11 ವರ್ಷದ ಬಾಲಕಿ ಮೇಲೆ 8 ದಿನ ಅತ್ಯಾಚಾರ: ಶರೀರದ ಮೇಲೆ 86 ಗಾಯ..! ಕತುವಾ ಪ್ರಕರಣ ಹಸಿ ಹಸಿಯಾಗಿರುವಾಗಲೇ ಈಗ ಇನ್ನೊಂದು.

ದೇಶದಲ್ಲಿ ಅತ್ಯಾಚಾರ ಪ್ರಕರಣ ನಿಲ್ಲುವಂತೆ ಕಾಣ್ತಿಲ್ಲ. ಗುಜರಾತಿನ ಸೂರತ್ ನಲ್ಲಿ ಮತ್ತೊಂದು ಅತ್ಯಾಚಾರ ಘಟನೆ ಬೆಳಕಿಗೆ ಬಂದಿದೆ. 11 ವರ್ಷದ ಬಾಲಕಿ ಶವ ಸೂರತ್ ನಲ್ಲಿ ಸಿಕ್ಕಿದೆ. ಮೈ ಮೇಲೆ ಒಂದಲ್ಲ ಎರಡಲ್ಲ 86 ಗಾಯಗಳಿವೆ. ಸುಮಾರು 8 ದಿನಗಳ ಕಾಲ ನಿರಂತರವಾಗಿ ಅತ್ಯಾಚಾರ ನಡೆದಿದೆ ಎಂಬುದು ಮರಣೋತ್ತರ ಪರೀಕ್ಷೆಯಲ್ಲಿ ವರದಿಯಾಗಿದೆ.

ಮೂಲಗಳ ಪ್ರಕಾರ ಏಪ್ರಿಲ್ 6ರಂದು ಪೊಲೀಸರಿಗೆ ಬಾಲಕಿ ಶವ ಸಿಕ್ಕಿದೆ ಎನ್ನಲಾಗಿದೆ. ಫೋಕ್ಸ್ ಕಾಯಿದೆ ಅಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಾಲಕಿ ಗುರುತು ಪತ್ತೆ ಕಾರ್ಯದಲ್ಲಿ ಪೊಲೀಸರು ನಿರತರಾಗಿದ್ದಾರೆ. ಬಾಲಕಿ ಮೇಲೆ ನಿರಂತರ ಅತ್ಯಾಚಾರ ಹಾಗೂ ಕಿರುಕುಳ ನೀಡಲಾಗಿದೆ. ನಶೆ ಬರುವ ಔಷಧಿ ನೀಡಲಾಗಿತ್ತಾ ಎನ್ನುವ ಬಗ್ಗೆ ಇನ್ನೂ ಸ್ಪಷ್ಟನೆ ಸಿಕ್ಕಿಲ್ಲ.

ಕತುವಾದಲ್ಲಿ 8 ವರ್ಷದ ಬಾಲಕಿ ಮೇಲೆ ನಡೆದ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಇಡೀ ದೇಶದ ಜನರ ಕೋಪಕ್ಕೆ ಕಾರಣವಾಗಿದೆ. ಜನರು ವಿವಿಧೆಡೆ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಬಗ್ಗೆ ಪಿಎಂ ನರೇಂದ್ರ ಮೋದಿ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ದೇಶ ಮತ್ತು ಸಮಾಜ ನಾಚಿಕೆಪಡುವಂತಹ ಘಟನೆ ಎಂದು ಪಿಎಂ ಹೇಳಿದ್ದಾರೆ.

ದೇಶದಲ್ಲಿ ನಿರಂತರವಾಗಿ ಅತ್ಯಾಚಾರ ಪ್ರಕರಣ ನಡೆಯುತ್ತಿದೆ. ಕೆಲವೊಂದು ಬೆಳಕಿಗೆ ಬಂದ್ರೆ ಮತ್ತೆ ಕೆಲವು ಪ್ರಕರಣಗಳು ತನಿಖೆ ವೇಳೆಯೇ ಮುಚ್ಚಿ ಹೋಗ್ತಿರೋದು ದುರಂತ.

👍👍 ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ 👍👍