24ನೇ ಸಿಎಂ ಆಗಿ ಬಿ.ಎಸ್​.ವೈ ಪ್ರಮಾಣವಚನ : ಏನೇನಾಯ್ತು..? #LiveUpdates ವೀಡಿಯೋ ಇಲ್ಲಿದೆ :

2018ರ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಅತೀದೊಡ್ಡ ಪಕ್ಷವಾಗಿ ಹೊರ ಹೊಮ್ಮಿದ ಬಿಜೆಪಿಯ ಶಾಸಕಾಂಗ ಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ ಇಂದು ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ರು. ಮೂರನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಿ.ಎಸ್. ಯಡಿಯೂರಪ್ಪಗೆ ರಾಜ್ಯಪಾಲ ವಜೂಭಾಯಿವಾಲಾ ಪ್ರತಿಜ್ಞಾವಿಧಿ ಬೋಧಿಸಿದರು.

ಬಿಜೆಪಿಯ ಶಾಸಕಾಂಗ ಪಕ್ಷದ ನಾಯಕ ಬಿ ಎಸ್​ ಯಡಿಯೂರಪ್ಪ ಅವರು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ರಾಜಭವನದ ಗಾಜಿನ ಮನೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಈ ಹಿಂದಿನಂತೆ, ದೇವರ ಹೆಸರಿನಲ್ಲಿ ಮತ್ತು ರೈತರ ಹೆಸರಲ್ಲಿ ಯಡಿಯೂರಪ್ಪ ಅವರು ಪ್ರಮಾಣ ವಚನ ಸ್ವೀಕರಿಸಿದರು. ಈ ಸಂದರ್ಭದಲ್ಲಿ ರಾಜಭವನದೆದುರು ಹಾಜರಿದ್ದ ಸಾವಿರಾರು ಬಿಜೆಪಿ ಕಾರ್ಯಕರ್ತರು ಹರ್ಷೋದ್ಗಾರ ಮಾಡಿದರು.

ಇದೇ ವೇಳೆ ಪಕ್ಷದ ವರಿಷ್ಠರು, ಕೇಂದ್ರದ ಕೆಲ ಸಚಿವರು, ಹಿರಿಯ ನಾಯಕರು ರಾಜಭವನಕ್ಕೆ ಆಗಮಿಸಿದ್ದರು. ಅದಕ್ಕೂ ಮುನ್ನ ಡಾಲರ್ಸ್ ಕಾಲೋನಿಯ ತಮ್ಮ ನಿವಾದಿಂದ ಹೊರಟ  ಬಿಎಸ್ವೈ, ಸಂಜಯ ನಗರದಲ್ಲಿರುವ ರಾಧಾಕೃಷ್ಣ ದೇವಸ್ಥಾನಕ್ಕೆ ತೆರಳಿ, ಪೂಜೆ ಸಲ್ಲಿಸಿದ ಬಳಿಕ ರಾಜಭವನದತ್ತ ಪಯಣ ಬೆಳೆಸಿದರು.

ಯಡಿಯೂರಪ್ಪರೊಬ್ಬರಿಂದಲೇ ಪ್ರಮಾಣವಚನ

ಮುಖ್ಯಮಂತ್ರಿ ಯಡಿಯೂರಪ್ಪನವರೊಂದಿಗೆ ಇನ್ನೂ ನಾಲ್ವರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆಂದು ಹೇಳಲಾಗಿತ್ತಾದರೂ ಇಂದು ಯಡಿಯೂರಪ್ಪನವರೊಬ್ಬರೇ ಪ್ರಮಾಣವಚನ ಸ್ವೀಕರಿಸಿದ್ದಾರೆ.

ವೀಡಿಯೋ ಇಲ್ಲಿದೆ :

ಕೆ.ಎಸ್. ಈಶ್ವರಪ್ಪ, ಶ್ರೀರಾಮುಲು, ಆರ್. ಅಶೋಕ್ ಹಾಗೂ ಗೋವಿಂದ ಕಾರಜೋಳ ಸಚಿವರಾಗಲಿದ್ದಾರೆಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ಬಹುಮತ ಸಾಬೀತುಪಡಿಸಿದ ನಂತರ ಸಚಿವ ಸಂಪುಟವನ್ನು ರಚಿಸಲಾಗುತ್ತೆ ಎಂದು ತಿಳಿದುಬಂದಿದೆ.

ಏನೇನಾಯ್ತು..? ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ :

ಸಮಯ ಬೆಳಗ್ಗೆ 8.50: ಹಸಿರು ಶಾಲು ತೊಟ್ಟು ಕುಟುಂಬಸ್ಥರ ಜೊತೆ ಬಿ.ಎಸ್. ಯಡಿಯೂರಪ್ಪ ರಾಜಭವನಕ್ಕೆ ಆಗಮನ

ಸಮಯ ಬೆಳಗ್ಗೆ 8.51: ಬಿಎಸ್​ವೈಗೆ ಅಭಿನಂದನೆ ಸಲ್ಲಿಸಿದ ಬಿಜೆಪಿಯ ಕೇಂದ್ರ ಸಚಿವರು, ರಾಜ್ಯದ ಎಲ್ಲಾ ಹಿರಿಯ ನಾಯಕರು

ಸಮಯ ಬೆಳಗ್ಗೆ 8.52: ಪ್ರಮಾಣವಚನ ಕಾರ್ಯಕ್ರಮದಲ್ಲಿ ಬಿಜೆಪಿಯ ಎಲ್ಲಾ ನಾಯಕರ ಉಪಸ್ಥಿತಿ

ಸಮಯ ಬೆಳಗ್ಗೆ 8.52: ಕೇಂದ್ರ ಸಚಿವರ ಜೊತೆ ಮೊದಲ ಸಾಲಿನಲ್ಲಿ ಕುಳಿತ ಬಿ.ಎಸ್. ಯಡಿಯೂರಪ್ಪ

ಸಮಯ ಬೆಳಗ್ಗೆ 8.52: ಧರ್ಮೇಂದ್ರ ಪ್ರಧಾನ್, ಪ್ರಕಾಶ್ ಜಾವ್ಡೇಕರ್, ಡಿ.ವಿ. ಸದಾನಂದಗೌಡ ಜೊತೆ ನಗುಮುಖದೊಂದಿಗೆ ಮಾತುಕತೆ

ಸಮಯ ಬೆಳಗ್ಗೆ 8.53: ಮೊದಲ ಬಾರಿಗೆ ಆಯ್ಕೆಯಾದವರೂ ಸೇರಿದಂತೆ ಲ್ಲಾ ಶಾಸಕರನ್ನೂ ಪಕ್ಕದಲ್ಲೇ ಕೂರಿಸಿಕೊಂಡಿರುವ ಆರ್. ಅಶೋಕ್

ಸಮಯ ಬೆಳಗ್ಗೆ 8.53: ಚಿಕ್ಕಪೇಟೆ ಶಾಸಕ ಉದಯ್ ಗರುಡಾಚಾರ್, ವಿ. ಸೋಮಣ್ಣ, ಕುಮಾರ್ ಬಂಗಾರಪ್ಪ, ಹರತಾಳ್ ಹಾಲಪ್ಪ ಸೇರಿ ಎಲ್ಲಾ 104 ಶಾಸಕರೂ ಭಾಗಿ

ಸಮಯ ಬೆಳಗ್ಗೆ 8.54: ಕಡೂರು ಶಾಸಕ ಬೆಳ್ಳಿ ಪ್ರಕಾಶ್ ಕೂಡ ಪ್ರಮಾಣವಚನ ಕಾರ್ಯಕ್ರಮಕ್ಕೆ ಆಗಮನ

ಸಮಯ ಬೆಳಗ್ಗೆ 8.57: ಪ್ರಮಾಣವಚನ ಕಾರ್ಯಕ್ರಮಕ್ಕೆ ರಾಜ್ಯಪಾಲ ವಜೂಭಾಯಿವಾಲಾ ಆಗಮನ

ಸಮಯ ಬೆಳಗ್ಗೆ 8.57: ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ರತ್ನಪ್ರಭಾರಿಂದ ರಾಜ್ಯಪಾಲರಿಗೆ ಸ್ವಾಗತ

ಸಮಯ ಬೆಳಗ್ಗೆ 8.58: ವೇದಿಕೆಗೆ ಆಗಮಿಸಿದ ರಾಜ್ಯಪಾಲ ವಜೂಭಾಯಿವಾಲಾ

ಸಮಯ ಬೆಳಗ್ಗೆ 8.59: ಬಿ.ಎಸ್. ಯಡಿಯೂರಪ್ಪಗೆ ಸಿಎಸ್ ರತ್ನಪ್ರಭಾರಿಂದ ವೇದಿಕೆಗೆ ಆಹ್ವಾನ

ಸಮಯ ಬೆಳಗ್ಗೆ 8.59: ಆರ್. ಅಶೋಕ್​ರಿಂದ ಬಿ.ಎಸ್. ಯಡಿಯೂರಪ್ಪಗೆ ಅಭಿನಂದನೆ

ಸಮಯ ಬೆಳಗ್ಗೆ 8.59: ಬಿ.ಎಸ್. ಯಡಿಯೂರಪ್ಪರನ್ನ ವೇದಿಕೆಗೆ ಕರೆತಂದ ಶ್ರೀರಾಮುಲು

ಸಮಯ ಬೆಳಗ್ಗೆ 9.00: ವೇದಿಕೆಗೆ ಬಂದು ನೆರೆದವರೆಲ್ಲರಿಗೂ ವಂದಿಸಿದ ಬಿಎಸ್​ವೈ

ಸಮಯ ಬೆಳಗ್ಗೆ 9.01: ನೂತನ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ಬಿ.ಎಸ್. ಯಡಿಯೂರಪ್ಪ

ಸಮಯ ಬೆಳಗ್ಗೆ 9.01: ದೇವರ ಮತ್ತು ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ಬಿಎಸ್​ವೈ

ಸಮಯ ಬೆಳಗ್ಗೆ 9.02: ಬಿಎಸ್​ವೈ ಪರ ರಾಜಭವನದಲ್ಲಿ ಮೊಳಗಿದ ಘೋಷಣೆ

ಸಮಯ ಬೆಳಗ್ಗೆ 9.04: ಹೂಗುಚ್ಛ ನೀಡಿದ ರಾಜ್ಯಪಾಲರಿಂದ ಬಿ.ಎಸ್. ಯಡಿಯೂರಪ್ಪಗೆ ಅಭಿನಂದನೆ

ಸಮಯ ಬೆಳಗ್ಗೆ 9.05: ಬಿ.ಎಸ್. ಯಡಿಯೂರಪ್ಪ ಪ್ರಮಾಣವಚನ ಕಾರ್ಯಕ್ರಮ ಮುಕ್ತಾಯ

ಸಮಯ ಬೆಳಗ್ಗೆ 9.09: ರಾಜಭವನದಿಂದ ನೇರವಾಗಿ ವಿಧಾನಸೌಧಕ್ಕೆ ತೆರಳಿದ ಬಿ.ಎಸ್. ಯಡಿಯೂರಪ್ಪ

👍👍 ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ 👍👍