ಕಾಡುಗಳ್ಳ ವೀರಪ್ಪನ್ ಸಹಚರ ಸಾವು..!

ಬೆಂಗಳೂರು: ವೀರಪ್ಪನ್​ ಸಹಚರ, ಖೈದಿ ‘ಸೈಮನ್​’ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಇಂದು ಸಾವನಪ್ಪಿದ್ದಾನೆ. ರಾಂಬೋ ಗೋಪಾಲಕೃಷ್ಣ ಹತ್ಯೆ ಯತ್ನಕ್ಕೆ ಕಾರಣರಾದ ಆರೋಪಿಗಳಲ್ಲಿ ಒಬ್ಬನಾಗಿದ್ದ ಸೈಮನ್​ ಮರಣದಂಡನೆ ಆರೋಪಿಯಾಗಿದ್ದ.

ವೀರಪ್ಪನ್​ಗೆ ಚಾಲೆಂಜ್ ಹಾಕಿದ್ದ ಐ.ಪಿ.ಎಸ್ ಅಧಿಕಾರಿ, ಱಂಬೋ ಗೋಪಾಲಕೃಷ್ಣ ಅವರ ಮೇಲೆ ದ್ವೇಷ ತೀರಿಸಿಕೊಳ್ಳಲು ವೀರಪ್ಪನ್​ ಹೊಂಚುಹಾಕಿದ್ದ. ಇದೇ ಕಾರಣಕ್ಕೆ ಸೈಮನ್​ನನ್ನು ವೀರಪ್ಪನ್ ಬಳಸಿಕೊಂಡಿದ್ದ.

ರಾಂಬೋ ಗೋಪಾಲಕೃಷ್ಣರನ್ನು ನಿಗದಿತ ಸ್ಥಳಕ್ಕೆ ಕರೆಸಿಕೊಂಡು ಸೈಮನ್ ಮೂಲಕ ವೀರಪ್ಪನ್ ಬಾಂಬ್ ಸ್ಪೋಟಿಸಿದ್ದ. 1993 ರಲ್ಲಿ ನಡೆದಿದ್ದ ಈ ಪಾಲಾರ್​ ಸ್ಪೋಟದಲ್ಲಿ 22 ಜನ ಸಿಬ್ಬಂದಿ ಮೃತಪಟ್ಟಿದ್ದರು. ಐಪಿಎಸ್ ಅಧಿಕಾರಿ ಱಂಬೋ ಗೋಪಾಲಕೃಷ್ಣ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದರು. ಮೈಸೂರಿನ ಜೈಲಿನಲ್ಲಿದ್ದ ಇವನನ್ನು ಬೆಂಗಳೂರಿನ ಪರಪ್ಪನ ಅಗ್ರಹಾರಕ್ಕೆ ಶಿಫ್ಟ್ ಮಾಡಲಾಗಿತ್ತು.

👍👍 ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ 👍👍