ನಿಮ್ಮ ರಾಶಿಗಳಿಗನುಗುಣವಾಗಿ ದಿನ ಭವಿಷ್ಯ..! 22-08-2018, ಬುಧವಾರ

ದಿನಭವಿಷ್ಯ: 22-08-2018, ಬುಧವಾರ

ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ವರ್ಷ ಋತು, ಶ್ರಾವಣ ಮಾಸ,
ಶುಕ್ಲ ಪಕ್ಷ, ಏಕಾದಶಿ ಉಪರಿ ದ್ವಾದಶಿ,
ಬುಧವಾರ, ಪೂರ್ವಾಷಾಢ ನಕ್ಷತ್ರ.

ರಾಹುಕಾಲ: ಮಧ್ಯಾಹ್ನ 12:25 ರಿಂದ 1:59
ಗುಳಿಕಕಾಲ: ಬೆಳಗ್ಗೆ 10:52 ರಿಂದ 12:05
ಯಮಗಂಡಕಾಲ: ಬೆಳಗ್ಗೆ 7:46 ರಿಂದ 9:19

ಮೇಷ ರಾಶಿ  

ಮೇಷ ರಾಶಿಯವರಿಗೆ ಇಂದು ಧನಲಾಭವಾಗುವ ಸಾಧ್ಯತೆಯಿದೆ. ಸಂಬಳ ಕೂಡ ಏರಿಕೆಯಾಗಬಹುದು. ಹೊಸ ಸಂಬಂಧಕ್ಕೆ ನಾಂದಿಯಾಗಲಿದ್ದು, ಅದರಿಂದ ನಿಮ್ಮ ಬದುಕಿನಲ್ಲಿ ಬದಲಾವಣೆಯಾಗಲಿದೆ. ಹೊಸ ಕೆಲಸ ಆರಂಭಿಸಲು ಇವತ್ತು ಮನಸ್ಸು ಮಾಡುತ್ತೀರಿ. ಲೋಹದಿಂದ ನಿಮಗೆ ಇಂದು ಲಾಭವಾಗಲಿದೆ. ಹಣಕಾಸು ವಿಚಾರದಲ್ಲಿ ಚಿಂತಿತರಾಗುತ್ತೀರಿ. ಕಚೇರಿಯಲ್ಲಿ ಕೆಲಸವೂ ಅಧಿಕವಾಗಲಿದೆ. ಆರೋಗ್ಯದ ವಿಷಯದಲ್ಲಿ ಎಚ್ಚರಿಕೆಯಿಂದಿರಿ.

ವೃಷಭ ರಾಶಿ

ಜನರು ನಿಮಗೆ ಸಲಹೆ ಜೊತೆಗೆ ಸಹಾಯವನ್ನೂ ಮಾಡಲಿದ್ದಾರೆ. ನೀವು ಅಂದುಕೊಂಡ ಕೆಲಸ ಕೈಗೂಡಲಿದೆ. ಈ ರಾಶಿಯ ಅವಿವಾಹಿತರಿಗೆ ವಿವಾಹ ನಿಶ್ಚಯವಾಗುವ ಯೋಗವಿದೆ. ಆದ್ರೆ ಕಚೇರಿ ವಾತಾವರಣ ಕೊಂಚ ಗಂಭೀರವಾಗಿರಲಿದೆ. ಸಮಾಧಾನವಾಗಿ ಕೆಲಸ ಮಾಡಿ. ಉದ್ಯೋಗದಲ್ಲಿ ಜವಾಬ್ಧಾರಿ ಹೆಚ್ಚುವ ಸಾಧ್ಯತೆ ಇದೆ. ಸಂಗಾತಿಯ ಆರೋಗ್ಯದ ಬಗ್ಗೆ ಚಿಂತಿತರಾಗುತ್ತೀರಿ.

ಮಿಥುನ ರಾಶಿ

ನಿಮಗೆ ಇಂದು ಅತ್ಯಂತ ಲಾಭದಾಯಕ ದಿನ. ನಿಮ್ಮ ಜವಾಬ್ಧಾರಿಯ ಬಗ್ಗೆ ಗಮನವಿರಲಿ. ಕಠಿಣ ಪರಿಸ್ಥಿತಿಯನ್ನು ನೀವು ಎದುರಿಸಬೇಕಾಗಿ ಬರಬಹುದು. ಸ್ನೇಹಿತರು, ಆತ್ಮೀಯರು ನಿಮಗೆ ನೆರವಾಗಲು ಮುಂದೆ ಬರುತ್ತಾರೆ. ರಾಜಕೀಯ ವ್ಯಕ್ತಿಗಳಿಗೂ ಇಂದು ಶುಭದಿನ. ಊಟ-ತಿಂಡಿಯನ್ನು ಸ್ವಲ್ಪ ನಿಯಂತ್ರಣದಲ್ಲಿಡಿ. ಕೆಲವರು ನಿಮ್ಮ ಬೆನ್ನ ಹಿಂದೆ ಚೂರಿ ಹಾಕುವ ಕೆಲಸ ಮಾಡುತ್ತಿದ್ದಾರೆ.

ಕರ್ಕ ರಾಶಿ

ಬೇರೆಯವರೊಂದಿಗೆ ವ್ಯವಹಾರ ಮಾಡುವಾಗ ನಿಮ್ಮ ಬುದ್ಧಿವಂತಿಕೆಯನ್ನು ಉಪಯೋಗಿಸಿ. ಜೊತೆಗೆ ಕೆಲಸ ಮಾಡುವವರೇ ನಿಮ್ಮ ಪಾಲಿಗೆ ಇವತ್ತು ಲಾಭದಾಯಕವಾಗಲಿದ್ದಾರೆ. ಸಮಾಧಾನ ಚಿತ್ತದಿಂದ ಮಾತನಾಡಿದರೆ ಜನರು ನಿಮ್ಮನ್ನು ಹೊಗಳುತ್ತಾರೆ. ಯಾವುದೇ ರೀತಿಯ ಒಪ್ಪಂದ ಮಾಡಿಕೊಳ್ಳುವುದು ಬೇಡ. ಯಾರಿಗೂ ಪುಕ್ಕಟೆ ಸಲಹೆ ಕೊಡಲು ಹೋಗಬೇಡಿ.

ಸಿಂಹ ರಾಶಿ

ನಿಮ್ಮ ಸಹೋದರರು ಮತ್ತು ಸ್ನೇಹಿತರ ಸಂಬಂಧದಲ್ಲಿ ತೊಡಕಾಗಬಹುದು. ಬ್ಯುಸಿನೆಸ್ ಕ್ಷೇತ್ರದಲ್ಲಿ ಹೊಸ ಪ್ರಯತ್ನಕ್ಕೆ ಕೈಹಾಕಲು ಇದು ಸುದಿನ. ನಿಮ್ಮ ದೊಡ್ಡ ಕನಸು ಕೂಡ ನನಸಾಗುತ್ತದೆ. ಖರೀದಿಯಲ್ಲಿ ಇವತ್ತು ಲಾಭವಾಗುವ ಸಂಭವ ಇದೆ. ಇವತ್ತು ನೀವು ಸ್ವಲ್ಪ ಅರೆಮನಸ್ಕರಾಗಿರುತ್ತೀರಿ. ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ.

ಕನ್ಯಾ ರಾಶಿ

ಸಾಮಾಜಿಕ ಕೆಲಸಗಳಲ್ಲಿ ಸಕ್ರಿಯರಾಗುತ್ತೀರಿ. ಅದರಲ್ಲಿ ಸಫಲತೆ ಕೂಡ ಸಿಗುತ್ತದೆ. ಸ್ನೇಹಿತರು, ನೆರೆಹೊರೆಯವರು, ಸಂಬಂಧಿಕರು ನಿಮಗೆ ಸಹಾಯ ಮಾಡುತ್ತಾರೆ. ಪ್ರೇಮ ಸಂಬಂಧ ಕೂಡ ಆರಂಭವಾಗುವ ಸಂಭವವಿದೆ. ಖರ್ಚನ್ನು ನಿಯಂತ್ರಣದಲ್ಲಿಡಲು ಪ್ರಯತ್ನ ಮಾಡುತ್ತೀರಾ. ಕುಟುಂಬದ ಕೆಲವರ ಮಾತು ನಿಮಗೆ ಇಷ್ಟವಾಗದೇ ಇರಬಹುದು.

