ಕೊನೆಗೂ ಕಾಂಗ್ರೆಸ್ ನಿಂದ 15, ಜೆಡಿಎಸ್ ನಿಂದ 10 ಮಂದಿ ಸಚಿವರಾಗಿ ಪ್ರಮಾಣವಚನ..! ಲಿಸ್ಟ್‌ನಲ್ಲಿ ಯಾರ್‍ಯಾರು ಇದ್ದಾರೆ..? ಕಂಪ್ಲೀಟ್ ಲಿಸ್ಟ್ ಇಲ್ಲಿದೆ.

ಕೊನೆಗೂ ರಾಜ್ಯ ಸಚಿವ ಸಂಪುಟ ರಚನೆಯಾಗಿದ್ದು, ಮೊದಲ ಹಂತದಲ್ಲಿ ಕಾಂಗ್ರೆಸ್ ನಿಂದ 15 ಹಾಗೂ ಜೆಡಿಎಸ್ ನಿಂದ 10 ಮಂದಿ ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ರಾಜಭವನದಲ್ಲಿ ಮಧ್ಯಾಹ್ನ 2.12 ಕ್ಕೆ ನಡೆದ ಪ್ರಮಾಣ ವಚನ ಸಮಾರಂಭದಲ್ಲಿ ಕಾಂಗ್ರೆಸ್ ವತಿಯಿಂದ ಡಿ.ಕೆ. ಶಿವಕುಮಾರ್, ಕೆ.ಜೆ. ಜಾರ್ಜ್, ಆರ್.ವಿ. ದೇಶಪಾಂಡೆ, ರಮೇಶ್ ಜಾರಕಿಹೊಳಿ, ಕೃಷ್ಣಭೈರೇಗೌಡ, ಶಿವಶಂಕರ ರೆಡ್ಡಿ, ಪ್ರಿಯಾಂಕ್ ಖರ್ಗೆ, ಯು.ಟಿ. ಖಾದರ್, ವೆಂಕಟರಮಣಪ್ಪ, ಜಮೀರ್ ಅಹಮದ್ ಖಾನ್, ಜಯಮಾಲಾ, ರಾಜಶೇಖರ್ ಪಾಟೀಲ್, ಶಿವಾನಂದ ಪಾಟೀಲ್, ಪುಟ್ಟರಂಗ ಶೆಟ್ಟಿ ಹಾಗೂ ಪಕ್ಷೇತರ ಶಾಸಕ ಶಂಕರ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಇನ್ನು ಜೆಡಿಎಸ್ ನಿಂದ ಹೆಚ್.ಡಿ. ರೇವಣ್ಣ, ಬಂಡೆಪ್ಪ ಕಾಶೆಂಪುರ, ಎಂ.ಸಿ. ಮನಗೂಳಿ, ಡಿ.ಸಿ. ತಮ್ಮಣ್ಣ, ಜಿ.ಟಿ. ದೇವೇಗೌಡ, ಎಸ್.ಆರ್. ಶ್ರೀನಿವಾಸ್, ವೆಂಕಟರಾವ್ ನಾಡಗೌಡ, ಸಿ.ಎಸ್. ಪುಟ್ಟರಾಜು, ಸಾರಾ ಮಹೇಶ್ ಹಾಗೂ ಬಹುಜನ ಸಮಾಜ ಪಾರ್ಟಿಯ ಎನ್. ಮಹೇಶ್ ಮಂತ್ರಿಗಳಾಗಿದ್ದಾರೆ. ಸಚಿವರಾಗಿ ಮೊದಲಿಗೆ ಜೆಡಿಎಸ್ ನ ಹೆಚ್.ಡಿ. ರೇವಣ್ಣ ಪ್ರಮಾಣವಚನ ಸ್ವೀಕರಿಸಿದರೆ ಕೊನೆಯಲ್ಲಿ ವಿಧಾನಪರಿಷತ್ ಸದಸ್ಯೆ ಜಯಮಾಲಾ ಪ್ರಮಾಣವಚನ ಸ್ವೀಕರಿಸಿದರು.

ಕಾಂಗ್ರೆಸ್ ತನಗೆ ಸಿಕ್ಕ 22 ಸ್ಥಾನಗಳ ಪೈಕಿ 15 ಸ್ಥಾನಗಳಿಗೆ ಮಾತ್ರ ಮಂತ್ರಿಗಳನ್ನಾಗಿ ಮಾಡಿದ್ದು, ಉಳಿದ ಸ್ಥಾನಗಳನ್ನು ಉಳಿಸಿಕೊಂಡಿದೆ. ಜೆಡಿಎಸ್ ತನ್ನ ಪಾಲಿನ 12 ಸ್ಥಾನಗಳ ಪೈಕಿ 10 ಸ್ಥಾನಗಳಿಗೆ ಮಂತ್ರಿಗಳನ್ನು ನೇಮಿಸಿ ಉಳಿದ ಎರಡು ಸ್ಥಾನಗಳನ್ನು ಉಳಿಸಿಕೊಂಡಿದೆ.

ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ನೂತನ ಸಚಿವರ ಬೆಂಬಲಿಗರು ಆಪಾರ ಸಂಖ್ಯೆಯಲ್ಲಿ ಜಮಾಯಿಸಿದ್ದು, ತಮ್ಮ ತಮ್ಮ ನಾಯಕರ ಪರ ಜಯಘೋಷ ಕೂಗಿದರು.  ನೂತನ ಸಚಿವರು, ಕ್ಷೇತ್ರದ ವಿವರ ಇಂತಿದೆ.

ಮೈತ್ರಿ ಸರ್ಕಾರದ ಕಾಂಗ್ರೆಸ್ ಸಚಿವರುಗಳು

 1. ಡಿ.ಕೆ.ಶಿವಕುಮಾರ್ – ಕನಕಪುರ – ಒಕ್ಕಲಿಗ
 2. ಆರ್ .ವಿ.ದೇಶಪಾಂಡೆ – ಹಳಿಯಾಳ – ಬ್ರಾಹ್ಮಣ
 3. ಕೃಷ್ಣ ಬೈರೇಗೌಡ – ಬ್ಯಾಟರಾಯನಪುರ – ಒಕ್ಕಲಿಗ
 4. ರಾಜಶೇಖರ್ ಪಾಟೀಲ್ – ಹುಮ್ನಾಬಾದ್ – ಲಿಂಗಾಯತ
 5. ಶಿವಾನಂದ ಪಾಟೀಲ್ – ಬಸವನ ಬಾಗೇವಾಡಿ – ಲಿಂಗಾಯತ
 6. ಜಮೀರ್ ಅಹ್ಮದ್ – ಚಾಮರಾಜಪೇಟೆ – ಅಲ್ಪಸಂಖ್ಯಾತ
 7. ಯು.ಟಿ.ಖಾದರ್ – ಮಂಗಳೂರು ಉತ್ತರ – ಅಲ್ಪಸಂಖ್ಯಾತ
 8. ಶಂಕರ್ – ರಾಣೆಬೆನ್ನೂರು – ಕುರುಬ
 9. ಕೆ.ಜೆ. ಜಾರ್ಜ್ – ಸರ್ವಜ್ಞ ನಗರ – ಕ್ರೈಸ್ತ
 10. ಪುಟ್ಟರಂಗಶೆಟ್ಟಿ – ಚಾಮರಾಜನಗರ – ಉಪ್ಪಾರ
 11. ಜಯಮಾಲ – ವಿಧಾನ ಪರಿಷತ್ ಸದಸ್ಯೆ – ಈಡಿಗ
 12. ಪ್ರಿಯಾಂಕ್ ಖರ್ಗೆ – ಚಿತ್ತಾಪುರ – ಎಸ್‍ಸಿ
 13. ವೆಂಕಟರಮಣಪ್ಪ – ಪಾವಗಡ – ಬೋವಿ
 14. ರಮೇಶ್ ಜಾರಕಿಹೊಳಿ – ಗೋಕಾಕ್ – ಎಸ್‍ಟಿ
 15. ಶಿವಶಂಕರ ರೆಡ್ಡಿ – ಗೌರಿಬಿದನೂರು – ರೆಡ್ಡಿ

ಮೈತ್ರಿ ಸರ್ಕಾರದ ಜೆಡಿಎಸ್ ಸಚಿವರುಗಳು

 1. ಎಸ್.ಆರ್. ಗುಬ್ಬಿ ಶ್ರೀನಿವಾಸ್ -ಗುಬ್ಬಿ- ಒಕ್ಕಲಿಗ
 2. ಎಚ್.ಡಿ. ರೇವಣ್ಣ – ಹೊಳೆನರಸಿಪುರ- ಒಕ್ಕಲಿಗ
 3. ಬಂಡೆಪ್ಪ ಕಾಶೆಂಪುರ – ಬೀದರ್ ದಕ್ಷಿಣ – ಕುರುಬ
 4. ಜಿಟಿ ದೇವೇಗೌಡ – ಚಾಮುಂಡೇಶ್ವರಿ- ಒಕ್ಕಲಿಗ
 5. ಎಂ.ಸಿ. ಮನಗೂಳಿ – ಸಿಂಧಗಿ – ಲಿಂಗಾಯತ
 6. ವೆಂಕಟರಾವ್ ನಾಡಗೌಡ – ಸಿಂಧನೂರು- ಲಿಂಗಾಯತ
 7. ಸಿ.ಎಸ್. ಪುಟ್ಟರಾಜು – ಮೇಲುಕೋಟೆ – ಒಕ್ಕಲಿಗ
 8. ಸಾ.ರಾ.ಮಹೇಶ್ – ಕೆ.ಆರ್ ನಗರ – ಒಕ್ಕಲಿಗ
 9. ಎನ್. ಮಹೇಶ್ – ಕೊಳ್ಳೇಗಾಲ – ದಲಿತ
 10. ಡಿ.ಸಿ. ತಮ್ಮಣ್ಣ – ಮದ್ದೂರು – ಒಕ್ಕಲಿಗ

ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಕನ್ನಡನಾಡಿ.com ಪೇಜ್ ಲೈಕ್ ಮಾಡಿ..