“ಪ್ರಧಾನಿ ನರೇಂದ್ರ ಮೋದಿ ಅವಿವಾಹಿತರು” ಎಂದ ಮಧ್ಯಪ್ರದೇಶ ರಾಜ್ಯಪಾಲರ ವಿರುದ್ಧ ಮೋದಿ ಪತ್ನಿ ಜಶೋಧಾಬೆನ್ ಕಿಡಿ..!

ಮಧ್ಯ ಪ್ರದೇಶ ರಾಜ್ಯಪಾಲರಾದ ಆನಂದಿ ಬೆನ್ ಪಟೇಲ್ ನೀಡಿರುವ ಹೇಳಿಕೆಯೊಂದು ಈಗ ಪ್ರಧಾನಿ ನರೇಂದ್ರ ಮೋದಿಯವರ ಪತ್ನಿ ಜಶೋದಾಬೆನ್ ಅವರ ಆಕ್ರೋಶಕ್ಕೆ ಕಾರಣವಾಗಿದೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡುವ ವೇಳೆ ಆನಂದಿ ಬೆನ್ ಪಟೇಲ್ ಪ್ರಧಾನಿ ನರೇಂದ್ರ ಮೋದಿ ಅವಿವಾಹಿತರು ಎಂದು ಹೇಳಿರುವುದಕ್ಕೆ ಕಿಡಿಕಾರಿರುವ ಜಶೋದಾಬೆನ್, ನಾನು ನರೇಂದ್ರ ಮೋದಿಯವರ ಪತ್ನಿ. ಅವರ ಪತ್ನಿಯಾಗಿಯೇ ಉಳಿಯುತ್ತೇನೆ ಎಂದಿದ್ದಾರೆ.

ಜಶೋದಾಬೆನ್ ಅವರ ಈ ಹೇಳಿಕೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವೈರಲ್ ಆಗಿದೆ. ವಿಡಿಯೋಗಳ ನೈಜತೆ ಕುರಿತು ಸ್ಪಷ್ಟನೆ ನೀಡಿರುವ ಜಶೋದಾಬೆನ್ ಅವರ ಸಹೋದರ, ವಿಡಿಯೋದಲ್ಲಿ ನೀಡಿರುವ ಹೇಳಿಕೆ ಜಶೋದಾಬೆನ್ ಅವರದ್ದೇ ಎಂದು ದೃಢಪಡಿಸಿದ್ದಾರೆ.

ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಕನ್ನಡನಾಡಿ.com ಪೇಜ್ ಲೈಕ್ ಮಾಡಿ..