ತುಲಾ ರಾಶಿ

ಇವತ್ತು ನಿಮ್ಮ ಆತ್ಮವಿಶ್ವಾಸ ಹೆಚ್ಚಲಿದೆ. ಒತ್ತಡ ಮತ್ತು ಆತಂಕಗಳು ದೂರವಾಗಲಿವೆ. ಹಣಕಾಸಿಗೆ ಸಂಬಂಧಿಸಿದ ತೊಡಕು ನಿವಾರಿಸಲು ಪ್ರಯತ್ನಿಸುತ್ತೀರಾ. ಸಾಲ ತೆಗೆದುಕೊಳ್ಳುವ ಪ್ರಯತ್ನದಲ್ಲಿ ಯಶಸ್ಸು ಸಿಗಲಿದೆ. ಹೊಸ ಮತ್ತು ಹಳೆ ಸ್ನೇಹಿತರನ್ನು ಭೇಟಿ ಮಾಡುವ ಸಾಧ್ಯತೆ ಇದೆ. ಆದ್ರೆ ದಿಢೀರನೆ ನಿಮ್ಮ ಮೂಡ್ ಬದಲಾಗಬಹುದು. ಒಂದೇ ಬಾರಿ ಹಲವು ವಿಚಾರಗಳ ಬಗ್ಗೆ ಆಲೋಚನೆ ಮಾಡುತ್ತೀರಾ.

ವೃಶ್ಚಿಕ ರಾಶಿ

ಇವತ್ತು ನಿಮ್ಮ ಪಾಲಿಗೆ ಸಾಮಾನ್ಯ ದಿನ. ಸಾವಧಾನ ಚಿತ್ತದಿಂದ ಇರುತ್ತೀರಾ. ಪ್ರೀತಿ ಮತ್ತು ರೊಮ್ಯಾನ್ಸ್ ಗೆ ಇದು ಸೂಕ್ತವಾದ ದಿನ. ಬ್ಯುಸಿನೆಸ್ ವಿಷಯದಲ್ಲಿ ಎಚ್ಚರಿಕೆಯಿಂದ ಇರುವುದು ಒಳಿತು. ನಿಮ್ಮ ಹತ್ತಿರದವರೇ ಮೋಸ ಮಾಡುವ ಸಾಧ್ಯತೆ ಇದೆ. ಕೋಪದ ಕೈಗೆ ಬುದ್ಧಿ ಕೊಟ್ರೆ ಹಣ ಕಳೆದುಕೊಳ್ಳುವ ಸಂಭವವೂ ಇದೆ.

ಧನು ರಾಶಿ

ಮನೆ ಮತ್ತು ಅಂಗಡಿಯಲ್ಲಿ ಧನಲಾಭವಿದೆ. ಮನಸ್ಸು ಬಿಚ್ಚಿ ಕೆಲಸ ಮಾಡಿದ್ರೆ ಲಾಭ ನಿಶ್ಚಿತ. ಕಾಲ್ಪನಿಕತೆಯಿಂದ ದೂರವಾಗಿ ಗಂಭೀರ ಮತ್ತು ವಾಸ್ತವಿಕ ಮೂಡ್ ನಲ್ಲಿರುತ್ತೀರಾ. ಕೆಲಸದ ಕಡೆಗೆ ಹೆಚ್ಚು ಗಮನಹರಿಸುತ್ತೀರಾ. ಅವಕಾಶ ಸಿಕ್ಕಿದರೆ ಒಂಟಿಯಾಗಿ ಕುಳಿತು ಸ್ವಲ್ಪ ಚಿಂಥನ-ಮಂಥನ ನಡೆಸಿ. ಕೌಟುಂಬಿಕ ಸಮಸ್ಯೆ ಎದುರಾಗುವ ಸಾಧ್ಯತೆಯೂ ಇದೆ.

