ತನ್ನ ಲಿಂಗವನ್ನೇ ಬದಲಾಯಿಸಿಕೊಂಡ ಕಾಂಗ್ರೆಸ್ ರಾಜ್ಯಾಧ್ಯಕ್ಷ ಜಿ. ಪರಮೇಶ್ವರ್ ಪುತ್ರ..!! ಶಶಾಂಕ್ ಈಗ ಶಾನಾ.. ವೀಡಿಯೋ ನೋಡಿ..

Karnataka-Congress-President-GParameshwar's-son-changed-his-gender - kannadanaadi

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಅವರ ಪುತ್ರ ಲಿಂಗಪರಿವರ್ತನೆಗೊಂಡು ಪುತ್ರಿಯಾಗಿ ಬದಲಾಗಿದ್ದು, ನನಗೆ ಯಾವುದು ಸರಿ ಅನಿಸಿತೋ ಅದನ್ನೇ ಮಾಡಿದ್ದೇನೆ ಅಂತಾ ಹೇಳ್ಕೊಂಡಿದ್ದಾರೆ.

Karnataka-Congress-President-GParameshwar's-son-changed-his-gender - kannadanaadi

ಕೆಲ ತಿಂಗಳ ಹಿಂದೆಯೇ ವಿದೇಶದಲ್ಲಿ ಅವರು ಲಿಂಗಪರಿವರ್ತನೆ ಮಾಡಿಕೊಂಡಿದ್ದು, ಶಶಾಂಕ್ ಅನ್ನೋ ತಮ್ಮ ಹೆಸರನ್ನು ಕೂಡ ಶಾನ ಅಂತ ಬದಲಾಯಿಸಿಕೊಂಡಿದ್ದಾರೆ. ಹಾಗಂತ ನಾನು ‘ಗೇ’ ಅಲ್ಲ ಅನ್ನೋದನ್ನ ಶಾನಾ ಸ್ಪಷ್ಟಪಡಿಸಿದ್ದಾರೆ.
ಹಲವು ವರ್ಷಗಳಿಂದಲೂ ನನ್ನೊಳಗೆ ನಡೀತಿದ್ದ ಪರಿವರ್ತನೆಯನ್ನು ನಾನಷ್ಟೇ ಗಮನಿಸಿಕೊಂಡು ಬಂದಿದ್ದೆ. ಇದೆಲ್ಲದರ ಪರಿಣಾಮವಾಗಿ ನಾನೀಗ ಲಿಂಗ ಪರಿವರ್ತನೆ ಮಾಡಿಕೊಂಡಿದ್ದೇನೆ. ಸಮಾಜದಲ್ಲಿನ ಕಟ್ಟುಪಾಡುಗಳಿಂದಾಗಿ ಇಲ್ಲೀವರೆಗೂ ನನ್ನೊಳಗಿನ ತಳಮಳಗಳನ್ನು ಅದುಮಿಟ್ಟು ಬದುಕಿದ್ದೆ. ಆದ್ರೆ ಇನ್ನು ಮುಂದೆ ನನ್ನ ಇಷ್ಟದಂತೆ ಬದುಕ ಬಯಸುತ್ತೇನೆ ಅಂತಾ ಶಾನಾ ವಿದೇಶದಿಂದಲೇ ಪ್ರತಿಕ್ರಿಯಿಸಿದ್ದಾಳೆ.

Karnataka-Congress-President-GParameshwar's-son-changed-his-gender - kannadanaadiಬಾಲ್ಯದಿಂದಲೂ ನಾನು ನನ್ನ ಭಾವನೆಗಳನ್ನು ವ್ಯಕ್ತಪಡಿಸಲಾಗದೇ ತುಂಬಾ ಕಷ್ಟಪಡುತ್ತಾ ಬಂದಿದ್ದೆ. ಇದೀಗ ನನ್ನನ್ನು ನಾನು ಬದಲಾಯಿಸಿಕೊಂಡು ಸ್ವತಂತ್ರಳಾಗಿದ್ದೇನೆ. ಜೀವನದಲ್ಲಿ ಸ್ವತಂತ್ರವಾಗಿ ನಿರ್ಧಾರ ಕೈಗೊಳ್ಳಲು ಹೆದರುವವರಿಗೆ ನನ್ನ ನಿರ್ಧಾರ ಪ್ರೇರಣೆಯಾಗಲಿ ಅಂತಾನೂ ಅವರು ಹೇಳ್ಕೊಂಡಿದ್ದಾರೆ. ನಾನು ಪರಿವರ್ತನೆಯಾದ ಮಾತ್ರಕ್ಕೆ ಎಲ್ಲವೂ ಕಳೆದು ಹೋಯಿತು ಅಂತೇನಲ್ಲ. ನಾನು ಈಗಲೂ ನನ್ನ ಕಾರುಗಳನ್ನ ಪ್ರೀತಿಸುತ್ತೇನೆ. ನನ್ನ ಜೀವನವನ್ನ ಪೂರ್ತಿವಾಗಿ ಜೀವಿಸುತ್ತೇನೆ ಅನ್ನೋದನ್ನ ಶಾನ್‌ ಸ್ಪಷ್ಟಪಡಿಸಿದ್ದಾರೆ.

ನಾನು ಹೆಣ್ಣಾಗಿ ಪರಿವರ್ತನೆಯಾಗುತ್ತಿರುವ ವಿಚಾರ ತಿಳಿದಾಗ ನನ್ನ ಸ್ನೇಹಿತರು ದೂರವಾಗಿದ್ದಾರೆ. ಆದ್ರೂ ನನ್ನ ನಿರ್ಧಾರದ ಬಗ್ಗೆ ನನಗೆ ಹೆಮ್ಮೆಯಿದೆ ಅಂತಾ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿರುವ ಶಾನಾ, ತಾನು ಇನ್ನು ಮೇಲೆ ಜೀವನದಲ್ಲಿ ನೊಂದ ಮಹಿಳೆಯರ ಪರವಾಗಿ ಕೆಲಸ ಮಾಡೋದಾಗಿ ಘೋಷಿಸಿದ್ದಾರೆ. ಇದಕ್ಕಾಗಿ ತಾವೊಂದು ಸ್ವಯಂ ಸೇವಾ ಸಂಸ್ಥೆಯನ್ನು ಸ್ಥಾಪಿಸುವ ಇಂಗಿತವನ್ನೂ ವ್ಯಕ್ತಪಡಿಸಿದ್ದಾರೆ.

Karnataka-Congress-President-GParameshwar's-son-changed-his-gender - kannadanaadi

ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್‌ ಅವರಿಗೆ ಶಶಾಂಕ್ ಏಕೈಕ ಪುತ್ರ. ಆತ ತಗೊಂಡಿರೋ ನಿರ್ಧಾರದಿಂದ ಕುಟುಂಬದವರಿಗೂ ಆ ಕ್ಷಣಕ್ಕೆ ಗಾಬರಿಯಾಗಿದೆ. ಆದ್ರೆ ಇದೆಲ್ಲಾ ತಿಂಗಳುಗಳ ಹಿಂದೇನೇ ನಡೆದಿರೋ ಬೆಳವಣಿಗೆಯಾಗಿರೋದ್ರಿಂದ, ಸದ್ಯ ಕುಟುಂಬದವರು ಕೂಡ ಶಾನಾ ಜೊತೆ ಹೊಂದಿಕೊಂಡಿದ್ದಾರೆನ್ನಲಾಗಿದೆ.

ಶಾನಾ ವೀಡಿಯೋ ನೋಡಿ..

👍👍 ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ 👍👍