ಭಾರೀ ಸದ್ದು ಮಾಡ್ತಿದೆ ಪುನೀತ್ ರಾಜ್ ಕುಮಾರ್ ಫಿಟ್ನೆಸ್ ಚಾಲೆಂಜ್ ವಿಡಿಯೋ..

ನಿಮಗೆ ತಿಳಿದಿರುವಂತೆ ದೇಶಾದ್ಯಂತ ಫಿಟ್ನೆಸ್ ಚಾಲೆಂಜ್ ಬಗ್ಗೆ ಚರ್ಚೆ ಜೋರಾಗಿ ನಡೆಯುತ್ತಿದೆ. ಈಗಾಗಲೇ ಕನ್ನಡದ ಹೆಸರಾಂತ ನಟರಾದ ಸುದೀಪ್ ಹಾಗೂ ಯಶ್ ಅವರು ಫಿಟ್ನೆಸ್ ವಿಡಿಯೋಗಳನ್ನು ಹಾಕಿ ಅಭಿಮಾನಿಗಳಲ್ಲಿ ಆಸಕ್ತಿ ಹುಟ್ಟಿಸಿದ್ದಾರೆ.

ಪುನೀತ್ ಅವರಿಗೆ ಬಿಜೆಪಿ ಶಾಸಕ ಡಾ. ಅಶ್ವತ್ ನಾರಾಯಣ್ ಹಾಗೂ ಹೇಮಂತ್ ಮುದ್ದಪ್ಪ ಫಿಟ್ನೆಸ್ ಚಾಲೆಂಜ್ ನೀಡಿದ್ದರು. ಇದನ್ನು ಸ್ವೀಕರಿಸಿದ್ದ ಪುನೀತ್ ರಾಜ್ ಕುಮಾರ್, ತಮ್ಮ ಚಿತ್ರತಂಡದೊಂದಿಗೆ ಫಿಟ್ನೆಸ್ ಚಾಲೆಂಜನ್ನು ಪೂರ್ಣಗೊಳಿಸಿ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಪುನೀತ್ ರಾಜ್ ಕುಮಾರ್, ಈ ವಿಡಿಯೋವನ್ನು ತಾವು ನಟಿಸುತ್ತಿರುವ ಸಿನಿಮಾ ಶೂಟಿಂಗ್ ಸೆಟ್ ನಲ್ಲಿ ಚಿತ್ರತಂಡದೊಂದಿಗೆ ಸೇರಿಕೊಂಡು ಚಿತ್ರೀಕರಿಸಿಕೊಂಡಿದ್ದಾರೆ.

ಪುನೀತ್ ರಾಜ್ ಕುಮಾರ್, ಫಿಟ್ನೆಸ್ ಚಾಲೆಂಜನ್ನು ಪೂರ್ಣಗೊಳಿಸಿದ ನಂತರ ನಟರಾದ ರಕ್ಷಿತ್ ಶೆಟ್ಟಿ, ಧ್ರುವ ಸರ್ಜಾ, ಶ್ರೀಮುರಳಿ ಹಾಗೂ ಡ್ಯಾನಿಶ್ ಸೇಠ್ ಅವರಿಗೆ ಚಾಲೆಂಜನ್ನು ನೀಡಿದ್ದಾರೆ.

ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಕನ್ನಡನಾಡಿ.com ಪೇಜ್ ಲೈಕ್ ಮಾಡಿ..