ಮೋದಿ ಹತ್ಯೆಗೆ ಸ್ಕೆಚ್..? ಭಾರತ ಸೇರಿದಂತೆ ವಿದೇಶಗಳಿಂದಲೂ ಬೆಂಬಲ..! ಶಾಕಿಂಗ್ ಡೀಟೇಲ್ಸ್ ಇಲ್ಲಿದೆ.

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಯಶಸ್ಸೇ ಅವರ ಹತ್ಯೆಗೆ ಸ್ಕೆಚ್ ರೂಪಿಸಲು ಕಾರಣವಾಯ್ತಾ? ಅನ್ನೋ ಪ್ರಶ್ನೆಯನ್ನು ಭೀಮಾ ಕೋರೆಗಾಂವ್ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಬಂಧನವಾಗಿರೋ ಆರೋಪಿ ಮನೆಯಲ್ಲಿ ಸಿಕ್ಕಿದೆ ಎನ್ನಲಾದ ಪತ್ರ ಹುಟ್ಟುಹಾಕಿದೆ. ಯಾಕಂದ್ರೆ ಕೋರ್ಟ್​ನಲ್ಲಿ ವಕೀಲೆ ಉಜ್ವಲಾ ಪವಾರ್ ತಿಳಿಸಿದಂತೆ, ಪ್ರಧಾನಿ ಮೋದಿ 15ಕ್ಕೂ ಹೆಚ್ಚು ರಾಜ್ಯಗಳಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಯಶಸ್ವಿಯಾಗಿದ್ದಾರೆ. ಇದೇ ರೀತಿ ಮುಂದುವರೆದರೆ ಕಮ್ಯುನಿಸ್ಟ್ ಪಾರ್ಟಿಗೆ ಎಲ್ಲರೀತಿಯಿಂದಲೂ ತೊಂದರೆಯಾಗಲಿದೆ. ಈ ಹಿನ್ನೆಲೆಯಲ್ಲಿ ಅವರು ಮತ್ತೊಂದು ರಾಜೀವ್ ಗಾಂಧಿ ರೀತಿಯ ಹತ್ಯೆ ನಡೆಸುವ ಬಗ್ಗೆ ಯೋಚಿಸುತ್ತಿದ್ದಾರೆ ಅಂತಾ ಪತ್ರದದಲ್ಲಿ ಹೇಳಲಾಗಿದೆಯಂತೆ. ಅಷ್ಟೇ ಅಲ್ಲದೇ, ಈ ಪತ್ರದಲ್ಲಿ ಎಂ-14 ರೈಫಲ್​ ಹಾಗೂ 4 ಲಕ್ಷ ಗುಂಡುಗಳನ್ನು ಕೊಂಡುಕೊಳ್ಳಲು 8 ಕೋಟಿ ರೂಪಾಯಿಗಳ ಅವಶ್ಯಕತೆ ಇದೆ ಅಂತ ಸ್ಪಷ್ಟವಾಗಿ ನಮೂದಿಸಲಾಗಿದೆ ಅಂತ ಹೇಳಿದ್ರು. ಅಲ್ಲದೇ, ಈ ಪತ್ರದಲ್ಲಿ ರಾಜೀವ್ ಗಾಂಧಿ ರೀತಿಯ ಹತ್ಯೆ ನಡೆಸಬೇಕಿದೆ ಅಂತಾ ಹೇಳಲಾಗಿತ್ತಂತೆ.

ವಿದೇಶಗಳಿಂದಲೂ ಹತ್ಯೆ ಸ್ಕೆಚ್​ಗೆ ಬೆಂಬಲ?
ಇನ್ನು ಬಿಜೆಪಿ ಆಡಳಿತವಿರುವ ಪ್ರದೇಶದಲ್ಲಿ ಗಲಭೆ ನಡೆಸಿ ಅಂತ ಮತ್ತೊಂದು ಪತ್ರದಲ್ಲಿ ಸೂಚಿಸಲಾಗಿತ್ತು ಎನ್ನಲಾಗಿದೆ. ಅಲ್ಲದೇ, ಅದೇ ಪತ್ರದಲ್ಲಿ ಪ್ರಧಾನಿ ಮೋದಿ ಹತ್ಯೆಗೆ ಸಂಚು ರೂಪಿಸಲಾಗಿರುವ ಮಾಹಿತಿ ಕೂಡ ಲಭ್ಯವಾಗಿತ್ತು. ಅಲ್ಲದೇ ಲಂಡನ್, ಸ್ವೀಡನ್, ಅಮೆರಿಕಾದಲ್ಲಿ ನಮ್ಮ ಹೋರಾಟಕ್ಕೆ ಬೆಂಬಲಿಸುವವರಿದ್ದಾರೆ ಅಂತಾ ಪತ್ರದಲ್ಲಿ ಉಲ್ಲೇಖವಾಗಿರೋದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಇದಲ್ಲದೇ ಮುಂದಿನ ನಡೆಯ ಬಗ್ಗೆ ಯೋಜನೆ ರೂಪಿಸಲು ಹೊಸ ಪಾಸ್​ವರ್ಡ್​ ಕಳಿಸುವಂತೆ ಪತ್ರದಲ್ಲಿ ಸೂಚಿಸಲಾಗಿದೆ ಅಂತಾ ಪತ್ರದಲ್ಲಿ ತಿಳಿಸಲಾಗಿದೆಯಂತೆ.

