15 ವರ್ಷದ ಬಾಲಕನ ಮೇಲೆ ಅತ್ಯಾಚಾರವೆಸಗಿದಳಾ ಮಧ್ಯವಯಸ್ಕ ಮಹಿಳೆ..? ಭಾರತದಲ್ಲೇ ಹಿಂಗಾದ್ರೆ ಹೆಂಗೆ..!

ಆಂಧ್ರಪ್ರದೇಶ: 45ವರ್ಷದ ಮಹಿಳೆಯೊಬ್ಬಳು 15ವರ್ಷದ ಬಾಲಕನ ಮೇಲೆ ಅತ್ಯಾಚಾರವೆಸಗಿರುವ ಘಟನೆ ವಿಜಯವಾಡದ ವಾಂಬೆ ಕಾಲೋನಿಯಲ್ಲಿ ನಡೆದಿದೆ.

ಬಾಲಕನ ಕುಟುಂಬ ಮಹಿಳೆ ವಿರುದ್ಧ ಕಳೆದ ಶುಕ್ರವಾರ ದೂರು ದಾಖಲಿಸಿದ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ. ಇನ್ನು ಮಹಿಳೆಯನ್ನ ಪೊಲೀಸರು ಬಂಧಿಸಿದ್ದು, ಆಕೆಯನ್ನ ನ್ಯಾಯಾಂಗ ಬಂಧನಕ್ಕೊಳಪಡಿಸಿದ್ದಾರೆ.

ಇನ್ನು ಪೊಲೀಸರ ಮಾಹಿತಿ ಪ್ರಕಾರ, ಆರೋಪಿಯ ಮಹಿಳೆ ಹಾಗೂ ಬಾಲಕನ ಮನೆ ಅಕ್ಕಪಕ್ಕದಲ್ಲೇ ಇದ್ದು, ಪರಸ್ಪರ ಗೊತ್ತಿರುವವರಾಗಿದ್ದರು. ಆರೋಪಿ ಮಹಿಳೆಯ ಗಂಡ ಸತ್ತು ಏಳು ವರ್ಷಗಳಾಗಿತ್ತು ಹಾಗೂ ಆಕೆ ತನ್ನಿಬ್ಬರು ಹೆಣ್ಣು ಮಕ್ಕಳಿಗೂ ಮದುವೆ ಮಾಡಿಕಳಿಸಿದ್ದರಿಂದ ಒಂಟಿಯಾಗಿ ಜೀವಿಸುತ್ತಿದ್ದಳು.

ಮೇ 5ರಂದು ಪಕ್ಕದ ಮನೆಯ ಬಾಲಕನನ್ನ ತನ್ನ ಮನೆ ಒಳಕ್ಕೆ ಕರೆದ ಮಹಿಳೆ ಬಾಲಕನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾಳಂತೆ. ಇದರಿಂದ ಗಾಬರಿಗೊಂಡ ಬಾಲಕ ತನ್ನ ಅಜ್ಜಿ ಊರಿಗೆ ಓಡಿಹೋಗಿದ್ದಾನೆ. ಒಂದು ತಿಂಗಳ ನಂತರ ವಾಪಸ್ಸಾಗಿದ್ದಾನೆ. ಇನ್ನು ಈ ಹುಡುಗ ನಡೆದ ಘಟನೆಯನ್ನ ಮನೆಯವರಿಗೆ ತಿಳಿಸಿಲ್ಲವೆಂದು ದೈರ್ಯಗೊಂಡ ಮಹಿಳೆ, ಜೂನ್​ 7ರಂದು ಆತನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾಳೆ. ಈ ವೇಳೆ ಸ್ಥಳಕ್ಕೆ ದಾವಿಸಿದ ಬಾಲಕನ ತಾಯಿ ಮಹಿಳೆಯೊಂದಿಗೆ ಜಗಳಕ್ಕಿಳಿದಿದ್ದಾಳೆ.

ಇಬ್ಬರ ನಡುವೆ ವಾದ ವಿವಾದಗಳಾದ ಬಳಿಕ ಬಾಲಕ, ಮೇ 5 ರಂದು ನಡೆದ ಘಟನೆಯನ್ನು ವಿವರಿಸಿದ್ದಾರೆ. ಬಳಿಕ ಬಾಲಕನ ತಾಯಿ ಸ್ಥಳೀಯ ಪೊಲೀಸ್​ ಠಾಣೆಗೆ ತೆರಳಿ ದೂರು ದಾಖಲಿಸಿದ್ದು, ದೂರಿನನ್ವಯ ಪೊಲೀಸರು POCSO ಖಾಯ್ದೆಯಡಿ ದೂರು ದಾಖಲಿಸಿಕೊಂಡು ಮಹಿಳೆಯನ್ನ ಬಂಧಿಸಿದ್ದಾರೆ.

ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಕನ್ನಡನಾಡಿ.com ಪೇಜ್ ಲೈಕ್ ಮಾಡಿ..