ಎಂ.ಬಿ ಪಾಟೀಲ್​​ಗೆ ರಾಹುಲ್ ವಾರ್ನಿಂಗ್ : ಬಂಡಾಯದ ಬಾವುಟ ಹಿಡಿದು ದೆಹಲಿಗೆ ಹೋದ ಅತೃಪ್ತ ಶಾಸಕ ಎಂ. ಬಿ ಪಾಟೀಲ್ ಗೆ ನಿರಾಸೆ..! ಫುಲ್ ಡೀಟೇಲ್ಸ್ ಇಲ್ಲಿದೆ.

ನವದೆಹಲಿ: ಸಚಿವ ಸ್ಥಾನ ಸಿಗದೆ ಅತೃಪ್ತಗೊಂಡು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ್ದ ಎಂ.ಬಿ ಪಾಟೀಲ್ ಆಸೆಗೆ ಹೈಕಮಾಂಡ್ ತಣ್ಣೀರು ಎರಚಿದೆ ಎನ್ನಲಾಗಿದೆ. ಮಾಜಿ ಸಚಿವ ಪಾಟೀಲ್‌, ರಾಹುಲ್ ಅವರನ್ನು ಇಂದು ಭೇಟಿಯಾಗಿ,​ ತಮಗೆ ಸಚಿವ ಸ್ಥಾನ ಮಿಸ್ಸಾಗಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದರು. ತಮಗೆ ಡಿಸಿಎಂ ಅಥವಾ ಕೆಪಿಸಿಸಿ ಅಧ್ಯಕ್ಷ ಪಟ್ಟ ನೀಡುವಂತೆ ಡಿಮ್ಯಾಂಡ್ ಮಾಡಿದ್ದರು ಎನ್ನಲಾಗಿದೆ.

ಆದರೆ ಎಂ.ಬಿ ಪಾಟೀಲ್​ರ ಅಹವಾಲನ್ನು ಆಲಿಸಿದ ರಾಹುಲ್ ಗಾಂಧಿ, ಮತ್ತೊಂದು ಡಿಸಿಎಂ ಹುದ್ದೆ ಸೃಷ್ಟಿ ಮಾಡಲಾಗದು. ಈಗಾಗಲೇ ಈ ವಿಚಾರ ಸ್ಪಷ್ಟಪಡಿಸಲಾಗಿದೆ. ಎರಡೆರಡು ಡಿಸಿಎಂ ಸ್ಥಾನ ಸೃಷ್ಟಿ ಅಸಾಧ್ಯವೆಂದು ಹೇಳಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೇ ನಿಮಗೆ ಬೇಕಿದ್ದರೆ, ಸಚಿವ ಸ್ಥಾನ ನೀಡುತ್ತೇವೆ, ಪ್ರಮುಖ ಖಾತೆಯನ್ನೂ ಕೊಡುತ್ತೇವೆ. ಆದರೆ, ನಿಮಗಾಗಿಯೇ ಮತ್ತೊಂದು ಉಪಮುಖ್ಯಮಂತ್ರಿ ಸ್ಥಾನ ಅಸಾಧ್ಯ.

ಭಿನ್ನಮತವನ್ನ ಇಲ್ಲಿಗೇ ನಿಲ್ಲಿಸಿ. ಲಿಂಗಾಯತ ಸಮುದಾಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಬಿಜೆಪಿಯವರ ಬಾಯಿಗೆ ಆಹಾರವಾಗಬೇಡಿ. ಎಲ್ಲರೂ ಒಟ್ಟಾಗಿ ಮೈತ್ರಿ ಸರ್ಕಾರಕ್ಕೆ ಸಹಕರಿಸಿ ಎಂದು ಎಂ.ಬಿ ಪಾಟೀಲ್ ಗೆ ರಾಹುಲ್ ಗಾಂಧಿ ಖಡಕ್​ ಸೂಚನೆ ನೀಡಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿವೆ.

ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಕನ್ನಡನಾಡಿ.com ಪೇಜ್ ಲೈಕ್ ಮಾಡಿ ..

>
%d bloggers like this: