ಪುರುಷರೇ ನಿಮ್ಮ ದೇಹದ ಕೊಬ್ಬು ಕರಗಬೇಕಾ..? ಹಾಗಿದ್ರೆ ಇವುಗಳನ್ನ ತಪ್ಪದೇ ತಿನ್ನಿ..!

ಆಹಾರವೇ ಆರೋಗ್ಯಕ್ಕೆ ಕಾರಣ ಅನ್ನೋ ಮಾತೊಂದು ಬಹುಕಾಲದಿಂದ ಚಾಲ್ತಿಯಲ್ಲಿದೆ. ಹೀಗಾಗಿಯೇ ಊಟ ಬಲ್ಲವನಿಗೆ ರೋಗವಿಲ್ಲ ಅನ್ನೋ ಮಾತನ್ನ ಸಿಂಪಲ್ ಆಗಿ ನಮ್ಮ ಜನಪದರು ಆಚರಿಸ್ತಾ ಇದ್ರು. ಆದ್ರೆ, ಫಾಸ್ಟ್​ ಲೈಫ್​ನ ಇಂದಿನ ಜಮಾನಾದಲ್ಲಿ ಯಥೇಚ್ಛವಾಗಿ ಹೋಮ್​ ಮೇಡ್, ಸಕಲ ಪೋಷಕಾಂಶಯುಕ್ತ ಟ್ರೆಡಿಷನಲ್ ಫುಡ್ ಪ್ರತಿದಿನ ತಿನ್ನೋದು ಅಸಾಧ್ಯ ಅಂತಾನೇ ಹೇಳಬೇಕು. ಅದ್ರಲ್ಲೂ ಪುರುಷರಲ್ಲಿ ನೆಗ್ಲಿಜೆನ್ಸಿ ಅಂದ್ರೆ ಅಸಡ್ಡೆ ಹೆಚ್ಚು.

ಏನೋ ತಿಂದು ಹೊಟ್ಟೆ ತುಂಬಿಸಿಕೊಂಡರಾಯ್ತು ಎಂದುಕೊಂಡೇ, ದಪ್ಪ ದಪ್ಪ ಹೊಟ್ಟೆ ಬರಸಿಕೊಂಡು ಬಿಡ್ತಾರೆ. ಇದ್ರಿಂದ ಸಹಜವಾಗಿ ಅವರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತೆ. ಅಲ್ಲದೇ, ಹಾಸಿಗೆಯಲ್ಲೂ ಸಂಗಾತಿಯನ್ನು ತೃಪ್ತಿಗೊಳಿಸುವಲ್ಲಿ ಸೋತು ಬಿಡುತ್ತಾರೆ. ಇದ್ರಿಂದ ಸಹಜವಾಗಿ, ಸಂಬಂಧಗಳಲ್ಲೂ ಬಿರುಕುಂಟಾಗುವ ಸಾಧ್ಯತೆ ಇರುತ್ತೆ. ಹೀಗಾಗಿಯೇ, ನಿಮ್ಮ ದೈನಂದಿನ ಫುಡ್ ಡೈಯಟ್​ನಲ್ಲಿ ಈ ಕೆಳಕಂಡ ಆಹಾರ ಪದಾರ್ಥಗಳನ್ನು ಸೇರಿಸಿಕೊಳ್ಳಿ. ಇದು ನಿಮ್ಮ ದೈಹಿಕ, ಮಾನಸಿಕ ಆರೋಗ್ಯ ವೃದ್ಧಿಗೆ ಬಹಳ ಸಹಕಾರಿಯಾಗುತ್ತೆ.

