ದೀಪಕ್ ರಾವ್ ಕುಟುಂಬಕ್ಕೆ ಆಧಾರವಾದ ಜನಸಾಮಾನ್ಯರು. ಒಂದೇ ದಿನಕ್ಕೆ ಸಂಗ್ರಹವಾದ ಹಣವೇಷ್ಟು ಗೊತ್ತಾ..!?

dipak rao death manglore-kannadanaadi news-latest kannada news-online kannada news

ಸುರತ್ಕಲ್ ಸಮೀಪದ ಕಾಟಿಪಳ್ಳ ಎಂಬಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತ ದೀಪಕ್ ರಾವ್ ಅವರ ಹತ್ಯೆಯ ನಂತರ, ಜನಸಾಮಾನ್ಯರು ಬಡ ಕುಟುಂಬದ ನೆರವಿಗೆ ಮುಂದಾಗಿರುವುದು ಎದ್ದು ಕಾಣುತ್ತಿದೆ. ಇದಕ್ಕೆ ಕಾರಣ ದೀಪಕ್ ರಾವ್ ಅವರ ತಾಯಿಯ ಬ್ಯಾಂಕ್ ಬ್ಯಾಲೆನ್ಸ್.

dipak rao death manglore-kannadanaadi news-latest kannada news-online kannada news

ಹೌದು, ಹಿಂದೂ ಸಂಘಟನೆಗಳು ಹಾಗೂ ದೀಪಕ್ ಅವರ ಸ್ನೇಹಿತರು, ಫೇಸ್ ಬುಕ್ ಹಾಗೂ ವ್ಯಾಟ್ಸ್ ಆಪ್ ಮೂಲಕ ತಮ್ಮ ಸ್ನೇಹಿತನ ಕುಟುಂಬದ ಕಷ್ಟಗಳನ್ನು ಹಂಚಿಕೊಂಡು ಸಹಾಯಕ್ಕಾಗಿ ಮನವಿ ಮಾಡಿಕೊಂಡಿದ್ದರು, ಸ್ನೇಹಿತರ ಈ ಮನವಿಗೆ ಜನಸಾಮಾನ್ಯರು ಕೂಡಲೇ ಸ್ಪಂದಿಸಿ, ನೆರವಿಗೆ ಧಾವಿಸಿದ್ದಾರೆ. ಒಂದೇ ದಿನದಲ್ಲಿ ದೀಪಕ್ ಅವರ ತಾಯಿಯ ಬ್ಯಾಂಕ್ ಅಕೌಂಟ್’ಗೆ ೧೭ ಲಕ್ಷ ರೂಪಾಯಿ ಜಾಮೆಯಾಗಿದೆ.

dipak rao death manglore-kannadanaadi news-latest kannada news-online kannada news

ಮಾತ್ರವಲ್ಲದೆ, ದಕ್ಷಿಣ ಕನ್ನಡ ಜಿಲ್ಲಾಡಳಿತದಿಂದ ೧೦ ಲಕ್ಷ, ಬಿಜೆಪಿ ೫ ಲಕ್ಷ ಹಾಗೂ ಮಾಜಿ ಸಚಿವರಾದ ಕೃಷ್ಣ ಪಾಲೆಮಾರ್ ಅವರು ವಯಕ್ತಿಕವಾಗಿ ೫ ಲಕ್ಷ ರೂಪಾಯಿ ನೀಡಿದ್ದಾರೆ. ಇದೇ ಸಂದರ್ಭದಲ್ಲಿ ಸ್ಥಳೀಯ ಶಾಸಕರಾಗಿರುವ ಮೊಯ್ದಿನ್ ಬಾವಾ ನೀಡಿದ್ದ ೫ ಲಕ್ಷದ  ಚೆಕ್ಕನ್ನು ದೀಪಕ್ ಕುಟುಂಬ ನಿರಾಕರಿಸಿದ್ದಾರೆ.

dipak rao death manglore-kannadanaadi news-latest kannada news-online kannada news

ಈ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳಾದ ಶಾಹಿಲ್,ಶಂಸು,ಸಫ್ವನ್,ಫೈಜ಼ಲ್ ನಾಲ್ವರನ್ನು ಸಿನಿಮೀಯ ರೀತಿಯಲ್ಲಿ ಬಂಧಿಸಿದ್ದು, ಇನ್ನುಳಿದವಿರಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.

ಈ ಸುದ್ದಿಯನ್ನು ಶೇರ್ ಮಾಡಿ ಹಾಗೂ ಈ ಕುಟುಂಬದ ಸಹಾಯಕ್ಕೆ ನೀವು ಕಾರಣರಾಗಿ

ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