ರಶೀದ್ ಖಾನ್ ದಾಳಿಗೆ ಬಾಂಗ್ಲಾ ಉಡೀಸ್ : ಟಿ-20 ಸರಣಿ ಕ್ಲೀನ್ ಸ್ವೀಪ್ ಮಾಡಿ ಇತಿಹಾಸ ಬರೆದ ಅಫ್ಘಾನಿಸ್ತಾನ..!

ಐಪಿಎಲ್​ ಕ್ರಿಕೆಟ್​​ನಲ್ಲಿ ದಿಗ್ಗಜರು ಹುಬ್ಬೇರಿಸುವಂತಹ ಪ್ರದರ್ಶನ ನೀಡಿದ್ದ ಅಫ್ಘಾನಿಸ್ತಾನದ ಸ್ಪಿನ್​ ಮಾಂತ್ರಿಕ​​​​​ ರಶೀದ್​ ಖಾನ್​, ಬಾಂಗ್ಲಾದೇಶದ 3ನೇ 20 ಪಂದ್ಯದಲ್ಲಿ  ಮ್ಯಾಚ್ ವಿನ್ನಿಂಗ್ ಪರ್ಫಾರ್ಮೆನ್ಸ್ ನೀಡಿದ್ದಾರೆ. ನಿನ್ನೆ ನಡೆದ ಬಾಂಗ್ಲಾ ವಿರುದ್ಧದ ಟಿ20 ಪಂದ್ಯದಲ್ಲಿ ರಶೀದ್​ ಖಾನ್​​ ಎಸೆದ ಕೊನೆಯ ಓವರ್​​​ನಿಂದ ಅಫ್ಘಾನಿಸ್ತಾನ ಭರ್ಜರಿ ಜಯಗಳಿಸಿದೆ. ಈ ಮೂಲಕ ಬಾಂಗ್ಲಾ ತಂಡವನ್ನ 3 ಟಿ20 ಪಂದ್ಯಗಳನ್ನ ಕ್ಲೀನ್ ಸ್ವಿಪ್ ಮಾಡಿತು.

ದಿನ ದಿನಕ್ಕೂ ಮೊನಚಾಗುತ್ತಿದೆ ರಶೀದ್​ ಖಾನ್ ಸ್ಪೆಲ್​​​..!​​​

ಟಾಸ್​ ಗೆದ್ದು ಬ್ಯಾಟಿಂಗ್​ ಆರಂಭಿಸಿದ ಅಫ್ಘಾನಿಸ್ತಾನ 6 ವಿಕೆಟ್​​ಗಳ ನಷ್ಟಕ್ಕೆ 145 ರನ್​ ಗಳಿಸಿತ್ತು. ಸಾಧಾರಣ ಗುರಿ ಬೆನ್ನತ್ತಿದ ಬಾಂಗ್ಲಾ, 144 ರನ್​ಗಳಿಸಲಷ್ಟೇ ಶಕ್ತವಾಯಿತು. ಪರಿಣಾಮ ಅಫ್ಘಾನಿಸ್ತಾನ 1 ರನ್ ಅಂತರದಿಂದ ರೋಚಕ ಗೆಲುವು ಸಾಧಿಸಿತು. ವಿಷ್ಯಾ ಅಂದ್ರೆ, ಕೊನೆಯ ಓವರ್​ನಲ್ಲಿ ಬಾಂಗ್ಲಾ ಗೆಲುವಿಗೆ ಬೇಕಾಗಿದ್ದು ಕೇವಲ 9 ರನ್​ಗಳು. ಆ ವೇಳೆ ಬಾಂಗ್ಲಾದ ಮೊಹಮ್ಮದುಲ್ಲಾ ಪಿಚ್​​ನಲ್ಲಿ ಭದ್ರವಾಗಿ ನೆಲೆಯೂರಿದ್ದರು.

ಆದ್ರೆ, 20ನೇ ಓವರ್​​ನಲ್ಲಿ ದಾಳಿಗಿಳಿದ ರಶೀದ್​​ 1 ವಿಕೆಟ್​ ಕಬಳಿಸಿ ಕೇವಲ 8 ರನ್​ ಬಿಟ್ಟುಕೊಟ್ಟರು. ಅದರಲ್ಲೂ, ಕೊನೆಯ ಎಸೆತದಲ್ಲಿ ಬಾಂಗ್ಲಾ ಗೆಲುವಿಗೆ ಕೇವಲ 3 ರನ್ ಬೇಕಾಗಿತ್ತು. ಈ ವೇಳೇ ಸ್ಟ್ರೈಕ್​ನಲ್ಲಿದ್ದ ಹಕ್ಯೂ ಭಾರಿ ಹೊಡೆತಕ್ಕೆ ಯತ್ನಿಸಿ ವಿಫಲರಾದ್ರು. ಹೀಗಾಗಿ 3 ರನ್​ ಕದಿಯಲು ಪ್ರಯತ್ನಿಸಿದ ಹಕ್ಯೂ ಹಾಗೂ ಮೊಹಮ್ಮದುಲ್ಲಾ ಗಳಿಸಿದ್ದು ಮಾತ್ರ 2 ರನ್. 3ನೇ ರನ್​​​​ಗಳಿಸಲು ಪ್ರಯತ್ನಿಸಿದರಾದರೂ ಅಷ್ಟೊತ್ತಿಗಾಗಲೇ ಮೊಹಮುದಲ್ಲಾ ರನೌಟ್​ ಆಗಿದ್ದರು. ಪರಿಣಾಮ ಅಫ್ಘಾನಿಸ್ತಾನ 1 ರನ್​ನಿಂದ ಜಯಗಳಿಸಿತು. ಈ ಮೂಲಕ ವಿಶ್ವ ಕ್ರಿಕೆಟ್​​ನಲ್ಲಿ ತಾನೊಬ್ಬ ಪ್ರಭಾವಿ ಬೌಲರ್​ ಅನ್ನೋದನ್ನ ಮತ್ತೊಮ್ಮೆ ಸಾಬೀತು ಪಡಿಸಿದ್ರು.

ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಕನ್ನಡನಾಡಿ.com ಪೇಜ್ ಲೈಕ್ ಮಾಡಿ..