ಬಿಜೆಪಿಯ ಭದ್ರಕೋಟೆ ಜಯನಗರ ಕ್ಷೇತ್ರ ಕಾಂಗ್ರೆಸ್ ತೆಕ್ಕೆಗೆ : ಮೊದಲ ಚುನಾವಣೆಯಲ್ಲೇ ಗೆಲುವಿನ ನಗೆ ಬೀರಿದ ಸೌಮ್ಯಾ ರೆಡ್ಡಿ..!

ಬೆಂಗಳೂರಿನ ಜಯನಗರ ವಿಧಾನಸಭಾ ಕ್ಷೇತ್ರದ ಫಲಿತಾಂಶ ಹೊರಬಿದ್ದಿದ್ದು ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿ, ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಬಾಬು ವಿರುದ್ಧ 2,889 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಈ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದ ವಿಜಯ ಕುಮಾರ್ ಅವರ ನಿಧನದಿಂದಾಗಿ ಮುಂದೂಡಲ್ಪಟ್ಟಿದ್ದ ಚುನಾವಣೆ ಸೋಮವಾರದಂದು ನಡೆದಿತ್ತು.

ಅನುಕಂಪದ ಆಧಾರದಿಂದ ಟಿಕೆಟ್ ಪಡೆದಿದ್ದ ವಿಜಯ್ ಕುಮಾರ್ ಸಹೋದರ ಪ್ರಹ್ಲಾದ್ ಬಾಬು ಅವರನ್ನು ಜನ ಸೋಲಿಸಿದ್ದಾರೆ. ಈ ಮೂಲಕ ಮತ್ತೆ ತಂದೆಯ ಕ್ಷೇತ್ರದಲ್ಲಿ ಮಗಳು  ಸೌಮ್ಯಾ ರೆಡ್ಡಿ  ಗೆಲುವಿನ ಸವಿಯನ್ನು ಕಂಡಿದ್ದಾರೆ.

ಈ ಮೂಲಕ ಬಿಜೆಪಿಯ ಭದ್ರಕೋಟೆಯನ್ನ ಈಗ ಕಾಂಗ್ರೆಸ್​​ ವಶಪಡಿಸಿಕೊಂಡಿದೆ. ಇನ್ನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ರವಿ ಕೃಷ್ಣಾ ರೆಡ್ಡಿ ಅವರಿಗೆ 1,591 ಮತಗಳು ಸಿಕ್ಕಿವೆ.

ಈ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಜೆಡಿಎಸ್ ಅಭ್ಯರ್ಥಿ ಬಳಿಕ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿ ಅವರನ್ನು ಬೆಂಬಲಿಸಿ ಕಣದಿಂದ ಹಿಂದೆ ಸರಿದಿದ್ದರು. ಬಿಜೆಪಿ, ವಿಜಯಕುಮಾರ್ ಅವರ ಸಹೋದರ ಪ್ರಹ್ಲಾದ್ ಬಾಬು ಅವರಿಗೆ ಟಿಕೆಟ್ ನೀಡಿತ್ತು. ಇನ್ನು ಪಕ್ಷೇತರ ಅಭ್ಯರ್ಥಿ ರವಿಕೃಷ್ಣಾ ರೆಡ್ಡಿ ಸೇರಿದಂತೆ ಒಟ್ಟು 19 ಮಂದಿ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದರು.

ಕ್ಷಣ ಕ್ಷಣದ ಸಂಪೂರ್ಣ ವಿವರ:

ಬೆಳಗ್ಗೆ 11.45:  ಎಲ್ಲ 16 ಸುತ್ತು ಮುಕ್ತಾಯಗೊಂಡಿದ್ದು, ಸೌಮ್ಯಾ ರೆಡ್ಡಿಗೆ  54,457 ಮತಗಳು ಬಿದ್ದರೆ, ಬಿಜೆಪಿ ಪ್ರಹ್ಲಾದ್ ಬಾಬು  51,568 ಮತಗಳು ಬಿದ್ದಿದೆ.