ಮಕರ ರಾಶಿ

ರಹಸ್ಯ ವಿಚಾರವೊಂದು ನಿಮ್ಮ ಮುಂದೆ ಬರಲಿದೆ. ಸ್ನೇಹಿತರು ಮತ್ತು ಇತರ ವ್ಯವಹಾರಗಳಲ್ಲಿ ಬ್ಯುಸಿಯಾಗಿರುತ್ತೀರಾ. ಈ ಭೇಟಿಯಿಂದ ಉತ್ತಮ ಫಲಿತಾಂಶ ಸಿಗಲಿದೆ. ನಿಮ್ಮ ಬದುಕೇ ಬದಲಾಗುವಂತಹ ಅವಕಾಶವೊಂದು ಸದ್ಯದಲ್ಲೇ ದೊರೆಯಲಿದೆ. ಆರೋಗ್ಯವೂ ಸುಧಾರಿಸಲಿದೆ. ಖರ್ಚು ಹೆಚ್ಚಾಗಲಿದೆ, ಕಳ್ಳತನದ ಅಪಾಯವೂ ಇದ್ದು ಎಚ್ಚರಿಕೆಯಿಂದಿರಿ.

ಕುಂಭ ರಾಶಿ

ಇವತ್ತು ಕೆಲಸದ ಒತ್ತಡ ಜಾಸ್ತಿ ಇರಲಿದೆ. ಸಮಯವನ್ನು ಸದುಪಯೋಗ ಮಾಡಿಕೊಳ್ಳಿ. ಹೊಸ ಕಾರ್ಯಕ್ಕೆ ಕೈಹಾಕಿದಲ್ಲಿ ಯಶಸ್ಸು ಸಿಗುತ್ತದೆ. ಹಳೆಯ ಸ್ನೇಹಿತರನ್ನು ಭೇಟಿ ಮಾಡುವ ಅವಕಾಶವಿದೆ. ಪ್ರೇಮ ಸಂಬಂಧ ಇನ್ನಷ್ಟು ಗಟ್ಟಿಯಾಗಲಿದೆ. ಕೆಲವೊಂದು ಕಾರ್ಯದಲ್ಲಿ ಅದೃಷ್ಟ ನಿಮ್ಮ ಜೊತೆಗಿರುವುದಿಲ್ಲ. ಅನಾವಶ್ಯಕವಾಗಿ ಖರ್ಚು ಮಾಡಬೇಡಿ.

ಮೀನ ರಾಶಿ

ಜ್ಞಾನಿ ಹಾಗೂ ಅನುಭವಿ ವ್ಯಕ್ತಿಯನ್ನು ಭೇಟಿ ಮಾಡುವಿರಿ. ನಿಮ್ಮ ಬದುಕಿನಲ್ಲಿ ಹೊಸ ಭರವಸೆಯ ಕಿರಣ ಮೂಡಲಿದೆ. ಸ್ನೇಹಿತರ ಜೊತೆಗೆ ಸಮಯ ಕಳೆಯಿರಿ. ಹೊಸಬರನ್ನು ಭೇಟಿ ಮಾಡಿ. ಹೊಸ ಹೊಸ ಅನುಭವ ನಿಮ್ಮದಾಗುತ್ತದೆ. ಕಚೇರಿಯಲ್ಲಿ ಹಿರಿಯ ಅಧಿಕಾರಿಗಳಿಂದ ಮೆಚ್ಚುಗೆ ಗಳಿಸುವಿರಿ. ಧನ ಹಾನಿ ಮತ್ತು ಅನಾರೋಗ್ಯ ಕಾಡುವ ಸಾಧ್ಯತೆಯೂ ಇದೆ.

ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಕನ್ನಡನಾಡಿ.com ಪೇಜ್ ಲೈಕ್ ಮಾಡಿ..