1. ಬಾದಾಮಿ
ಬಾದಾಮಿ ಆರೋಗ್ಯದ ದೊಡ್ಡ ಖಜಾನೆ. ಅತಿ ಹೆಚ್ಚು ಪ್ರೋಟಿನ್ ಹೊಂದಿರೋ ಆಹಾರ ಪದಾರ್ಥಗಳಲ್ಲಿ ಇದಕ್ಕೆ ಅಗ್ರಸ್ಥಾನ. ಪುರುಷರು ದಿನಕ್ಕೆ ಕನಿಷ್ಠ 8-10 ಬದಾಮಿ ಸೇವಿಸಬೇಕು. ಇದ್ರಿಂದ ಅವರ ದೇಹಕ್ಕೆ ಸಾಕಷ್ಟು ಪ್ರಮಾಣದಲ್ಲಿ ಪ್ರೋಟಿನ್ ಸಿಗುತ್ತೆ. ಜೊತೆಗೆ ನಾರಿನಂಶವೂ ಇದ್ರಲ್ಲಿ ಇರೋದ್ರಿಂದ ಡೈಜೇಷನ್​ಗೂ ಸಹಕಾರಿಯಾಗಿರುತ್ತೆ. ನಿಯಮಿತ ವ್ಯಾಯಾಮ ದೊಂದಿಗೆ ಬಾದಾಮಿ ಸೇವಿಸೋದ್ರಿಂದ ದೇಹದ ಸಾಮರ್ಥ್ಯ ಹೆಚ್ಚುವುದರ ಜೊತೆಗೆ, ಲೈಂಗಿಕ ಶಕ್ತಿಯೂ ಗಣನೀಯವಾಗಿ ವೃದ್ಧಿಯಾಗುತ್ತದೆ.

2. ಸೋಯಾಬೀನ್​
ಇದು ಪುರುಷರ ಮೂಳೆ, ಹಲ್ಲುಗಳನ್ನು ಬಲಿಷ್ಠಗೊಳಿಸುವುದರಲ್ಲಿ ಪ್ರಮುಖ ಪಾತ್ರವಹಿಸಬಲ್ಲದು. ಇದರಲ್ಲಿ ಹೆಚ್ಚಿನ ಕಬ್ಬಿಣಾಂಶ ಮತ್ತು ಕಾಲ್ಸಿಯಂ ಇರೋದ್ರಿಂದ ಬೆಳೆಯುತ್ತಿರುವ ಮಕ್ಕಳಿಗೂ ಇದು ಉತ್ತಮ ಆಹಾರ.

3. ಎಲೆಕೋಸು
ಎಲೆಕೋಸಿನಲ್ಲಿ ವಿಟಮಿನ್​ ಕೆ ಮತ್ತು ಕೊಲೆಸ್ಟ್ರಾಲ್​ ನಿವಾರಕಗಳು ಇರುವುದಿಂದ ದೇಹದ ಆರೋಗ್ಯಕ್ಕೆ ಅನುಕೂಲಕರ ಅಂತಾರೆ ಡಾಕ್ಟರ್ಸ್​. ಅದಲ್ಲದೇ ಇದ್ರಲ್ಲಿ ನಾರಿನಂಶ ಹೆಚ್ಚಿನ ಪ್ರಮಾಣದಲ್ಲಿ ಇರೋದ್ರಿಂದ ಎಲೆಕೋಸನ್ನು ರಾತ್ರಿ ಊಟಕ್ಕೆ ಸೇವಿಸುವುದು ಒಳ್ಳೆಯದು.

4. ಕಿತ್ತಳೆ ಹಣ್ಣು
ಹೆಚ್ಚಾದ ವಿಟಮಿನ್​ ಬಿ_9 ಹೊಂದಿರುವ ಕಿತ್ತಳೆ ಹಣ್ಣನ್ನು ದಿನನಿತ್ಯ ಜ್ಯೂಸ್​ ಮಾಡಿ ಕುಡಿಯುವುದರಿಂದ ರಕ್ತದ ಪರಿಚಲನೆ ಉತ್ತಮವಾಗಿರುತ್ತದೆ.

5. ಗೆಣಸಿನ ಹಣ್ಣು
ಇದರಲ್ಲಿ ವಿಟಮಿನ್​ ಎ ಸತ್ವಗಳು ಹೆಚ್ಚಿರೋದ್ರಿಂದ ಪುರುಷರ ದೃಷ್ಟಿ ವೃದ್ಧಿಸುವುದರ ಜೊತೆಗೆ, ದೇಹವನ್ನು ಹೆಚ್ಚು ಆಕ್ಟಿವ್​ ಆಗಿರಿಸುತ್ತದೆ.

6. ಕಿವಿಹಣ್ಣು
ಈ ಹಣ್ಣಿನಲ್ಲಿ ವಿಟಮಿನ್​ ಸಿ ಹೆಚ್ಚಿರೋದ್ರಿಂದ ಆರೋಗ್ಯಕರ ರಕ್ತ ಪರಿಚಲನೆಯನ್ನು ದೇಹಕ್ಕೆ ಒದಗಿಸುತ್ತದೆ. ಜೊತೆಗೆ, ರೋಗನಿರೋಧಕ ಶಕ್ತಿ ವೃದ್ಧಿಸುವಲ್ಲಿಯೂ ಇದು ಮಹತ್ವದ ಪಾತ್ರ ವಹಿಸುತ್ತದೆ. ಜೊತೆಗೆ, ಪುರುಷರಲ್ಲಿ ಒತ್ತಡ ಕುಗ್ಗಿಸುವಲ್ಲಿಯೂ ಇದು ಸಹಕಾರಿಯಾಗಿದೆ.