ಬೆಳಗ್ಗೆ 11.23: ಸೌಮ್ಯ ರೆಡ್ಡಿಗೆ 15 ಸುತ್ತಿನಲ್ಲಿ 6,562 ಮತಗಳ ಮುನ್ನಡೆ. ಕಾಂಗ್ರೆಸ್ 51,347 ಬಿಜೆಪಿ 44,785

ಬೆಳಗ್ಗೆ 11.09: 14ನೇ ಸುತ್ತಿನಲ್ಲಿ  ಕಾಂಗ್ರೆಸ್  51,192  ಬಿಜೆಪಿಗೆ 44,292 ಮತಗಳು ಬಿದ್ದಿವೆ.  6,900 ಮತಗಳ ಮುನ್ನಡೆ ಪಡೆದ ಸೌಮ್ಯಾ ರೆಡ್ಡಿ

ಬೆಳಗ್ಗೆ 10.57: 13ನೇ ಸುತ್ತಿನಲ್ಲೂ ಕಾಂಗ್ರೆಸ್ ಮುನ್ನಡೆ, ಕಾಂಗ್ರೆಸ್- 48,456, ಬಿಜೆಪಿ- 39,919 ಕಾಂಗ್ರೆಸ್ ಗೆ 8,537 ಮತಗಳ ಭಾರೀ ಮುನ್ನಡೆ

ಬೆಳಗ್ಗೆ 10.49: 12ನೇ ಸುತ್ತಿನಲ್ಲೂ ಕಾಂಗ್ರೆಸ್ ಮುನ್ನಡೆ, ಕಾಂಗ್ರೆಸ್- 45,975, ಬಿಜೆಪಿ- 35,798, ಕಾಂಗ್ರೆಸ್ ಗೆ 10,000 ಮತಗಳ ಭಾರೀ ಮುನ್ನಡೆ

ಬೆಳಗ್ಗೆ 10.39: 11ನೇ ಸುತ್ತಿನಲ್ಲೂ ಕಾಂಗ್ರೆಸ್ ಮುನ್ನಡೆ, ಕಾಂಗ್ರೆಸ್- 43,478 ಬಿಜೆಪಿ- 30,748 , ಕಾಂಗ್ರೆಸ್ ಗೆ 12,730 ಮತಗಳ ಭಾರೀ ಮುನ್ನಡೆ

ಬೆಳಗ್ಗೆ 10.31: 10ನೇ ಸುತ್ತಿನಲ್ಲೂ ಕಾಂಗ್ರೆಸ್ ಮುನ್ನಡೆ, ಕಾಂಗ್ರೆಸ್- 40,677, ಬಿಜೆಪಿ- 25,779, ಕಾಂಗ್ರೆಸ್ ಗೆ 14,838 ಮತಗಳ ಭಾರೀ ಮುನ್ನಡೆ

ಬೆಳಗ್ಗೆ 10.21- 9ನೇ ಸುತ್ತಿನಲ್ಲೂ ಕಾಂಗ್ರೆಸ್ ಕಾಂಗ್ರೆಸ್ – 37,288, ಬಿಜೆಪಿ-21,943,ಕಾಂಗ್ರೆಸ್ ಗೆ 15, 345 ಮತಗಳ ಭಾರೀ ಮುನ್ನಡೆ

ಬೆಳಗ್ಗೆ 10.15 -8ನೇ ಸುತ್ತು  ಕಾಂಗ್ರೆಸ್ 31,642, ಬಿಜೆಪಿಗೆ 21,437 ಮತ. 10,256 ಮತಗಳ ಮುನ್ನಡೆ ಗಳಿಸಿದ ಸೌಮ್ಯಾ ರೆಡ್ಡಿ

ಬೆಳಗ್ಗೆ 10.02- 7ನೇ ಸುತ್ತಿನ ಮತ ಎಣಿಕೆ ಅಂತ್ಯ . ಕಾಂಗ್ರೆಸ್ 27,197, ಬಿಜೆಪಿ 19,873. ಸೌಮ್ಯಾ ರೆಡ್ಡಿಗೆ 7,324 ಮತಗಳ ಮುನ್ನಡೆ

ಬೆಳಗ್ಗೆ 9.54 – 6ನೇ ಸುತ್ತು – ಕಾಂಗ್ರೆಸ್ 22,356, ಬಿಜೆಪಿ 18,813. 3543 ಮತಗಳ ಮುನ್ನಡೆ ಕಾಯ್ದಕೊಂಡ ಸೌಮ್ಯಾ ರೆಡ್ಡಿ

ಬೆಳಗ್ಗೆ 9.43 – ಐದನೇ ಸುತ್ತು ಕಾಂಗ್ರೆಸ್  17,923, ಬಿಜೆಪಿ 16,331. ಸೌಮ್ಯಾ ರೆಡ್ಡಿಗೆ 1532  ಮತಗಳ ಮುನ್ನಡೆ

