ಕೊಳಿಯೊಳಗಿತ್ತು ಬಂಡೆ ಸಿಡಿಸುವ ಸ್ಪೋಟಕ..!! ಕೋಳಿ ತಿನ್ನಲು ಹಪಹಪಿಸಿದ ನಾಯಿ ಛಿದ್ರ ಛಿದ್ರ..

dog-dies-in-filmy-style-near-nelamangala-latest news kannada - online kannada news - kannadanaadi

dog-dies-in-filmy-style-near-nelamangala-latest news kannada - online kannada news - kannadanaadi

ಕೋಳಿ ಮಾಂಸಕ್ಕೆ ಮಾರು ಹೋದ ನಾಯಿ ಹಪಹಪಿಸಿ ಬಾಯಿ ಹಾಕಿದೊಡನೆಯೇ ಬಂಡೆ ಸಿಡಿಸುವ ಸಿಡಿಮದ್ದು ಸ್ಪೋಟಗೊಂಡು ಸಾಕು ನಾಯಿ ಸಾವನ್ನಪ್ಪಿದೆ.

ಈ ಘಟನೆ ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ಚಿಕ್ಕಮಾರಹಳ್ಳಿಯಲ್ಲಿ ಶನಿವಾರ ತಡ ರಾತ್ರಿ ನಡೆದಿದೆ. ದುಷ್ಕರ್ಮಿಗಳು ಕೋಳಿ ಮಾಂಸದಲ್ಲಿ ಸ್ಪೋಟಕವನ್ನ ಇಟ್ಟಿದ್ದಾರೆ ಎನ್ನಲಾಗಿದೆ. ಸಿಡಿಮದ್ದಿನ ಸ್ಫೋಟಕ್ಕೆ ಇಡೀ ಗ್ರಾಮವೇ ಬೆಚ್ಚಿಬಿದ್ದಿದೆ. ಮೃತಪಟ್ಟಿರುವ ನಾಯಿ ಅದೇ ಗ್ರಾಮದ ಆಂಜನಮೂರ್ತಿ ಎಂಬವರಿಗೆ ಸೇರಿದ್ದಾಗಿದೆ .

dog-dies-in-filmy-style-near-nelamangala-latest news kannada - online kannada news - kannadanaadi

ಯಾವ ಕಾರಣಕ್ಕೆ ಕೊಳಿಯೊಳಗೆ ಸ್ಪೋಟಕ ತುಂಬಿಡಲಾಗಿತ್ತು ಹಾಗೂ ಯಾರು ಈ ಕೆಲಸ ಮಾಡಿದ್ದು ಎನ್ನುವ ಬಗ್ಗೆ ಇನ್ನಷ್ಟೇ ತನಿಕೆಯಿಂದ ತಿಳಿಯಬೇಕಿದೆ.

dog-dies-in-filmy-style-near-nelamangala-latest news kannada - online kannada news - kannadanaadi

ಇಟ್ಟ ಕೋಳಿ ಮಾಂಸವನ್ನು ತಿನ್ನಲು ಹೋದಾಗ ಅದು ಸ್ಫೋಟಗೊಂಡು ನಾಯಿ ಸ್ಥಳದಲ್ಲೇ ಮೃತಪಟ್ಟಿದೆ ಎಂದಷ್ಟೇ ಪ್ರಕರಣ ದಾಖಲಾಗಿದೆ. ಈ ಪ್ರಕರಣ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

dog-dies-in-filmy-style-near-nelamangala-latest news kannada - online kannada news - kannadanaadi

ಒಟ್ಟಾರೆ, ದುಷ್ಕೃತ್ಯ ಮಾಡುವವರಿಗೆ ನೂರೆಂಟು ದಾರಿ ಎನ್ನುವ ಹಾಗೆ, ಈ ಪ್ರಕರಣದಲ್ಲಿ ವಿಚಿತ್ರ ಎನಿಸುವ ಸಿನಿಮೀಯ ರೀತಿಯಲ್ಲಿ ಹತ್ಯೆಗೆ ಹುನ್ನಾರ ಮಾಡಲಾಗಿದ್ದು ಎಲ್ಲರನ್ನೂ ಆಶ್ಚರ್ಯಾಚಕಿತಗೊಳಿಸಿದೆ.