಯೆಯನ್ನ ಮಾಡಿದ್ದ ಎಂದು ಕೆಲ ಮೂಲಗಳು ಹೇಳುತ್ತಿವೆ. ಅಲ್ಲದೆ ಎಸ್ ಐ ಟಿ ವಶಕ್ಕೆ ಪಡೆದಿರುವ ಸಿಸಿಟಿವಿ ದೃಶ್ಯಾವಳಿ ಚಿತ್ರಗಳಿಗೂ ಸಾಮ್ಯತೆ ಇದೆ ಎನ್ನಲಾಗುತ್ತಿದೆ. ಸದ್ಯ ಆರೋಪಿಯನ್ನ ೧೪ ದಿನಗಳ ಕಸ್ಟಡಿಗೆ ಪಡೆದಿರುವ ಎಸ್ ಐ ಟಿ ತನಿಖೆ ಚುರುಕುಗೊಳಿಸಿದೆ. ತನಿಖೆಯ ನಂತರವಷ್ಟೇ ಪರುಶರಾಮ್ ನಿಖರ ಪಾತ್ರ ಗೋತ್ತಾಗಬೇಕಿದೆ….

ಮನೋಹರ್ ಯಡವೇ ಕೀ ಪರ್ಸನ್..?

ಪ್ರಕರಣದಲ್ಲಿ ಬಂಧಿತನಾಗಿರುವ ಮನೋಹರ ಯಡವೇ ಪ್ರಕರಣದ ಕೀ ಪರ್ಸನ್ ಎಂದು ಹೇಳಲಾಗುತ್ತಿದೆ. ಆತನ ಮಾಹಿತಿ ಮೇರೆಗೆ ಈಗ ಪರಶುರಾಮ್ ಬಂಧನವಾಗಿದೆ ಅಲ್ಲದೆ ಪರುಶರಾಮ್ ಗೌರಿ ಹತ್ಯೆಗೆ ಸಂಬಂಧಿಸಿದಂತೆ ಎಲ್ಲಾ ಆರೋಪಿಗಳನ್ನು ಒಟ್ಟುಗೋಡಿಸಿದ್ದ ಎಂದು ಎಸ್ ಐ ಟಿ ಮೂಲಗಳು ಹೇಳುತ್ತಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ಸ್ಪೋಟಕ ಮಾಹಿತಿ ಹೊರಬರಬೇಕಿದೆ.

ಗೌರಿ ಕೊಂದ ಪರಶುರಾಮ್ ವಾಗ್ಮೋರೆ ಯಾರು..?

ಪರಶುರಾಮ್ ವಾಗ್ಮೋರೆ​ ಮೂಲತಃ ಸಿಂದಗಿಯವನು. ಹಿಂದೂ ಸಂಘಟನೆಯ ಪರಶುರಾಮ್​ ಕಾರ್ಯಕರ್ತನಾಗಿದ್ದ . 2012ರಲ್ಲಿ ಸಿಂದಗಿ ತಾಲೂಕು ಕಚೇರಿ ಬಳಿ ಪಾಕಿಸ್ತಾನ ಬಾವುಟ ಹಾರಿಸಿದ್ದ. ಬಾವುಟ ಹಾರಿಸಿದ ಪ್ರಕರಣದಲ್ಲಿ ಪರಶುರಾಮ್​ ಕೂಡ ಒಬ್ಬ ಆರೋಪಿಯಾಗಿದ್ದ ಎನ್ನಲಾಗಿದೆ.

ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಕನ್ನಡನಾಡಿ.com ಪೇಜ್ ಲೈಕ್ ಮಾಡಿ..