ಸಿಎಂ ಆಗಲು ಒಂಟಿ ಕಾಲಲ್ಲಿ ನಿಂತಿರುವ ಹೆಚ್‌.ಡಿ ಕುಮಾರಸ್ವಾಮಿ : 2 ದಿನದಲ್ಲಿ ಸರ್ಕಾರ ರಚಿಸಲು ಅವಕಾಶ ಕೊಡದಿದ್ರೆ ಕೋರ್ಟ್‌ ಗೆ ಜೆಡಿಎಸ್..!!

ಬೆಂಗಳೂರು: ರಾಜ್ಯದಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾಗಿದೆ. ಯಾವುದೇ ಪಕ್ಷಕ್ಕೂ ಬಹುಮತ ಸಿಕ್ಕಿಲ್ಲ. ಈ ನಡುವೆ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಘೋಷಣೆ ಮಾಡಿವೆ. ಹಾಗಂತ 103 ಸೀಟು ಗೆದ್ದಿರೋ ಬಿಜೆಪಿ ಸುಮ್ಮನೆ ಕೂರಲು ಸಿದ್ಧವಿಲ್ಲ. ತಾನೇ ಅತಿ ಹೆಚ್ಚು ಸೀಟ್‌ ಪಡೆದಿರೋ ಪಕ್ಷ, ನಮಗೆ ಸರ್ಕಾರ ರಚಿಸಲು ಅವಕಾಶ ಕೊಡಿ ಅಂತ ರಾಜ್ಯಪಾಲರಲ್ಲಿ ಕೋರಿದೆ.

ಇತ್ತ ಜೆಡಿಎಸ್‌-ಕಾಂಗ್ರೆಸ್‌ ಕೂಡ ಸರ್ಕಾರ ರಚನೆಗೆ ಹಕ್ಕುಪತ್ರ ಸಲ್ಲಿಸಿವೆ. ಮತ್ತೆ ಸಿಎಂ ಆಗಲು ಹೆಚ್‌ಡಿ ಕುಮಾರಸ್ವಾಮಿ ಒಂಟಿ ಕಾಲಲ್ಲಿ ನಿಂತಿದ್ದಾರೆ. ಆದ್ರೆ ರಾಜ್ಯಪಾಲರು ಸರ್ಕಾರ ರಚನೆಗೆ ಯಾರನ್ನ ಆಹ್ವಾನಿಸ್ತಾರೆ ಅನ್ನೋದೆ ಈಗಿರೋ ಪ್ರಶ್ನೆ. ಒಂದ್ವೇಳೆ ಎರಡು ದಿನದಲ್ಲಿ ರಾಜ್ಯಪಾಲರು ತಮ್ಮನ್ನ ಸರ್ಕಾರ ರಚನೆಗೆ ಆಹ್ವಾನಿಸದಿದ್ರೆ ಹೈಕೋರ್ಟ್‌ ಮೆಟ್ಟಿಲೇರಲು ಜೆಡಿಎಸ್‌ ನಿರ್ಧರಿಸಿದೆ. ಹೈಕೋರ್ಟ್‌ಗೆ ಪಿಟಿಶನ್‌ ಸಲ್ಲಿಸಲು ತೀರ್ಮಾನಿಸಿದೆ.

ಬಿಹಾರದಲ್ಲೂ ಇದೇ ಸ್ಥಿತಿ ನಿರ್ಮಾಣವಾಗಿತ್ತು..!

2005ರಲ್ಲಿ ಬಿಹಾರದಲ್ಲೂ ಇದೇ ರೀತಿಯ ರಾಜಕೀಯ ಸ್ಥಿತಿ ನಿರ್ಮಾಣವಾಗಿತ್ತು. ಆಗ ಬಿಹಾರದಲ್ಲಿ ಒಟ್ಟು ವಿಧಾನಸಭಾ ಕ್ಷೇತ್ರಗಳು 243. ಆರ್‌ಜೆಡಿ ಮೈತ್ರಿಕೂಟವಾಗ್ಲಿ ಅಥವಾ ಬಿಜೆಪಿ ಮೈತ್ರಿಕೂಟವಾಗ್ಲಿ ಅಂದು ಸ್ಪಷ್ಟಬಹುಮತ ಹೊಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ವಿಧಾನಸಭೆಯನ್ನ ವಿಸರ್ಜಿಸಲಾಗಿತ್ತು. ಈ ವೇಳೆ ರಾಮೇಶ್ವರ ಪ್ರಸಾದ್‌ ಎಂಬುವವರು ಇದ್ರ ವಿರುದ್ಧ ಕೋರ್ಟ್‌ ಮೆಟ್ಟಿಲೇರಿದ್ರು. ಆಗ ಕೋರ್ಟ್‌ ಅಸೆಂಬ್ಲಿ ವಿಸರ್ಜಿಸಿದ್ದು ಅಸಂವಿಧಾನಿಕ ಎಂದು ತೀರ್ಪು ನೀಡಿತ್ತು. ಆದ್ರೆ ಮತ್ತೆ ಅಸೆಂಬ್ಲಿಯನ್ನ ಅಧಿಕಾರಕ್ಕೆ ತರೋ ಅವಕಾಶ ಕೋರ್ಟ್‌ಗೆ ಇರಲಿಲ್ಲ. ಹೀಗಾಗಿ ಬಿಹಾರದಲ್ಲಿ ಆರು ತಿಂಗಳ ನಂತ್ರ ಮತ್ತೆ ಚುನಾವಣೆ ನಡೆದಿತ್ತು. ಆವತ್ತು ಕೋರ್ಟ್‌  ನೀಡಿದ ತೀರ್ಪಿನ ಪ್ರತಿಯನ್ನೇ ಇಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಇಂದು ರಾಜ್ಯಪಾಲ ವಜುಭಾಯಿ ವಾಲಾಗೆ ನೀಡಿದ್ದಾರೆ. ಅಂದು ಬಿಹಾರದಲ್ಲಿ ಯಾವ ಸ್ಥಿತಿ ನಿರ್ಮಾಣವಾಗಿತ್ತೋ ಇಂದು ಆ ಸ್ಥಿತಿ ನಿರ್ಮಾಣವಾಗಬಾರದು ಎಂದ್ರೆ ನಮಗೆ ಸರ್ಕಾರ ರಚಿಸಲು ಅವಕಾಶ ನೀಡಿ ಎಂದು ಕುಮಾರಸ್ವಾಮಿ ಮನವಿ ಮಾಡಿದ್ದಾರೆ. ಜೊತೆಗೆ ಇದಕ್ಕೆ ರಾಜ್ಯಪಾಲರು 2 ದಿನದಲ್ಲಿ ಸ್ಪಂದಿಸದೇ ಇದ್ದರೆ ಕೋರ್ಟ್‌ ಮೆಟ್ಟಿಲೇರಲು ಚಿಂತನೆ ನಡೆಸಿದ್ದಾರೆ.

👍👍 ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ 👍👍