ಬೆಳಗ್ಗೆ 9.30 -ನಾಲ್ಕನೇಯ ಸುತ್ತಿನಲ್ಲಿ  ಕಾಂಗ್ರೆಸ್  16,438, ಬಿಜೆಪಿ 11,141 ಮತಗಳು. 5,2297 ಮತಗಳ ಅಂತರದಿಂದ ಸೌಮ್ಯಾ ರೆಡ್ಡಿ ಮುನ್ನಡೆ

ಬೆಳಗ್ಗೆ 9.22– ಮೂರನೇ ಸುತ್ತು – ಕಾಂಗ್ರೆಸ್ 11,494,  ಬಿಜೆಪಿಗೆ 8566 ಮತಗಳು.   2,928 ಮತಗಳ ಅಂತರದಿಂದ ಸೌಮ್ಯಾ ರೆಡ್ಡಿ ಮುನ್ನಡೆ

ಬೆಳಗ್ಗೆ 9.10 – ಎರಡನೇ ಸುತ್ತು – ಕಾಂಗ್ರೆಸ್ 6,719 ಬಿಜೆಪಿಗೆ 6,453 ಮತಗಳು.  266 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ  ಸೌಮ್ಯಾ ರೆಡ್ಡಿ

ಬೆಳಗ್ಗೆ 8.45 – ಮೊದಲ ಸುತ್ತಿನ ಎಣಿಕೆಯಲ್ಲಿ  ಕಾಂಗ್ರೆಸ್ಸಿಗೆ  3,749, ಬಿಜೆಪಿಗೆ 3,322 ಮತ. ಸೌಮ್ಯ ರೆಡ್ಡಿ 427 ಮತಗಳಿಂದ ಮುನ್ನಡೆ.

ಬೆಳಗ್ಗೆ 8.00 – ಅಂಚೆ ಮತದಾನದ ಎಣಿಕೆ ಆರಂಭ. ಒಟ್ಟು ನಾಲ್ಕು ಮತಗಳಲ್ಲಿ  3 ಬಿಜೆಪಿಗೆ, 1 ಮತ ಕಾಂಗ್ರೆಸ್ಸಿಗೆ ಬಿದ್ದಿದೆ.

ಬೆಳಗ್ಗೆ 7:10 – 2013ರ ಚುನಾವಣೆಯಲ್ಲಿ ವಿಜಯ್ ಕುಮಾರ್ ಅವರು 12,312 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಜಯಗಳಿಸಿದ್ದರು. ವಿಜಯಕುಮಾರ್ ಅವರಿಗೆ 43,990 ಮತಗಳು ಬಿದ್ದಿದ್ದರೆ ಕಾಂಗ್ರೆಸ್ಸಿನ ವೇಣುಗೋಪಾಲ್ ಅವರಿಗೆ 31,678 ಮತಗಳು ಬಿದ್ದಿತ್ತು. ಜೆಡಿಎಸ್ ನ ಸಮಿವುಲ್ಲಾ ಅವರಿಗೆ 12,097 ಮತಗಳು ಸಿಕ್ಕಿತ್ತು.

ಬೆಳಗ್ಗೆ 7 ಗಂಟೆ -ಎಸ್‍ಎಸ್‍ಆರ್‍ವಿ ಕಾಲೇಜಿನಲ್ಲಿ 7.30ಕ್ಕೆ ಸ್ಟ್ರಾಂಗ್ ರೂಮ್ ಓಪನ್. 3 ಎಸಿಪಿ, 6 ಇನ್ಸ್ ಪೆಕ್ಟರ್, 15 ಪಿಎಸ್‍ಐ, 27 ಎಎಸ್‍ಐ, 42 ಮುಖ್ಯ ಪೇದೆ, 120 ಪೊಲೀಸ್ ಪೇದೆ ನಿಯೋಜನೆ. ಅಹಿತಕರ ಘಟನೆ ತಡೆಯಲು 2 ಕೆಎಸ್ ಆರ್ ಪಿ ತುಕಡಿ ನಿಯೋಜಿಸಲಾಗಿತ್ತು.

ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಕನ್ನಡನಾಡಿ.com ಪೇಜ್ ಲೈಕ್ ಮಾಡಿ..