ಸುಗ್ರೀವಾಜ್ಞೆ ಕೊನೆಗೂ ಮೊದಲ ಬಾರಿಗೆ ನಮ್ಮ ಬೆಂಗಳೂರಿನಲ್ಲೇ ಜಾರಿಯಾಯ್ತು..! ಬೆಂಗಳೂರಲ್ಲಿ ಅಪ್ರಾಪ್ತೆಯ ಅತ್ಯಾಚಾರಿಗೆ ಗಲ್ಲು ಶಿಕ್ಷೆ ವಿಧಿಸಿ ಮಹತ್ವದ ತೀರ್ಪು..!!

೧೨ ವರ್ಷದ ಒಳಗಿನ ಮಕ್ಕಳ ಮೇಲೆ ಅತ್ಯಾಚಾರ ಎಸಗುವವರಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಮೂಲಕ ಪೋಕ್ಸೋ ಕಾಯ್ದೆಗೆ ಮಹತ್ವದ ತಿದ್ದುಪಡಿ ತಂದಿತ್ತು. ಕಾಕತಾಳೀಯ ಎಂಬಂತೆ ಇದೀಗ ರಾಜಧಾನಿ ಬೆಂಗಳೂರಲ್ಲಿ ಮೊದಲ ತೀರ್ಪು ಹೊರಬಿದ್ದಿದ್ದು ವರ್ಷದ ಹಿಂದೆ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿದ್ದ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಿ ನಗರದ ೫೪ ನೇ ಎಸಿಎಂಎಂ ಮಹತ್ವದ ತೀರ್ಪು ನೀಡಿದೆ.

ಇದು ಕಳೆದ ವರ್ಷ ನಡೆದಿದ್ದ ಘಟನೆ..
ಕಳೆದ ವರ್ಷ ಗಿರಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಅಪ್ರಾಪ್ತೆಯ ನಾಪತ್ತೆ ಪ್ರಕರಣ ಕೊನೆಗೆ ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ ಎಂದು ರುಜುವಾಗಿತ್ತು. ಎದುರು ಮನೆಯಲ್ಲಿ ವಾಸ ಮಾಡುತ್ತಿದ್ದ ಅನಿಲ್ ಬಳಿಗಾರ ಎಂಬಾತ ತನ್ನ ಮನೆಯಲ್ಲಿ ಹೆಂಡತಿ ಮಕ್ಕಳು ಇಲ್ಲದ ಸಂದರ್ಭದಲ್ಲಿ ಅಪ್ರಾಪ್ತ ಬಾಲಕಿಗೆ ಟಿವಿ ತೋರಿಸುವುದಾಗಿ ಮನೆಗೆ ಕರೆದು ವಿಕೃತವಾಗಿ ಅತ್ಯಾಚಾರ ಮಾಡಿ ನಂತ್ರ ಕೊಲೆ ಮಾಡಿ ಪರಾರಿಯಾಗಿದ್ದ. ಪ್ರಕರಣ ದಾಖಲಿಸಿಕೊಂಡಿದ್ದ ಗಿರಿನಗರ ಪೊಲೀಸ್ರು ಕಲಬುರಗಿ ಮೂಲದ ಅನಿಲನನ್ನು ಬಂಧಿಸಿ ಜೈಲಿಗಟ್ಟಿದ್ದರು.

ಇಷ್ಟು ದಿನ ಪೋಕ್ಸೋ ಕಾಯ್ದೆ ಅಥವಾ ಅತ್ಯಾಚಾರ ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆಯನ್ನು ಮಾತ್ರ ಹೇರಳವಾಗಿವಿಧಿಸಲಾಗುತ್ತಿತ್ತು. ಈಗ ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ತಂದು ಗಲ್ಲು ಶಿಕ್ಷೆಗೆ ಮಾನ್ಯ ಮಾಡಿರುವುದು ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯಗಳನ್ನು ತಡೆಯಲು ಹೆಚ್ಚು ಪರಿಣಾಮಕಾರಿಯಾಗಿದೆ ಎನ್ನುವ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ. ಆದರೆ ಒಂದು ವರ್ಷ ಹಳೆಯ ಪ್ರಕರಣವಾಗಿರುವ ಈ ಅತ್ಯಾಚಾರ ಪ್ರಕರಣಕ್ಕೆ ಸುಗ್ರಿವಾಜ್ಞೆಯ ಕಾನೂನು ತಿದ್ದುಪಡಿ ಅನ್ವಯ ಆಗೋದಿಲ್ಲ. ಹಳೇ ಕಾನೂನನ್ನೇ ಬಳಸಿಕೊಂಡು ಗಲ್ಲು ಶಿಕ್ಷೆ ನೀಡಲಾಗಿದೆಯಾದರೂ, ಅಪ್ರಾಪ್ತೆಯರ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ಘೋಷಣೆ ದೇಶದಲ್ಲಿ ಜಾರಿಯಾದ ಬಳಿಕ ಬೆಂಗಳೂರಿನಲ್ಲಿ ಹೊರಬಿದ್ದಿರುವ ಮೊದಲ ಗಲ್ಲುಶಿಕ್ಷೆ ತೀರ್ಪು ಇದಾಗಿದೆ.

👍👍 ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ 👍👍