ಇನ್ಮುಂದೆ ಮೋದಿ ಹತ್ತಿರಕ್ಕೆ ಹೋಗುವಂತಿಲ್ಲ ಮಂತ್ರಿಗಳು..! ಯಾಕೆ ಗೊತ್ತಾ..?

ಪ್ರಧಾನ ಮಂತ್ರಿ ನರೇಂದ್ರ ಮೋದಿ ಹತ್ಯೆಗೆ ಸ್ಕೆಚ್ ಹಾಕಲಾಗಿತ್ತು ಎಂಬ ಸುದ್ದಿ ಇಡೀ ದೇಶದ ಜನರನ್ನು ತಲ್ಲಣಗೊಳಿಸಿತ್ತು. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ರೀತಿಯನ್ನೇ ಮೋದಿ ಹತ್ಯೆಗೆ ಬಳಸುವ ಯತ್ನ ನಡೆದಿದೆ ಎಂಬ ಪತ್ರ ಪೊಲೀಸ್ ಕೈಗೆ ಸಿಕ್ಕಿತ್ತು. ಇದಾದ ನಂತ್ರ ನರೇಂದ್ರ ಮೋದಿಗೆ ನೀಡಲಾಗಿರುವ ಭದ್ರತೆಯಲ್ಲಿ ಕೆಲವೊಂದು ಬದಲಾವಣೆ ಮಾಡಲು ಗೃಹ ಸಚಿವಾಲಯ ಮುಂದಾಗಿದೆ.

ಗೃಹ ಸಚಿವಾಲಯದ ಹೊಸ ನಿಯಮದ ಪ್ರಕಾರ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಬಳಿ ಯಾವುದೇ ಸಚಿವರಾಗ್ಲಿ, ಅಧಿಕಾರಿಗಳಾಗ್ಲಿ ಹೋಗುವಂತಿಲ್ಲ. ರೋಡ್ ಶೋಗಳಲ್ಲಿ ಪ್ರಧಾನ ಮಂತ್ರಿಯವರಿಗೆ ಜನರಿಂದ ಸಾಕಷ್ಟು ದೂರವಿರುವಂತೆ ಸೂಚನೆ ನೀಡಲಾಗಿದೆ. ರೋಡ್ ಶೋಗಳು ಮೊದಲೇ ನಿರ್ಧಾರವಾಗುವುದ್ರಿಂದ ದಾಳಿ ಅಪಾಯ ಹೆಚ್ಚಿರುತ್ತದೆ ಎಂದು ಗೃಹ ಸಚಿವಾಲಯ ಹೇಳಿದೆ.

ಯಾವುದೇ ವ್ಯಕ್ತಿಗೆ ಪಿಎಂ ಹತ್ತಿರಕ್ಕೆ ಹೋಗಲು ಅನುಮತಿಯಿಲ್ಲ. ಯಾವುದೇ ಮಂತ್ರಿ ಪಿಎಂ ಬಳಿ ಹೋಗಲು ಬಯಸಿದ್ರೆ ಮೊದಲು ವಿಶೇಷ ರಕ್ಷಣಾ ಪಡೆ ಮುಂದೆ ಹಾಜರಾಗಬೇಕು. ಪರಿಶೀಲನೆ ನಂತ್ರವೇ ಅನುಮತಿ ಸಿಗಲಿದೆ.

ರೋಡ್ ಶೋಗಳನ್ನು ಕಡಿಮೆ ಮಾಡುವಂತೆ ಮೋದಿಗೆ ರಕ್ಷಣಾ ಏಜೆನ್ಸಿಗಳು ಸಲಹೆ ನೀಡಿವೆ. ಛತ್ತೀಸ್ಗಡ, ಜಾರ್ಖಂಡ, ಮಧ್ಯಪ್ರದೇಶ, ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆ ಪ್ರಚಾರದಲ್ಲಿ ಮೋದಿ ಪಾಲ್ಗೊಳ್ಳಲಿದ್ದಾರೆ. 2019ರ ಸಾರ್ವತ್ರಿಕ ಚುನಾವಣೆಯನ್ನು ಬಿಜೆಪಿ ಮೋದಿ ಮುಂದಾಳತ್ವದಲ್ಲಿ ನಡೆಸಲಿದೆ. ಈ ಎಲ್ಲ ಚುನಾವಣಾ ಪ್ರಚಾರದಲ್ಲಿ ಮೋದಿಗೆ ಭದ್ರತೆ ಒದಗಿಸುವುದು ಸವಾಲಿನ ಕೆಲಸವಾಗಿದೆ.

ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಕನ್ನಡನಾಡಿ.com ಪೇಜ್ ಲೈಕ್ ಮಾಡಿ..