ಬಿಜೆಪಿ ಸಂಪರ್ಕಿಸಿರುವ ಆ 13 ಶಾಸಕರು ಯಾರು ಗೊತ್ತಾ..? ಇಲ್ಲಿದೆ ಲಿಸ್ಟ್

ರಾಜ್ಯ ರಾಜಕೀಯ ಮೇಲಾಟ ಕ್ಷಣಕ್ಷಣಕ್ಕೂ ರೋಚಕ ತಿರುವುಗಳನ್ನು ಪಡೆದುಕೊಳ್ತಿದೆ. ಒಂದು ಕಡೆ ಅನಿಶ್ಚಿತತೆಯ ನಡುವೆಯೂ ಇಂದು ಬಿ.ಎಸ್​. ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸಿದ್ರೆ, ಮತ್ತೊಂದು ಕಡೆ ತಮ್ಮ ಶಾಸಕರನ್ನು ಆಪರೇಷನ್​ ಕಮಲದಿಂದ ಪಾರು ಮಾಡಲು ಕಾಂಗ್ರೆಸ್​, ಜೆಡಿಎಸ್​ ರೆಸಾರ್ಟ್​ ರಾಜಕಾರಣ ಶುರುಮಾಡಿದೆ. ರಾಜ್ಯಪಾಲ ವಿ.ಆರ್​.ವಾಲಾರವರು ಕೊಟ್ಟಿರುವ 15 ದಿನಗಳೊಳಗೆ ಸಿಎಂ ಬಿ.ಎಸ್​.ಯಡಿಯೂರಪ್ಪ ಸದನದಲ್ಲಿ ಬಹುಮತ ಸಾಬೀತುಪಡಿಸಬೇಕಿದೆ. 104 ಶಾಸಕರ ಬಲ ಹೊಂದಿರುವ ಯಡಿಯೂರಪ್ಪನವರಿಗೆ ಇನ್ನೂ 9 ಶಾಸಕರ ಕೊರತೆ ಇದ್ದು, 13 ಕಾಂಗ್ರೆಸ್, ಮತ್ತು ಜೆಡಿಎಸ್​​ ಶಾಸಕರಿಗೆ ಗಾಳ ಹಾಕಿದ್ದಾರೆ ಎನ್ನಲಾಗ್ತಿದೆ.

ಬಿಜೆಪಿ ಗಾಳ ಹಾಕಿರುವ ಕಾಂಗ್ರೆಸ್​ ಶಾಸಕರು
1. ಆನಂದ್​ ಸಿಂಗ್​-ಬಳ್ಳಾರಿಯ ವಿಜಯನಗರ ಶಾಸಕ(ಕಾಂಗ್ರೆಸ್​)
2 .ಬಿ. ನಾಗೇಂದ್ರ-ಬಳ್ಳಾರಿ(ಕಾಂಗ್ರೆಸ್​)
3. ರಾಜಶೇಖರ್ ಪಾಟೀಲ್​-ಹುಮ್ನಾಬಾದ್​(ಕಾಂಗ್ರೆಸ್​)
4. ಪ್ರತಾಪ್​ ಗೌಡ ಪಾಟೀಲ್-ರಾಯಚೂರಿನ ಮಸ್ಕಿ(ಕಾಂಗ್ರೆಸ್​)
5. ಜೆ.ಎನ್​. ಗಣೇಶ್-ಕಂಪ್ಲಿ(ಕಾಂಗ್ರೆಸ್​)
6. ಶಿವಾನಂದ ಪಾಟೀಲ್​-ಬಸವನ ಬಾಗೇವಾಡಿ(ಕಾಂಗ್ರೆಸ್​)
7. ಎಂ.ವೈ. ಪಾಟೀಲ್​-ಅಫ್ಜಲಪುರ(ಕಾಂಗ್ರೆಸ್​)
8. ನಾಗನಗೌಡ ಕಂದಕುರ್-ಗುರುಮಿಠ್ಕಲ್​(ಕಾಂಗ್ರೆಸ್​)
9. ಕೆ.ಎಸ್​. ಲಿಂಗೇಶ್​-ಬೇಲೂರು(ಜೆಡಿಎಸ್​)
10. ವೆಂಕಟರಮಣಪ್ಪ-ಪಾವಗಡ(ಕಾಂಗ್ರೆಸ್​)
11. ಪುಟ್ಟರಂಗಶೆಟ್ಟಿ-ಚಾಮರಾಜನಗರ(ಕಾಂಗ್ರೆಸ್​)
12 ದೇವಾನಂದ ಚವ್ವಾಣ್​-ನಾಗಾಠಾಣಾ(ಜೆಡಿಎಸ್​)
13. ಶಿವರಾಂ ಹೆಬ್ಬಾರ್-ಯಲ್ಲಾಪುರ(ಕಾಂಗ್ರೆಸ್​)

👍👍 ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ 👍👍