ಆಪರೇಶನ್ ಕಮಲ ಸಾಧ್ಯತೆ : ರಾಜ್ಯದಲ್ಲಿ ಮತ್ತೊಮ್ಮೆ ಕತ್ತೆ – ಕುದುರೆ ವ್ಯಾಪಾರದ ಭಯ..! ಇಂದು ರೆಸಾರ್ಟ್ ನತ್ತ ಜೆ.ಡಿ.ಎಸ್. ಶಾಸಕರು…?

ಬೆಂಗಳೂರು: ಸರ್ಕಾರ ರಚನೆಗೆ ಮುಂದಾಗಿರುವ ಜೆ.ಡಿ.ಎಸ್. ನಾಯಕ ಹೆಚ್.ಡಿ. ಕುಮಾರಸ್ವಾಮಿ ಇಂದು ಶಾಸಕಾಂಗ ಸಭೆ ಕರೆದಿದ್ದಾರೆ.

ಎಲ್ಲಾ 38 ಜೆ.ಡಿ.ಎಸ್. ಶಾಸಕರು ಬೆಳಿಗ್ಗೆ 9.30 ಕ್ಕೆ ಸಭೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿದ್ದು, ಸರ್ಕಾರ ರಚನೆಯ ಬಗ್ಗೆ ಶಾಸಕರಿಂದ ಅಭಿಪ್ರಾಯ ಪಡೆಯಲಾಗುವುದು. ರಾಜ್ಯಪಾಲರು ಆಹ್ವಾನ ನೀಡುವವರೆಗೆ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ತೀರ್ಮಾನಿಸಲಾಗಿದ್ದು, ಕೇರಳದ ರೆಸಾರ್ಟ್ ಗೆ ಕರೆದೊಯ್ಯಲು ಚಿಂತನೆ ನಡೆಸಲಾಗಿದೆ.

ಪಕ್ಷದ ಶಾಸಕರನ್ನು ಸೆಳೆಯಲು ಬಿ.ಜೆ.ಪಿ. ಆಪರೇಷನ್ ಕಮಲ ನಡೆಸುವ ಮಾಹಿತಿ ಹಿನ್ನಲೆಯಲ್ಲಿ ಹೆಚ್.ಡಿ. ಕುಮಾರಸ್ವಾಮಿ, ಆಪರೇಷನ್ ಕಮಲಕ್ಕೆ ಬಲಿಯಾಗದಂತೆ ಶಾಸಕರಿಗೆ ಸೂಚನೆ ನೀಡಿದ್ದಾರೆ. ನಾವೇ ಸರ್ಕಾರ ರಚಿಸಲಿರುವುದರಿಂದ ಸೂಕ್ತ ಸ್ಥಾನ ಸಿಗಲಿದೆ ಎಂದು ತಿಳಿಸಿದ್ದಾರೆ.

👍👍 ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ 👍👍