ಧನ್ಯಶ್ರೀ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳು ಲಭ್ಯ. ಸಂಘಟನೆಗಳ ವಿರುದ್ಧ ಸಿಡಿದೆದ್ದ ಎಸ್‌ಪಿ..!?

dhanyashri murder chikmanglore-kannadanaadi news-latest kannada news-online kannada news

ಚಿಕ್ಕಮಂಗಳೂರು ಜಿಲ್ಲೆಯ ಮೂಡುಗೆರೆಯ ಧನ್ಯಶ್ರೀ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯಗಳು ಲಭ್ಯವಾಗಿರುವ ಬಗ್ಗೆ ಎಸ್‌ಪಿ ಅಣ್ಣಾಮಲೈ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

dhanyashri murder chikmanglore-kannadanaadi news-latest kannada news-online kannada news

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಘಟನಾಕಾರರು ಹಾಗೂ ಇತರರು ಪೊಲೀಸರ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿದವರ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ. ಇದರಲ್ಲಿ ಯಾವುದೇ ವ್ಯಕ್ತಿಗಳಾಗಿರಲಿ ಅಥವಾ ಎಷ್ಟೇ ದೊಡ್ಡ ರಾಜಕಾರಣಿಗಳ ಒತ್ತಡಗಳು ಬಂದರು, ತಪ್ಪಿತಸ್ತರಿಗೆ ಶಿಕ್ಷೆ ಮಾತ್ರ ತಪ್ಪಿದಲ್ಲಾ ಎಂದರು.

dhanyashri murder chikmanglore-kannadanaadi news-latest kannada news-online kannada news 3 annamalai police

ಧನ್ಯಶ್ರೀ ಮನೆಗೆ ಐವರು ಸಂಘಟನಾಕಾರರು ಎರಡು ಬಾರಿ ತೆರಳಿ ಅವರ ಹೆತ್ತವರ ಎದುರೇ ಸೊಂಟದ ಕೆಳಗಿನ ಮಾತುಗಳಿಂದ ನಿಂದಿಸಿದ ಬಗ್ಗೆ ಸಾಕ್ಷ್ಯಗಳು ಸಿಕ್ಕಿವೆ. ಮಾತ್ರವಲ್ಲದೆ, ಧನ್ಯಶ್ರೀ ತಂದೆಯಿಂದ ಸುಳ್ಳು ದೂರು ಹೇಳಿಸಿದ್ದು ಕೂಡ ತಿಳಿದುಬಂದಿದೆ. ಸಿಕ್ಕಿರುವ ಸಾಕ್ಷಿಗಳಿಗೂ ಹಾಗೂ ಧನ್ಯಶ್ರೀ ತಂದೆ ನೀಡಿರುವ ದೂರಿಗೂ 1% ಕೂಡ ಹೋಲಿಕೆ ಬಂದಿಲ್ಲ ಎಂದರು.

dhanyashri murder chikmanglore-kannadanaadi news-latest kannada news-online kannada news 3 annamalai police

ಸಂತೋಷ್ ಎಂದು ವ್ಹಾಟ್ಸಪ್ಪ್ ಮೂಲಕ ಚಾಟ್ ಮಾಡುತ್ತಿದ್ದ ವ್ಯಕ್ತಿ ಸಂತೋಷ್ ಅಲ್ಲ, ಆತ ಯಾರೆಂಬುದು ಕೂಡ ತಿಳಿದುಬಂದಿದೆ, ಆತನನ್ನು ಸದ್ಯದಲ್ಲೇ ಅರೆಸ್ಟ್ ಮಾಡುತ್ತೇವೆ ಎಂದರು. ಪೊಲೀಸರು ಅವರ ಕರ್ತವ್ಯವನ್ನು ಸರಿಯಾಗಿ ಮಾಡುತ್ತಿದ್ದಾರೆ, ಇಲಾಖೆಯ ಬಗ್ಗೆ ಕೇವಲವಾಗಿ ಮಾತನಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.

ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