ಎನ್.ಎ.ಹ್ಯಾರಿಸ್ ಪರ ರಮ್ಯಾ ಬ್ಯಾಟಿಂಗ್​ : ಹ್ಯಾರಿಸ್​ಗೆ ಸಿಕ್ಕೆ ಬಿಡ್ತು ‘ಕೈ’ ಟಿಕೆಟ್..!

ಬೆಂಗಳೂರು : ವಿದ್ವತ್ ಮೇಲಿನ ಹಲ್ಲೆ ಪ್ರಕರಣದ ಹಿನ್ನೆಲೆಯಲ್ಲಿ ಶಾಂತಿನಗರ ಕ್ಷೇತ್ರದ ಶಾಸಕ ಎನ್.ಎ.ಹ್ಯಾರಿಸ್​​ಗೆ ಈ ಬಾರಿ ಟಿಕೆಟ್ ಕೈ ತಪ್ಪುತ್ತೆ ಎಂದು ಹೇಳಲಾಗುತ್ತಿತ್ತು. ಆದ್ರೆ 2018ರ ವಿಧಾನಸಭಾ ಚುನಾವಣೆಯಲ್ಲಿ ಹ್ಯಾರಿಸ್​ಗೆ ಕಾಂಗ್ರೆಸ್ ಹೈಕಮಾಂಡ್ ಮಣೆ ಹಾಕಿದೆ. ಮೊಹಮ್ಮದ್ ನಲಪಾಡ್ ಶಾಂತಿನಗರ ಕ್ಷೇತ್ರದ ಶಾಸಕ ಎನ್.ಎ.ಹ್ಯಾರಿಸ್ ಪುತ್ರರಾಗಿದ್ದು, ಪ್ರಕರಣದ ಬೆನ್ನಲ್ಲೇ ಅವರಿಗೆ ಟಿಕೆಟ್ ನೀಡುವುದು ಅನುಮಾನ ಎನ್ನಲಾಗಿತ್ತು. ಆದ್ರೆ ಕೊನೆ ಕ್ಷಣದಲ್ಲಿ ಶಾಸಕ ಎನ್.ಎ.ಹ್ಯಾರಿಸ್​ಗೆ ಶಾಂತಿನಗರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ನೀಡಲಾಗಿದೆ.

ಹೈಕಮಾಂಡ್ ಬಳಿ ಶಾಸಕರ ಪರ ಮಾಜಿ ಸಂಸದೆ ಬ್ಯಾಟಿಂಗ್

ಶಾಂತಿನಗರ ಕ್ಷೇತ್ರದ ಹಾಲಿ ಶಾಸಕ ಎನ್.ಎ.ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್, ವಿದ್ವತ್ ಮೇಲೆ ಹಲ್ಲೆ ನಡೆಸಿದ ಬೆನ್ನಲ್ಲೇ ಪಕ್ಷದಲ್ಲೇ ಸಾಕಷ್ಟು ಪರ-ವಿರೋಧಗಳು ವ್ಯಕ್ತವಾಗಿತ್ತು. ಖುದ್ದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರೇ ವಿದ್ವತ್ ಮೇಲಿನ ಹಲ್ಲೆಯನ್ನು ಖಂಡಿಸಿದ್ರು. ಸಿಎಂ ಸಿದ್ದರಾಮಯ್ಯ ಮತ್ತು ಗೃಹ ಸಚಿವ ರಾಮಲಿಂಗಾರೆಡ್ಡಿ, ಹ್ಯಾರಿಸ್ ಪುತ್ರನ ವಿರುದ್ಧ 307 ಪ್ರಕರಣ ದಾಖಲಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ರು. ಇದೆಲ್ಲದರ ಬೆನ್ನಲ್ಲೇ ಹೈಕಮಾಂಡ್ ಕೂಡ ಶಾಂತಿನಗರ ಕ್ಷೇತ್ರದ ಶಾಸಕ ಎನ್.ಎ.ಹ್ಯಾರಿಸ್ ಪುತ್ರನ ಪ್ರಕರಣ ಕುರಿತಂತೆ ವರದಿ ಕೆಳಿತ್ತು. ಹೀಗಾಗಿ ಟಿಕೆಟ್ ಖಂಡಿತಾವಾಗಿಯೂ ಹ್ಯಾರಿಸ್​ಗೆ ಕೈ ತಪ್ಪುತ್ತೆ ಎನ್ನಲಾಗಿತ್ತು. ಆದ್ರೆ ಕಡೆಯ ಹಂತದಲ್ಲಿ ಮಾಜಿ ಸಂಸದೆ ಹಾಗೂ ಎಐಸಿಸಿ ಐಟಿ ಸೆಲ್​ನ ಮುಖ್ಯಸ್ಥೆ ರಮ್ಯಾ ಹ್ಯಾರಿಸ್ ಪರ ಬ್ಯಾಟಿಂಗ್ ನಡೆಸಿದ್ದು, ಅವರಿಗೆ ಟಿಕೆಟ್ ಫೈನಲ್ ಮಾಡಿಸಿದ್ದಾರೆ.

