ಆಪರೇಷನ್ ಕಮಲಕ್ಕೆ ಮುಂದಾಗಿದ್ದ ಬಿ.ಜೆ.ಪಿ.ಗೆ ಬಿಗ್ ಶಾಕ್ : ರಾಜಕೀಯ ಹೈ ಡ್ರಾಮಾದಲ್ಲಿ ಬಿಜೆಪಿಯ ಶಾಸಕರಿಗೇನೇ ಕಾಂಗ್ರೆಸ್ ಗಾಳ – ಆಪರೇಶನ್ ಕೈ ಕೂಡ ಶುರು..!!

104 ಸ್ಥಾನ ಗಳಿಸಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಬಿ.ಜೆ.ಪಿ. ಅಧಿಕಾರ ರಚಿಸಲು ಸರಳ ಬಹುಮತದ ಕೊರತೆ ಎದುರಾಗಿದೆ. ಆದರೂ ಸರ್ಕಾರ ರಚನೆಗೆ ಕಾರ್ಯತಂತ್ರ ರೂಪಿಸಿರುವ ಬಿ.ಜೆ.ಪಿ. ನಾಯಕರು ಕಾಂಗ್ರೆಸ್, ಜೆ.ಡಿ.ಎಸ್. ಶಾಸಕರನ್ನು ಸೆಳೆಯಲು ಮುಂದಾಗಿದ್ದಾರೆ.

ಚಾಮುಂಡೇಶ್ವರಿ ಶಾಸಕ, ಜಿ.ಟಿ. ದೇವೇಗೌಡ, ಶಿರಾ ಶಾಸಕ ಸತ್ಯನಾರಾಯಣ, ಸಿಂಧನೂರು ಶಾಸಕ ವೆಂಕಟರಾವ್, ನೆಲಮಂಗಲ ಶಾಸಕ ಡಾ. ಶ್ರೀನಿವಾಸ್ ಹಾಗೂ ಚಾಮರಾಜನಗರ ಶಾಸಕ ಪುಟ್ಟರಂಗಶೆಟ್ಟಿ ಅವರಿಗೆ ಬಿ.ಜೆ.ಪಿ. ನಾಯಕರು ಸಂಪರ್ಕಿಸಿದ್ದು, ಇವರೆಲ್ಲಾ ತಮ್ಮ ಪಕ್ಷವನ್ನು ತೊರೆಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇದರಿಂದಾಗಿ ಆಪರೇಷನ್ ಕಮಲ ನಡೆಸಲು ಮುಂದಾಗಿದ್ದ ಬಿ.ಜೆ.ಪಿ.ಗೆ ಆರಂಭಿಕ ಹಂತದಲ್ಲಿ ನಿರಾಸೆಯಾಗಿದ್ದು, ಸರ್ಕಾರ ರಚನೆಗೆ ಕಾರ್ಯತಂತ್ರ ಮುಂದುವರೆಸಲಾಗಿದೆ. ಇಂದು ಶಾಸಕಾಂಗ ಸಭೆ ನಡೆಸಿದ ಬಳಿಕ ಬಿ.ಎಸ್. ಯಡಿಯೂರಪ್ಪ ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ಆಹ್ವಾನ ನೀಡುವಂತೆ ಮನವಿ ಮಾಡಲಿದ್ದಾರೆ.

ಎಲ್ಲಾ ನಡೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಕಾಂಗ್ರೆಸ್ ಹೈಕಮಾಂಡ್, ಬಿಜೆಪಿಯ ಶಾಸಕರಿಗೇನೇ ಕಾಂಗ್ರೆಸ್ ಗಾಳ ಹಾಕುವಂತೆ ಸ್ಥಳೀಯ ನಾಯಕರಿಗೆ ಸೂಚನೆ ನೀಡಿದ್ದು, ರಾಜಕೀಯ ಹೈಡ್ರಾಮಾ ಗರಿಗೆದರಿದೆ.

👍👍 ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ 👍👍