ಮೊಹಮ್ಮದ್ ನಲಪಾಡ್ ಗೆ ಜಾಮೀನು – 116 ದಿನಗಳ ಸೆರೆ ವಾಸ ಅಂತ್ಯ..! ಜಾಮೀನು ಸಿಕ್ಕಿದ್ದಕ್ಕೆ ಜೈಲ್​ನಲ್ಲಿ ನಲಪಾಡ್​ ಭರ್ಜರಿ ಡಾನ್ಸ್​..!

116 ದಿನಗಳ ಸೆರೆವಾಸದ ಬಳಿಕ ಮೊಹಮ್ಮದ್ ನಲಪಾಡ್ ಗೆ ಬಿಗ್ ರಿಲೀಫ್ ಸಿಕ್ಕಿದೆ. ರಂಜಾನ್​ ಎದುರಿನಲ್ಲೇ, ಹೈಕೋರ್ಟ್​ ನಲಪಾಡ್​​​ ಕುಟುಂಬಕ್ಕೆ ಸಿಹಿಸುದ್ದಿ ನೀಡಿದ್ದು, ಷರತ್ತು ಬದ್ಧ ಜಾಮೀನು ನೀಡಿ ಆದೇಶ ಹೊರಡಿಸಿದೆ. ಸಾಕ್ಷಿ ನಾಶ ಪಡಿಸಬಾರದು, ಅಗತ್ಯವಿದ್ದರೇ ಕಡ್ಡಾಯವಾಗಿ ತನಿಖೆಗೆ ಸಹಕರಿಸಬೇಕು, ಅಧೀನ ನ್ಯಾಯಾಲಯದ ವಿಚಾರಣೆಗೆ ಹಾಜರಾಗಬೇಕು ಎಂಬುದು ಸೇರಿದಂತೆ ಹಲವು ನಿಯಮ ವಿಧಿಸಿದೆ.

ನಿನ್ನೆ ಮೊಹಮ್ಮದ್​ ನಲಪಾಡ್​ ಜಾಮೀನು ನೀಡುವಂತೆ ಹಿರಿಯ ವಕೀಲರಾದ ಬಿ.ವಿ.ಆಚಾರ್ಯ ವಾದ ಮಂಡಿಸಿದ್ದರು. ಚಾರ್ಜ್​ಶೀಟ್​​ ಸಲ್ಲಿಕೆಯಾಗಿರೋದರಿಂದ ಸಾಕ್ಷಿ ನಾಶದ ಪ್ರಶ್ನೆ ಇಲ್ಲ. ಅಲ್ಲದೇ ಇದು ಉದ್ದೇಶಿತ ಕೃತ್ಯವಲ್ಲ ಹೀಗಾಗಿ ಜಾಮೀನು ನೀಡುವಂತೆ ಮನವಿ ಮಾಡಿದ್ದರು. ವಿಚಾರಣೆ ಬಳಿ ತೀರ್ಪನ್ನು ಇಂದು ಮುಂದೂಡಿದ್ದ ನ್ಯಾಯಾಲಯ ಬೆಳಗ್ಗೆ ಜಾಮೀನು ಮಂಜೂರು ಮಾಡಿದೆ.

ಇದೀಗ ನಲಪಾಡ್ ಜಾಮೀನು ಪ್ರತಿ ಅಧೀನ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿದ್ದು, ಅಲ್ಲಿನ ಪರಿಶೀಲನೆ ಬಳಿಕ ಆದೇಶದ ಪ್ರತಿ ಜೈಲಿಗೆ ರವಾನೆಯಾಗಲಿದ್ದು, ಸಂಜೆ ವೇಳೆಗೆ ಮೊಹಮ್ಮದ್ ನಲ್ಪಾಡ್​ ಜೈಲಿನಿಂದ ಹೊರಬರಲಿದ್ದಾರೆ. ಇನ್ನು ಜಾಮೀನಿಗೆ ವೈಯಕ್ತಿಕ ಬಾಂಡ್​,ಭದ್ರತಾ ಶ್ಯೂರಿಟಿ ನೀಡಲು ನ್ಯಾಯಾಲಯ ಆದೇಶಿಸಿದೆ. ಒಟ್ಟಿನಲ್ಲಿ 116 ದಿನಗಳ ಮೊಹಮ್ಮದ್ ನಲ್ಪಾಡ್​ ಸೆರೆವಾಸ ಕೊನೆಗೊಂಡಂತಾಗಿದೆ.

ಜಾಮೀನು ಸಿಕ್ಕಿದ್ದಕ್ಕೆ ಜೈಲ್​ನಲ್ಲಿ ನಲಪಾಡ್​ ಭರ್ಜರಿ ಡಾನ್ಸ್..​!

ಜಾಮೀನು ಸಿಕ್ಕಿರುವ ಸುದ್ದಿ ತಲುಪುತ್ತಿದ್ದಂತೆ ಜೈಲಿನಲ್ಲಿ ನಲಪಾಡ್​ ಕುಣಿದು ಕುಪ್ಪಳಿಸಿದ್ದಾನೆ ಎನ್ನಲಾಗಿದೆ. ಸಹಚರರೊಂದಿಗೆ ಜೈಲಿನಲ್ಲಿಯೇ ಭರ್ಜರಿ ಡ್ಯಾನ್ಸ್ ಮಾಡಿ ಸಂತೋಷ ಪಟ್ಟಿದ್ದಾನೆ. ಅಂತೂ ಬೇಲ್ ಆಯ್ತು ಬಚಾವ್ ಆದ್ವಿ ಅಂತಾ ನಲಪಾಡ್ ನಿಟ್ಟುಸಿರು ಬಿಟ್ಟಿದ್ದಾನೆ. ಅಲ್ಲದೇ ನಮ್ಮನ್ನು ಚೆನ್ನಾಗಿ ನೋಡಿಕೊಂಡಿದ್ದೀರಿ. ನಿಮಗೆ ಧನ್ಯವಾದಗಳು ಅಂತಾ ಜೈಲ್​ ಸಿಬ್ಬಂದಿಗೆ ಹೇಳಿದ್ದಾನೆ ಎನ್ನಲಾಗಿದೆ.

ಜಾಮೀನು ಅರ್ಜಿ ತೀರ್ಪು ಹೊರಬೀಳುವ ಹಿನ್ನೆಲೆಯಲ್ಲಿ ಟಿವಿ ಮುಂದೆಯೇ ನಲಪಾಡ್​ ಕೂತಿದ್ದ. ಈಗ ಮನೆ ಸೇರುವ ಖುಷಿಯಲ್ಲಿದ್ದಾನೆ ಎಂದು ತಿಳಿದುಬಂದಿದೆ.

ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಕನ್ನಡನಾಡಿ.com ಪೇಜ್ ಲೈಕ್ ಮಾಡಿ..