ಶೇಮ್ ಶೇಮ್.. ಕರ್ನಾಟಕ ರೆಸಾರ್ಟ್ ರಾಜಕೀಯ ಹೈ ಡ್ರಾಮಾ ಬೆನ್ನಲ್ಲೇ ತನ್ನ ಪಬ್ಲಿಸಿಟಿ ಬೇಳೆ ಬೇಯಿಸಿಕೊಳ್ಳೋಕೆ ಮುಂದಾದ ಕೇರಳ ಪ್ರವಾಸೋಧ್ಯಮ ..!!

ನವದೆಹಲಿ: ರಾಜ್ಯದಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾಗಿದೆ. ಕಾಂಗ್ರೆಸ್​​-ಜೆಡಿಎಸ್​ ಸಮ್ಮಿಶ್ರ ಸರ್ಕಾರ ರಚಿಸಲು ಮುಂದಾಗಿವೆ. ಈ ಮಧ್ಯೆ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿರೋ ಬಿಜೆಪಿ ಸುಮ್ಮನೆ ಕೂತಿಲ್ಲ. ಚುನಾವಣಾ ಚಾಣಾಕ್ಯ ಅಮಿತ್​ ಶಾ ಬಿಜೆಪಿಯನ್ನ ಅಧಿಕಾರಕ್ಕೆ ತರಲು ಗೇಮ್​ ಪ್ಲಾನ್​ ಮಾಡ್ತಿದ್ದಾರೆ ಎನ್ನಲಾಗ್ತಿದೆ. ಹಾಗೇ ರೆಸಾರ್ಟ್​​ ರಾಜಕಾರಣ ಶುರುವಾಗುತ್ತಾ ಅನ್ನೋ ಕುತೂಹಲವೂ ಇದೆ. ಇವೆಲ್ಲದರ ಮಧ್ಯೆ ನೆರೆ ರಾಜ್ಯ ಕೇರಳ ಕರ್ನಾಟಕ ರಾಜಕೀಯ ಬೆಳವಣಿಗೆಗಳಲ್ಲಿ ತನ್ನ ಬೇಳೆ ಬೇಯಿಸಿಕೊಳ್ಳಲು ಮುಂದಾಗಿದೆ.

ಹೌದು. ಕರ್ನಾಟಕ ಚುನಾವಣಾ ಫಲಿತಾಂಶದ ಹಿನ್ನೆಲೆಯಲ್ಲಿ ಕೇರಳ ಪ್ರವಾಸೋದ್ಯಮ ಖಾತೆಯಿಂದ ಟ್ವೀಟ್​ ಮಾಡಲಾಗಿದೆ. ಕರ್ನಾಟಕದಲ್ಲಿ ಹೊಸದಾಗಿ ಚುನಾಯಿತರಾಗಿರುವ ಶಾಸಕರು, ದೇವರ ನಾಡು ಕೇರಳದ ‘ಸುರಕ್ಷಿತ ಹಾಗೂ ಸುಂದರ’ ರೆಸಾರ್ಟ್​​ಗಳಲ್ಲಿ ರಿಲ್ಯಾಕ್ಸ್​​ ಮಾಡುವಂತೆ ಆಹ್ವಾನ ನೀಡಿದೆ.

ತಮಿಳುನಾಡಿನಲ್ಲಿ ಪನ್ನೀರ್ ಸೆಲ್ವಂ ಬಣವನ್ನು ಸೇರದಂತೆ ತಡೆಯಲು ಎಐಎಡಿಎಂಕೆ ಪಕ್ಷದ 120 ಶಾಸಕರನ್ನ ವಿ.ಕೆ. ಶಶಿಕಲಾ ರೆಸಾರ್ಟ್​​ಗೆ ಕಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಈ ಹಿನ್ನೆಲೆಯಲ್ಲಿ ಕೇರಳ ಪ್ರವಾಸೋದ್ಯಮ ಇದೀಗ ಬೆಂಕಿಯಲ್ಲಿ ಚಳಿ ಕಾಯಿಸಿಕೊಳ್ಳೋಕೆ ಮುಂದಾಗಿದೆ. ಈ ಟ್ವೀಟ್​​ಗೆ 10 ಸಾವಿರಕ್ಕೂ ಹೆಚ್ಚು ಲೈಕ್ಸ್​ ಸಿಕ್ಕಿದ್ದು, 6 ಸಾವಿರಕ್ಕೂ ಹೆಚ್ಚು ಬಾರಿ ರೀಟ್ವೀಟ್​ ಆಗಿತ್ತು. ಆದ್ರೆ ಸದ್ಯಕ್ಕೆ ಈ ಟ್ವೀಟ್​ ಡಿಲೀಟ್​ ಆಗಿದೆ.

👍👍 ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ 👍👍