ಅಷ್ಟಕ್ಕೂ ಹ್ಯಾರಿಸ್ ಪರ ರಮ್ಯಾ ಬ್ಯಾಟಿಂಗ್ ಏಕೆ?

ರಮ್ಯಾ ಕಾಂಗ್ರೆಸ್ ಸೇರ್ಪಡೆಯಾದ ಸಂದರ್ಭದಲ್ಲಿ ಶಾಂತಿನಗರದ ಬೂತ್​​ನಿಂದಲೇ ಗೆದ್ದು ಸಂಘಟನೆಯಲ್ಲಿ ತೊಡಗಿದ್ದಾರೆ. ಜೊತೆಗೆ ಶಾಸಕ ಹ್ಯಾರಿಸ್, ಮೊಹಮ್ಮದ್ ನಲಪಾಡ್ ಮತ್ತು ರಮ್ಯಾ ಮೂವರು ಒಳ್ಳೆಯ ಸ್ನೇಹಿತರು. ಅಂದು ರಮ್ಯಾ ರಾಜಕಾರಣಕ್ಕೆ ಎಂಟ್ರಿ ಕೊಡುವ ಸಮಯದಲ್ಲಿ ಬೆನ್ನಿಗೆ ನಿಂತಿದ್ದು ಶಾಸಕ ಹ್ಯಾರಿಸ್ ಮತ್ತು ಅವರ ಪುತ್ರ ಮೊಹಮ್ಮದ್ ನಲಪಾಡ್. ಇಂದು ಹ್ಯಾರಿಸ್ ಮತ್ತು ಮೊಹಮದ್ ನಲಪಾಡ್ ಗೆ ರಮ್ಯಾ ಋಣ ತೀರಿಸುವ ಸಲುವಾಗಿ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮುಂದೆ ಬ್ಯಾಟಿಂಗ್ ಮಾಡಿ, ಶಾಂತಿನಗರದ ಕಾಂಗ್ರೆಸ್ ಟಿಕೆಟ್ ಹ್ಯಾರಿಸ್ ಕೊಡಿಸುವಲ್ಲಿ ಸಫಲರಾಗಿದ್ದಾರೆ.

ಮೂರನೇ ಬಾರಿ ಆಯ್ಕೆಗೆ ಸಿದ್ಧರಾದ ಹ್ಯಾರಿಸ್
ಈಗಾಗಲೇ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಹ್ಯಾರಿಸ್, 2018ರ ಚುನಾವಣೆಯಲ್ಲಿ ಮತ್ತೆ ಆಯ್ಕೆಯಾಗಿ ಶಾಸಕರಾಗುತ್ತಾರಾ ಎಂಬ ಪ್ರಶ್ನೆ ಈಗ ಕಾಂಗ್ರೆಸ್ ನಲ್ಲಿ ಎದ್ದಿದೆ. ಚುನಾವಣಾ ಹೊಸ್ತಲಿನಲ್ಲಿ ಪುತ್ರನ ಪುಂಡಾಟ ಪ್ರಕರಣ ಹ್ಯಾರಿಸ್ ಓಟಕ್ಕೆ ಬ್ರೇಕ್ ಹಾಕುತ್ತೆ ಎಂಬುದನ್ನು ಕೆಲವರು ಹೇಳುತ್ತಿದ್ರೂ, ಶಾಸಕರಿಗೆ ಕ್ಷೇತ್ರದ ಮೇಲೆ ಹಿಡಿತವಿದೆ ಎಂಬ ಮಾಹಿತಿಯೂ ಲಭ್ಯವಾಗುತ್ತಿದೆ.

👍👍 ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ 👍👍