7. ಸೂರ್ಯಕಾಂತಿ ಬೀಜ
ಇದು ದೇಹಕ್ಕೆ ವಿಟಮಿನ್​ ಇ ನೀಡುವುದರಿಂದ, ಹಾನಿಕಾರಕ ಅಂಶಗಳನ್ನು ದೇಹದಿಂದ ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನೇರವಾಗಿ ಸೂರ್ಯಕಾಂತಿ ಬೀಜವನ್ನು ಸೇವಿಸಲು ಇದರ ಲಭ್ಯತೆ ಎಲ್ಲೆಡೆ ಇರದೇ ಇರುವುದರಿಂದ, ಅಡಿಗೆಯಲ್ಲಿ ಸೂರ್ಯಕಾಂತಿ ತೈಲವನ್ನು ಕೊಂಚ ಪ್ರಮಾಣದಲ್ಲಿ ಬಳಸಬಹುದು.

8. ಸಾಸಿವೆ
ಸಾಸಿವೆಯಲ್ಲಿ ಕೊಲೆಸ್ಟ್ರಾಲ್ ಕಂಟ್ರೋಲ್ ಮಾಡುವಂಥ ಅಂಶಗಳು ಹೆಚ್ಚಿನ ಪ್ರಮಾಣದಲ್ಲಿ ಇವೆ. ಇದು ದೇಹದ ತೂಕ ಇಳಿಸುವುಕೆಗೆ ನೆರವಾಗುತ್ತದೆ. ಇದನ್ನು ಪ್ರತಿ ದಿನ ಅಡುಗೆಗೆ ಬಳಸುವುದು ಉತ್ತಮ.

9. ಕಲ್ಲಂಗಡಿ ಹಣ್ಣು
ಕಲ್ಲಂಗಡಿ ಹಣ್ಣಿನಲ್ಲಿ ಪೊಟಾಶಿಂ ಹೆಚ್ಚಿದ್ದು, ದೇಹದ ಎನರ್ಜಿ ಲೆವೆಲ್​ ಅನ್ನು ಹೆಚ್ಚಿಸುತ್ತದೆ. ಇದು ಪ್ರಾಸ್ಟೇಟ್ ಕ್ಯಾನ್ಸರ್​ ಅನ್ನು ಕಡಿಮೆಗೊಳಿಸುವ ಅಂಶವನ್ನು ಹೆಚ್ಚು ಹೊಂದಿರುತ್ತದೆ ಜೊತೆಗೆ ದೇಹದ ಆರೋಗ್ಯವನ್ನು ಸುಧಾರಿಸುತ್ತದೆ.

10. ಗೋಡಂಬಿ
ಗೋಡಂಬಿಯಲ್ಲಿ ಅತ್ಯಂತ ಶಕ್ತಿಯುತವಾದ ಮೆಗ್ನಿಶಿಯಂ ಅಂಶಗಳು ದೊರೆಯುವುದರಿಂದ ದೇಹದಲ್ಲಿನ ಸ್ನಾಯುಗಳು ಬಲಿಷ್ಟವಾಗುತ್ತವೆ. ಇದ್ರಿಂದ ದೇಹದ ಆರೋಗ್ಯ ಉತ್ತಮವಾಗಿರುತ್ತದೆ. ಅದರೊಂದಿಗೆ ಇದ್ರಲ್ಲಿ ಫ್ಯಾಟ್ ಅಂಶ ಕೂಡ ಹೆಚ್ಚಿನ ಪ್ರಮಾಣದಲ್ಲಿ ಇರೋದ್ರಿಂದ, ಅತಿಯಾಗಿ ಸೇವಿಸದೇ ಮಿತಿಯಿಂದ ಸೇವಿಸುವುದ ಉತ್ತಮ.

                                                                                                                      ವಿಶೇಷ ಬರಹ: ಚಂದನನಾ ಶ್ಯಾಂ

👍👍 ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ 👍👍