ದೋಸ್ತಿ ಸರ್ಕಾರದ ಖಾತೆ ಹಂಚಿಕೆಯಲ್ಲಿ ಟ್ವಿಸ್ಟ್ …! ಯಾರಿಗೆ ಯಾವ ಖಾತೆ ? ಇಲ್ಲಿದೆ ಅಧಿಕೃತ ಪಟ್ಟಿ

ಕಳೆದ ಎರಡು ವಾರಗಳಿಂದ ಭಾರೀ ಕಗ್ಗಂಟಾಗಿದ್ದ ಕರ್ನಾಟಕ ಸರ್ಕಾರದ ನೂತನ ಸಚಿವ ಸಂಪುಟ ವಿಸ್ತರಣೆ ಆಗಿದ್ದು ಇಂದು ಖಾತೆಗಳ ಹಂಚಿಕೆ ಆಗಿದೆ. ನಿರೀಕ್ಷೆಗೂ ಮೀರಿ ಬಾರೀ ಬದಲಾವಣೆಗಳ ಜೊತೆ ಖಾತೆ ಹಂಚಿಕೆ ಆಗಿದ್ದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರಮುಖ ಖಾತೆಗಳಾದ ಹಣಕಾಸು ಮತ್ತು ಇಂಧನ ಸೇರಿದಂತೆ ಹತ್ತಕ್ಕೂ ಹೆಚ್ಚು ಖಾತೆಗಳನ್ನು ತಮ್ಮ ಬಳಿಯೇ ಇಟ್ಟುಕೊಂಡಿದ್ದಾರೆ.

ಹಾಗೆ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರು ಗೃಹಖಾತೆಯನ್ನು ತಮ್ಮ ಬಳಿ ಇರಿಸಿಕೊಂಡಿದ್ದು ರಾಹ್ಯ ಸರ್ಕಾರದ ಮುಖ್ಯ ರೂವಾರಿ ಡಿ.ಕೆ.ಶಿವಕುಮಾರ್ ಅವರಿಗೆ ಈ ಭಾರಿ ಇಂಧನ ಖಾತೆ ತಪ್ಪಿದ್ದು ಜಲ ಸಂಪನ್ಮೂಲ ಖಾತೆ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಸ್ಥಾನ ಲಭಿಸಿದೆ ಈ ಮೂಲಕ ಇಂಧನ ಖಾತೆಯನ್ನು ಜೆ.ಡಿ.ಎಸ್ ತಮ್ಮ ತೆಕ್ಕೆಯಲ್ಲೇ ಭದ್ರವಾಗಿರಿಸಿಕೊಂಡಿದೆ. ಜೊತೆಗೆ ಎಚ್.ಡಿ.ರೇವಣ್ಣ ಅವರಿಗೆ ಲೋಕೋಪಯೋಗಿ ಇಲಾಖೆ ನೀಡುವ ಮೂಲಕ ಸಮಾಧಾನ ಪಡಿಸುವಲ್ಲಿ ಯಶಸ್ವಿಯಾಗಿದೆ.

ಇಂದು ಹಂಚಿಕೆಯಾದ ರಾಜ್ಯ ಸರ್ಕಾರದ ನೂತನ ಖಾತೆಗಳ ಪಟ್ಟಿ ಕೆಳಕಂಡತಿದೆ.

ಸಚಿವರ ಹೆಸರು ಮತ್ತು ಖಾತೆ

ಶ್ರೀ ಎಚ್.ಡಿ.ಕುಮಾರಸ್ವಾಮಿ  – ಹಣಕಾಸು/ ಇಂಧನ / ಗುಪ್ತವಾರ್ತೆ / ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಖಾತೆ
ಜಿ.ಪರಮೇಶ್ವರ್ – ಗೃಹ / ಬೆಂಗಳೂರು ನಗರಾಭಿವೃದ್ಧಿ
ಎಚ್.ಡಿ.ರೇವಣ್ಣ‌ – ಲೋಕೋಪಯೋಗಿ
ಆರ್.ವಿ.ದೇಶಪಾಂಡೆ  – ಕಂದಾಯ
ಡಿ.ಕೆ.ಶಿವಕುಮಾರ್ – ಜಲಸಂಪನ್ಮೂಲ / ವೈದ್ಯಕೀಯ ಶಿಕ್ಷಣ
ಕೆಜೆ ಜಾರ್ಜ್ – ಬೃಹತ್ ಕೈಗಾರಿಕೆ
ಬಂಡೆಪ್ಪ ಕಾಶಂಪುರ್ – ಸಹಕಾರ
ಕೃಷ್ಣಬೈರೇಗೌಡ – ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ / ಕಾನೂನು ಮತ್ತು ಸಂಸದೀಯ ವ್ಯವಹಾರ
ಯುಟಿ ಖಾದರ್ – ನಗರಾಭಿವೃದ್ಧಿ / ವಸತಿ
ಸಿಎಸ್ ಪುಟ್ಟರಾಜು – ಸಣ್ಣ ನೀರಾವರಿ
ಶಿವಶಂಕರ್ ರೆಡ್ಡಿ – ಕೃಷಿ
ಪ್ರಿಯಾಂಕ್ ಖರ್ಗೆ – ಸಮಾಜ ಕಲ್ಯಾಣ
ಜಮೀರ್ ಅಹಮದ್ – ಆಹಾರ ಮತ್ತ ನಾಗರೀಕ ಪೂರೈಕೆ / ಅಲ್ಪಸಂಖ್ಯಾತ ಕಲ್ಯಾಣ
ಶಿವಾನಂದ ಪಾಟೀಲ್ – ಆರೋಗ್ಯ
ವೆಂಕಟರಮಣಪ್ಪ – ಕಾರ್ಮಿಕ
ರಾಜಶೇಖರ್ ಪಾಟೀಲ್ – ಗಣಿ ಮತ್ತು ಭೂವಿಜ್ಞಾನ
ಪುಟ್ಟರಂಗಶೆಟ್ಟಿ – ಹಿಂದುಳಿದ ವರ್ಗಗಳ ಕಲ್ಯಾಣ
ಶಂಕರ್ – ಅರಣ್ಯ
ಜಯಮಾಲ – ಮಹಿಳಾ ಮತ್ತು ಮಕ್ಕಳ ಕಲ್ಯಾಣ
ರಮೇಶ್ ಜಾರಕಿಹೊಳಿ – ಪೌರಾಡಳಿತ ಮತ್ತು ಯುವಜನ ಮತ್ತು ಕ್ರೀಡೆ
ಜಿಟಿ ದೇವೇಗೌಡ – ಉನ್ನತ ಶಿಕ್ಷಣ
ಸಾರಾ ಮಹೇಶ್ – ಪ್ರವಾಸೋದ್ಯಮ
ಎನ್ ಮಹೇಶ್ – ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
ಡಿಸಿ ತಮ್ಮಣ್ಣ – ಸಾರಿಗೆ

ಅಧಿಕೃತ ಪಟ್ಟಿಯ ಫೋಟೋ ಇಲ್ಲಿದೆ:

ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಕನ್ನಡನಾಡಿ.com ಪೇಜ್ ಲೈಕ್ ಮಾಡಿ..

>
%d bloggers like this: