ಮಹಿಳೆಯರಿಗೆ ಸೇಫ್ ಅಲ್ಲ ‘ಮೆಟ್ರೋ’ : ದಟ್ಟ ಜನಸಂದಣಿಯನ್ನೂ ಲೆಕ್ಕಿಸದ ಕಾಮುಕ ಮಾಡಿದ್ದಾದರೂ ಏನು ಗೊತ್ತಾ.?

ಬೆಂಗಳೂರು: ಸಿಲಿಕಾನ್ ಸಿಟಿ ಮಹಿಳೆಯರಿಗೆ ಮೆಟ್ರೋನೂ ಸೇಫ್ ಅಲ್ಲ ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿ. ಕಾಮುಕನೊಬ್ಬ ಮೆಟ್ರೋದಲ್ಲಿ ಯುವತಿ ಜೊತೆ ಅಸಭ್ಯವಾಗಿ ವರ್ತಿಸಿರೋ ಘಟನೆ ರಾಜಾಜಿ ನಗರದಿಂದ ಬನಶಂಕರಿ ಹೋಗುವ ಮೆಟ್ರೋದಲ್ಲಿ ನಡೆದಿದೆ.

ಮಹಿಳೆಯರಿಗೆ ಅತ್ಯಂತ ಸುರಕ್ಷಿತ ಸಾರಿಗೆ ಎಂದು ಹೆಸರಾಗಿದ್ದ ಮೆಟ್ರೋದಲ್ಲಿ ಕಿರುಕುಳ ಜಾಸ್ತಿಯಾಗ್ತಿದೆ.  ಮೆಟ್ರೋದಲ್ಲಿ ಯುವತಿಯನ್ನು ಕಾಮುಕ ಅಂಟಿಕೊಂಡು ನಿಂತಿದ್ದ. ಅಲ್ಲದೇ ತನ್ನ ಪ್ಯಾಂಟ್ ಜಿಪ್ ಬಿಚ್ಚಿ ಅಸಭ್ಯವಾಗಿ ವರ್ತಿಸಿದ್ದಾನೆ ಎನ್ನಲಾಗಿದೆ.

ಘಟನೆ ರಾಜಾಜಿನಗರದಿಂದ ಬನಶಂಕರಿಗೆ ಹೋಗುವ ಮೆಟ್ರೋದಲ್ಲಿ ನಡೆದಿದೆ. ಸಂಜೆ ಸುಮಾರು 5 ಗಂಟೆ ವೇಳೆಗೆ 30 ವರ್ಷದ ಮಹಿಳೆ ಮೆಟ್ರೋ ಹತ್ತಿದ್ದಾಳೆ. ಮಹಿಳೆಯನ್ನು ಅಂಟಿ ನಿಂತಿದ್ದ ಆರೋಪಿ ನಿಧಾನವಾಗಿ ಕಿರುಕುಳ ನೀಡಲು ಶುರು ಮಾಡಿದ್ದಾನೆ. ಆರಂಭದಿಂದಲೇ ಯುವಕ ಕಿರುಕುಳ ಕೊಡ್ತಿದ್ದು, ಮೆಜೆಸ್ಟಿಕ್ ಬರ್ತಿದ್ದಂತೆ ಕಿರುಕುಳ ಹೆಚ್ಚಾಗಿದೆ. ಈ ಬಗ್ಗೆ ಮಹಿಳೆ ಒಮ್ಮೆ ವಾರ್ನ್ ಮಾಡಿದ್ದಾಳೆ ಎನ್ನಲಾಗಿದೆ.

ಮೆಟ್ರೋ ರೈಲು ಜಯನಗರ ತಲುಪುತ್ತಿದ್ದಂತೆ ಕಿರುಕುಳ ಜಾಸ್ತಿಯಾಗಿದೆ. ಮಹಿಳೆ ಹಿಂತಿರುಗಿ ನೋಡಿದ್ದಾಳೆ. ಆರೋಪಿ ವರ್ತನೆ ಆಕೆಯನ್ನು ದಂಗಾಗಿಸಿದೆ. ಆತನ ಪ್ಯಾಂಟ್ ಜಿಪ್ ತೆಗೆದಿದ್ದು, ಇದನ್ನು ನೋಡಿದ ಮಹಿಳೆ ಕೂಗಿಕೊಂಡಿದ್ದಾಳೆ.

ಆದ್ರೂ ಯಾವುದಕ್ಕೂ ಜಗ್ಗದ ಆಸಾಮಿ ತನ್ನ ನೀಚ ಬುದ್ಧಿಯನ್ನ ಮುಂದುವರಿಸಿದ್ದ. ಯುವತಿ ಕೂಗಲು ಶುರು ಮಾಡಿದಾಗ ಪ್ರಯಾಣಿಕರು ಆಕೆಯ ನೆರವಿಗೆ ಬಂದಿದ್ದಾರೆ. ಪ್ರಯಾಣಿಕರು ಆರೋಪಿಯನ್ನು ಮೆಟ್ರೋದಿಂದ ಇಳಿಸಿ ಥಳಿಸಿದ್ದಾರೆ. ಬಳಿಕ ಕಾಮುಕನನ್ನ ಪೊಲೀಸರಿಗೆ ಒಪ್ಪಿಸಿದ್ದಾರೆ.

👍👍 ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ 👍👍