ಈ ಬಾರಿ ಚುನಾವಣಾ ಅಖಾಡಕ್ಕಿಳಿಯಲಿದ್ದಾರೆ ಮಹಾದಾಯಿ ಹೋರಾಟಗಾರರು..!

ಧಾರವಾಡ: ಮಹದಾಯಿ ಹೋರಾಟಗಾರರು ಚುನಾವಣೆಗೆ ಸ್ಪರ್ಧಿಸಲು ಅಣಿಯಾಗುತ್ತಿರುವುದರಿಂದ ಅವರಿಗೆ ನಮ್ಮ ಬೆಂಬಲವಿದೆ ಎಂದು ಕರ್ನಾಟಕ ರಾಜ್ಯ ರೈತ ಸೇನೆ ಅಧ್ಯಕ್ಷ ಕೆ.ಎ.ಲಕ್ಷ್ಮೀನಾರಾಯಣ ಹೇಳಿದ್ದಾರೆ. ನಾವು 30 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುತ್ತಿದ್ದು, ನಾನು ಗದಗ ಜಿಲ್ಲೆ ರೋಣ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದೇನೆ. ರೈತರೆಲ್ಲರೂ ಸೇರಿ ಒಗ್ಗಟ್ಟಿನ ಹೋರಾಟ ಮಾಡಿದ್ರೆ ವಿಧಾನಸಭೆಯಲ್ಲಿ ಚುನಾಯಿತರಾದವರು ಧ್ವನಿ ಎತ್ತ ಬಹುದು ಅಂತಾ ಅಭಿಪ್ರಾಯ ಪಟ್ಟಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ವೋದಯ ಪಕ್ಷದ ಕಟ್ಟಿದ್ದ ಪುಟ್ಟಣ್ಣಯ್ಯ ನನ್ನ ಸ್ನೇಹಿತ. ಆದರೆ, ಪಕ್ಷ ಕಟ್ಟಿ ಆತ ತಪ್ಪು ಮಾಡಿದ. ಅದಲ್ಲದೆ ಬಾಬಾಗೌಡರು ಕೂಡಾ ಹಿಂದೆ ತಪ್ಪು ಮಾಡಿದ್ದಾರೆ. ರೈತ ಚಳುವಳಿಯ ವ್ಯಾಪಾರಿ ಕೋಡಿಹಳ್ಳಿ ಚಂದ್ರಶೇಕರ್‌ ಅಸೆಂಬ್ಲಿಗೆ ಪ್ರವೇಶ ಮಾಡಿಯೇ ಇಲ್ಲ. ಅವರು ಇಲ್ಲಿ ಅಪ್ರಸ್ತುತ ಎಂದು ಕೆ.ಎ.ಲಕ್ಷ್ಮೀನಾರಾಯಣ ಅಭಿಪ್ರಾಯಪಟ್ಟರು.

ಪಕ್ಷಾತೀತ ಹೋರಾಟ ಸಮಿತಿ ಅಧ್ಯಕ್ಷ ಲೋಕನಾಥ್ ಹೆಬಸೂರು‌ ಮಾತನಾಡಿ, ಮಹದಾಯಿ ಹೋರಾಟಗಾರರಿಗೆ ನಮ್ಮ ಬೆಂಬಲವಿದೆ. ನಮಗೆ ಕುಡಿಯಲು ನೀರು ಬೇಕಾದರೆ, ರೈತರ ಸಾಲ ಮನ್ನಾ ಆಗಬೇಕಾದರೆ ನಾವು ಚುನಾವಣೆಯಲ್ಲಿ ಸ್ಪರ್ಧಿಸಲೇ ಬೇಕು. ಅಲ್ಲಿ ಗೆಲುವು ಸಾಧಿಸುವ ಮೂಲಕ ನಮ್ಮ ಬೇಕು ಬೇಡಗಳನ್ನು ಈಡೇರಿಸಿಕೊಳ್ಳಬೇಕು ಎಂದು ಲೋಕನಾಥ್ ಹೆಬಸೂರು‌ ಕರೆ ನೀಡಿದರು.

ಮಹಾದಾಯಿ ಹೋರಾಟದಲ್ಲಿ ಮೂರು ಪಕ್ಷಗಳು ಸರಿಯಾಗಿ ತಮ್ಮ ಜವಾಬ್ದಾರಿ ನಿಭಾಯಿಸಿಲ್ಲ. ಅವರು ಸರಿಯಾಗಿ ಕೆಲಸ ಮಾಡಿದ್ರೆ ನಾವು ಚುನಾವಣೆ ಕಣದಿಂದ ಹಿಂದೆ ಸರಿಯುತ್ತೇವೆ. ರಾಜಕೀಯ ಪಕ್ಷಗಳು ನೀರಿನ ವಿಚಾರದಲ್ಲಿ ರಾಜಕೀಯ ಮಾಡುತ್ತಿವೆ. ಇದರಿಂದ ಮೂರು ಪಕ್ಷಗಳು ಜನರಿಗೆ ಮೋಸ ಮಾಡದಂತೆ ಎಂದು ಲೋಕನಾಥ್ ಹೆಬಸೂರು‌ ಹರಿಹಾಯ್ದರು.

ಮೋದಿಗೆ ಬಿಸಿ ಮುಟ್ಟಿಸುತ್ತೇವೆ
ಎಪ್ರಿಲ್ 25 ಮತ್ತು 26 ರಂದು ಅಮರಣಾಂತ ಉಪವಾಸ ಸತ್ಯಾಗ್ರಹ ಮಾಡುವ ಮೂಲಕ ಪ್ರಧಾನಿಗೆ ಬಿಸಿ ಮುಟ್ಟಿಸುತ್ತೇವೆ. ಅವರು ಮಹದಾಯಿ ವಿಚಾರವಾಗಿ ರೈತರಿಗೆ ನ್ಯಾಯ ಕೊಡಿಸುವಲ್ಲಿ ವಿಫಲರಾಗಿದ್ದಾರೆ. ಈ ಬಾರಿ ಭೇಟಿಯಲ್ಲಾದರೂ ಪ್ರಧಾನಿ ಮೋದಿ ಮಹದಾಯಿ ವಿಷಯ ಪ್ರಸ್ತಾಪಿಸಬೇಕೆಂದು ಲೋಕನಾಥ್ ಹೆಬಸೂರ್ ಒತ್ತಾಯಿಸಿದರು.

👍👍 ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ 👍👍