ನನ್ನ ಮೃತ ತಂದೆಯ ಆಧಾರ್ ನಿಮಗ್ಯಾಕೆ.? ಸುಪ್ರೀಂಕೋರ್ಟ್​ನಲ್ಲಿ ಮೂರು ನಿಮಿಷಗಳ ವಾದ ಮಂಡಿಸಿದ ಹೆಚ್.ಆರ್ ಮ್ಯಾನೇಜರ್..

man-asking-his-died-father-biometric-of-adhar-in-supremecourt -kannadanaadi

ನವದೆಹಲಿ : ಆಧಾರ್​ ಕಾರ್ಡ್​ನ ಕುರಿತಾದ ವಿವಿಧ ದೂರುಗಳನ್ನು ಆಲಿಸುತ್ತಿರುವ ಸುಪ್ರೀಂಕೋರ್ಟ್​ ಹಲವು ವಿಚಿತ್ರ ಸಂಗತಿಗಳಿಗೆ ಸಾಕ್ಷಿಯಾಗುತ್ತಿದೆ. ಅಂತಹುದೇ ಒಂದು ವಿಚಿತ್ರ ಘಟನೆ ಗುರುವಾರ ಸುಪ್ರೀಂಕೋರ್ಟ್​ನಲ್ಲಿ ನಡೆದಿದೆ. ಮರಣ ಹೊಂದಿದ ತಂದೆಯ ಆಧಾರ್​ ಕಾರ್ಡ್​ ಬಯೋಮೆಟ್ರಿಕ್​ ಗುರುತಿನ ಮಾಹಿತಿಯನ್ನ ವಾಪಸ್​ ನೀಡಲು, ಯುಐಡಿಐಗೆ ನಿರ್ದೇಶಿಸುವಂತೆ ಕೋರಿ ವ್ಯಕ್ತಿಯೊಬ್ಬ ಸುಪ್ರೀಂಕೋರ್ಟ್​ ಮೆಟ್ಟಿಲೇರಿದ ವಿಚಿತ್ರ ಘಟನೆ ನವದೆಹಲಿಯಲ್ಲಿ ನಡೆದಿದೆ.

supreme court sets strict rules for cracker manufacturers - kannada naadi news

ಬೆಂಗಳೂರು ಮೂಲದ ಕಂಪನಿಯೊಂದರಲ್ಲಿ ಮಾನವ ಸಂಪನ್ಮೂಲ ಮ್ಯಾನೇಜರ್​ ಆಗಿರುವ ಸಂತೋಷ್ ಮಿನ್​ ಬಿ ಸುಪ್ರೀಂ ಕೋರ್ಟಗೆ ಅರ್ಜಿ ಸಲ್ಲಿಸಿದ ವ್ಯಕ್ತಿ. ಆದರೆ ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಮೂರ್ತಿ ದೀಪಕ್​ ಮಿಶ್ರಾ ಅವರನ್ನ ಒಳಗೊಂಡ ಪೀಠ ಸಂತೋಷ್​ಗೆ ಕೇವಲ ಮೂರು ನಿಮಿಷಗಳ ಕಾಲ ಮಾತ್ರ ಈ ಬಗ್ಗೆ ಮಾತನಾಡಲು ಅವಕಾಶ ನೀಡಿದೆ.

man-asking-his-died-father-biometric-of-adhar-in-supremecourt -kannadanaadi

ಈ ವೇಳೆ ಸಂತೋಷ್​ ತನ್ನ ತಂದೆ ಸಾವನಪ್ಪಿದ್ದರಿಂದ ಅವರ ಆಧಾರ್​ ಕಾರ್ಡ್​ನ ಬಯೋಮೆಟ್ರಿಕ್​ ಮಾಹಿತಿ ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರಕ್ಕೆ ಅವಶ್ಯಕತೆಯಿಲ್ಲ, ಅದಲ್ಲದೇ ಅದನ್ನ ದುರುಪಯೋಗ ಮಾಡಿಕೊಳ್ಳುವ ಸಾಧ್ಯತೆಯಿದೆ ಈ ಹಿನ್ನೆಲೆ ಬಯೋಮೆಟ್ರಿಕ್​ ವಾಪಸ್​ ನೀಡಿ ಎಂದು ಕೋರಿದ್ದಾನೆ. ಅಷ್ಟೆ ಅಲ್ಲದೇ . ಆಧಾರ್​ ಯೋಜನೆ ಅಘೋಷಿತ ತುರ್ತುಪರಿಸ್ಥಿತಿ ಎಂದು ತಿಳಿಸಿದ ವ್ಯಕ್ತಿ, ನನ್ನ ತಂದೆ ಸಾವನಪ್ಪುವ ಮೊದಲು ಯಾವುದೋ ಒಂದು ಕೆಲಸಕ್ಕಾಗಿ ಆಧಾರ್​ ಕಾರ್ಡ್​ ಬಳಸಿದ್ದರು. ಆದರೆ ಆ ವೇಳೆ, ವಯಸ್ಸಾದ ಹಿನ್ನೆಲೆಯಲ್ಲಿ ಕಣ್ಣು ಹಾಗೂ ಹೆಬ್ಬೆರಳಿನ ಗುರುತನ್ನು ಆಧಾರ್​ ಧೃಡಿಕರಿಸಲಿರಲಿಲ್ಲ ಎಂದು ಸಂತೋಷ್​ ಕೋರ್ಟ್​ಗೆ ತಿಳಿಸಿದ್ದಾರೆ.

ಸದ್ಯ ಸಂತೋಷ್​ರ ಮಾತನ್ನು ಆಲಿಸಿದ ಪೀಠ ಮಾರ್ಚ್​ 20ಕ್ಕೆ ತನ್ನ ವಿಚಾರಣೆಯನ್ನ ಮುಂದೂಡಿದೆ.

👍👍ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ 👍👍