ಇನ್ಮುಂದೆ ಲೈವ್ ಬ್ಯಾಂಡ್ ನಲ್ಲಿ ಡ್ಯಾನ್ಸರ್ ಮೇಲೆ ಹಣ ಚೆಲ್ಲುವಂತಿಲ್ಲ : ಲೈವ್ ಬ್ಯಾಂಡ್ ನಡೆಸಲು ಪೊಲೀಸ್ರು ಹಾಕಿರುವ ರೂಲ್ಸ್..! ಏನೆಲ್ಲ ನಿಯಮಗಳಿವೆ ? ಇಲ್ಲಿದೆ ಡೀಟೇಲ್ಸ್.

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಅನಧಿಕೃತವಾಗಿ, ಪರವಾನಗಿ ರಹಿತ ಲೈವ್ ಬ್ಯಾಂಡ್​ಗಳ ಹಾವಳಿ ಹೆಚ್ಚಾದ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತರು ಎಲ್ಲಾ ಡಿಸಿಪಿ ಮತ್ತು ಠಾಣಾ ಪೊಲೀಸರಿಗೆ ಖಡಕ್ ವಾರ್ನಿಂಗ್ ರವಾನಿಸಿದ್ದಾರೆ. ಇತ್ತೀಚಿನ ಸುಪ್ರಿಂ ಕೋರ್ಟ್ ಆದೇಶದಂತೆ ಪರವಾನಗಿ ಇಲ್ಲದ ಲೈವ್ ಬ್ಯಾಂಡ್​ಗಳನ್ನು ಕ್ಲೋಸ್ ಮಾಡಿಸುವಂತೆ ಸೂಚನೆ ನೀಡಿದ್ದಾರೆ.

ಆದರಂತೆ ಅಶೋಕ ನಗರ, ಕಬ್ಬನ್ ಪಾರ್ಕ್ ಠಾಣಾ ವ್ಯಾಪ್ತಿ ಸೇರಿದಂತೆ ಅನೇಕ ಕಡೆ ಪರವಾನಗಿ ರಹಿತ ಲೈವ್ ಬ್ಯಾಂಡ್​ಗಳನ್ನು ಕ್ಲೋಸ್ ಮಾಡಿಸಿದ್ದಾರೆ. ಅಲ್ಲದೇ ಎಲ್ಲಾ ಬಾರ್ ಆಂಡ್ ರೆಸ್ಟೋರೆಂಟ್ ಗಳಿಗೆ ಸೂಕ್ತ ದಾಖಲಾತಿ ನೀಡಿ ಪರವಾನಗಿ ಪಡೆಯುವಂತೆ ಸೂಚಿಸಿದ್ದಾರೆ. ಒಂದು ವೇಳೆ ಇದನ್ನು ಗಂಭೀರವಾಗಿ ಪರಿಗಣನೆಗೆ ತೆಗೆದುಕೊಳ್ಳದಿದ್ದರೆ, ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ವಾರ್ನಿಂಗ್ ನೀಡಿದ್ದಾರೆ.

ಲೈವ್ ಬ್ಯಾಂಡ್ ನಡೆಸಲು ಪೊಲೀಸ್ರು ಹಾಕಿರುವ ರೂಲ್ಸ್..!
ಯುವತಿಯರ ಬಳಿ ಅಶ್ಲೀಲ ಡ್ಯಾನ್ಸ್ ಮಾಡಿಸುವಂತಿಲ್ಲ
ಬಾರ್ ಗಳಲ್ಲಿ ಕೆಲಸ ಮಾಡುವ ಯುವತಿಯರಿಗೆ ಐಡಿ ಕಾರ್ಡ್ ಕಡ್ಡಾಯ
ಬಾರ್​ನಲ್ಲಿ ಡ್ಯಾನ್ಸ್ ಮಾಡುವಾಗ ಡ್ರೆಸ್ ಕೋಡ್ ಕಡ್ಡಾಯ
ಡ್ಯಾನ್ಸ್ ಮಾಡುವ ಯುವತಿಯರ ಮೇಲೆ ಹಣ ಚೆಲ್ಲುವಂತಿಲ್ಲ
24 ಗಂಟೆ ಬಾರ್ ಸಿಸಿ ಕ್ಯಾಮರಾ ಸದಾ ಕೆಲಸ ಮಾಡುತ್ತಿರಬೇಕು
ಪ್ರತಿನಿತ್ಯ ಸಿಸಿಟಿವಿ ರೆಕಾರ್ಡ್ ದೃಶ್ಯಗಳನ್ನು ಪೊಲೀಸರಿಗೆ ಕೊಡಬೇಕು
ಪ್ರತಿ ಡ್ಯಾನ್ಸರ್ ಕೂಡ ಐಡಿ ಕಾರ್ಡ್ ಸದಾ ಜೊತೆಯಲ್ಲಿಟ್ಟರಬೇಕು
ಒಂದು ಪರಾವನಗಿ ಪಡೆದು, ಎರಡೆರಡು ಶಾಪ್ ನಡೆಸಬಾರದು
ರೆಸ್ಟೋರೆಂಟ್ ಗೆ ಲೈಸನ್ಸ್ ಪಡೆದು ಅಲ್ಲಿ ಬಾರ್ ನಡೆಸುವಂತಿಲ್ಲ

ಹೀಗೆ ಹತ್ತು ಹಲವು ರೂಲ್ಸ್ ಗಳನ್ನು ಹಾಕಿ ಪೊಲೀಸ್ರು ಲೈವ್ ಬ್ಯಾಂಡ್ ನಡೆಸಲು ಪರವಾನಗಿ ನೀಡಿದ್ದಾರೆ. ಇದರಲ್ಲಿ ಒಂದು ಮಿಸ್ ಆದ್ರೂ ಕ್ಲೋಸ್ ಮಾಡುವ ಎಲ್ಲಾ ಅಧಿಕಾರ ಪೊಲೀಸ್ರಿಗೆ ಇದೆ. ಈ ನಡುವೆ ಅಶೋಕನಗರ, ಕಬ್ಬನ್ ಪಾರ್ಕ್, ಇಂದಿರಾ ನಗರ, ಬ್ರಿಗೇಡ್ ರೋಡ್, ಮೆಜೆಸ್ಟಿಕ್, ಕೋರಮಂಗಲ ಸೇರಿದಂತೆ ಹಲವೆಡೆ ರೂಲ್ಸ್ ಬ್ರೇಕ್ ಮಾಡಿದ ಲೈವ್ ಬ್ಯಾಂಡ್​ಗಳನ್ನು ಪೊಲೀಸ್ರು ಕ್ಲೋಸ್ ಮಾಡಿಸಿದ್ದಾರೆ. ಅಲ್ಲದೇ ಸುಪ್ರೀಂ ಕೋರ್ಟ್ ಆದೇಶವನ್ನ ಕಡ್ಡಾಯವಾಗಿ ಪಾಲಿಸುವಂತೆ ಪೊಲೀಸ್ರಿಗೆ ನಗರ ಪೊಲೀಸ್ ಆಯುಕ್ತ ಸುನೀಲ್ ಕುಮಾರ್​ ಖಡಕ್ ವಾರ್ನಿಂಗ್ ಮಾಡಿದ್ದಾರೆ.

ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಕನ್ನಡನಾಡಿ.com ಪೇಜ್ ಲೈಕ್ ಮಾಡಿ..