ಬಯಲಾಗಿದ್ದು ಹೇಗೆ?
ಪುಣೆಯಲ್ಲಿ ನಡೆದಿದ್ದ ಭೀಮಾ-ಕೋರೆಗಾಂವ್ ಗಲಭೆಗೆ ಸಂಬಂಧಿಸಿದಂತೆ  ಪ್ರೀವೆಂನ್ಶನ್ ಆಫ್ ಅನ್ ಲಾ ಫುಲ್ ಆ್ಯಕ್ಟಿವಿಟಿ ಕಾನೂನಿನನ್ವಯ, ಮುಂಬೈ ನಿವಾಸಿ ಸುಧೀರ್ ಧವಲೆ, ದೆಹಲಿಯಿಂದ ರೋನಾ ಜಾಕಪ್ ವಿಲ್ಸನ್, ನಾಗಪುರದಲ್ಲಿ ಅಡ್ವೋಕೇಟ್ ಸುರೇಂದ್ರ ಗಾಡ್ಲಿಂಗ್, ಶೋಮಾ ಸೇನ್ ಹಾಗೂ ಮಹೇಶ್ ರೌತ್​​ರನ್ನು ಪೊಲೀಸರು ಬಂಧಿಸಿದ್ರು.  ಈ ಐವರನ್ನೂ ಪುಣೆಯ ಸೆಷನ್ ಕೋರ್ಟ್​ಗೆ ಹಾಜರುಪಡಿಸಲಾಗಿದ್ದು, ಜೂನ್ 14ರ ವರೆಗೆ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ.

ಇನ್ನು ಕೋರ್ಟ್​​ನಲ್ಲಿ ವಾದ ಮಂಡಿಸಿದ್ದ ಸರ್ಕಾರಿ ವಕೀಲೆ ಉಜ್ವಲಾ ಪವಾರ್, ದೆಹಲಿಯ ರೋನಾ ಜಾಕೋಬ್ ಮನೆಯಲ್ಲಿ ದೊರೆತಿದ್ದ ಲೆಟರ್​​ ಬಗ್ಗೆ ನ್ಯಾಯಾಧೀಶರಿಗೆ ತಿಳಿಸಿದ್ರು. ವಿಶೇಷ ಅಂದ್ರೆ ಗಲಭೆ ತನಿಖೆ ನಡೆಸಲು ಹೋಗಿದ್ದ ಪೊಲೀಸರಿಗೆ, ಪ್ರಧಾನಿ ಮೋದಿ ಹತ್ಯೆಗೆ ದೊಡ್ಡ ಸಂಚು ನಡೀತಾ ಇರೋದರ ಬಗ್ಗೆ ಸಾಕ್ಷಾಧಾರಗಳು ದೊರೆತಿದ್ದವು. ಒಟ್ಟಿನಲ್ಲಿ, ಬೆಂಕಿಯಿಲ್ಲದೇ ಹೊಗೆಯಾಡಲ್ಲ ಅನ್ನೋಹಾಗೆ ಸದ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಹತ್ಯಾಕಾಂಡಕ್ಕೆ ಸ್ಕೆಚ್ ಹಾಕಲಾಗಿದ್ದ ಸುದ್ದಿ ಅಪ್ಪಳಿಸಿದೆ. ಇದರ ಸತ್ಯಾಸತ್ಯತೆ ಮಾತ್ರ ಕೂಲಂಕುಷ ತನಿಖೆಯಿಂದ ಬಯಲಾಗಬೇಕಿದೆ. ಜೊತೆಗೆ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಕೂಡ ವಿಧಿಸಬೇಕಿದೆ.

ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಕನ್ನಡನಾಡಿ.com ಪೇಜ್ ಲೈಕ್ ಮಾಡಿ..

>
%d bloggers like this: