‘ಇನ್ಮೇಲೆ ಮೋದಿ ಅನ್ಯಗ್ರಹಕ್ಕೂ ಹೋಗ್ತಾರೆ’ : ಉದ್ಧವ್ ಠಾಕ್ರೆ ಲೇವಡಿ..!

ಮುಂಬೈ: ಪ್ರಧಾನಿ ನರೇಂದ್ರ ಮೋದಿ ಇನ್ನುಮುಂದೆ ಅನ್ಯಗ್ರಹಕ್ಕೂ ಪ್ರಯಾಣ ಮಾಡ್ತಾರೆ ಅಂತ ಮೋದಿ ವಿದೇಶ ಪ್ರಯಾಣದ ಬಗ್ಗೆ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಲೇವಡಿಯಾಡಿದ್ದಾರೆ. ಶಿವಸೇನೆಯ 52ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವ್ರು, ಕೇಂದ್ರ ಸರ್ಕಾರ ಹಾಗೂ ಬಿಜೆಪಿ ವಿರುದ್ಧ ಹರಿಹಾಯ್ದರು. ನರೇಂದ್ರ ಮೋದಿ ಕೇವಲ ಸುಳ್ಳು ಹೇಳಿ ಮತ್ತು ಹುಸಿ ಭರವಸೆಗಳನ್ನು ನೀಡುವ ಮೂಲಕ 2014ರಲ್ಲಿ ಅಧಿಕಾರಕ್ಕೆ ಬಂದರು ಅಂತ ಠಾಕ್ರೆ ಕಿಡಿಕಾರಿದ್ರು.

ಇದೇ ವೇಳೆ ಪ್ರಧಾನಿ ವಾಸಿಸುವ ದೆಹಲಿಯ ಲೋಕ ಕಲ್ಯಾಣ ಮಾರ್ಗ ನಿವಾಸದ ಬಳಿ ಕಂಡಂತಹ ಹಾರುವ ವಸ್ತುವಿನ ಬಗ್ಗೆ ಮಾತನಾಡಿದ ಅವರು, ಸದ್ಯದಲ್ಲೇ ಮೋದಿ ಅನ್ಯಗ್ರಹಕ್ಕೂ ಹೋಗಲಿದ್ದಾರೆ ಎಂದು ವ್ಯಂಗ್ಯವಾಡಿದ್ರು. ಅಲ್ಲದೆ, ಜಮ್ಮು ಕಾಶ್ಮೀರದಲ್ಲಿ ಮೈತ್ರಿ ಸರ್ಕಾರ ಮುರಿದು ಬಿದ್ದಿದ್ದರ ಬಗ್ಗೆ ಹರಿಹಾಯ್ದ ಅವ್ರು, 600 ಸೈನಿಕರನ್ನು ಬಲಿಕೊಟ್ಟ ಮೇಲೆ, ಮೂರು ವರ್ಷಗಳ ನಂತರ ಜಮ್ಮು-ಕಾಶ್ಮೀರದ ಸರ್ಕಾರ ಕೆಲಸಕ್ಕೆ ಬಾರದ್ದು ಎಂಬುದು ಗೊತ್ತಾಯಿತಾ ಅಂತ ಟೀಕಿಸಿದ್ದಾರೆ.

ಅಲ್ಲದೇ ಕಾಶ್ಮೀರದಲ್ಲಿ ರಂಜಾನ್​ ನಿಮಿತ್ತ ಕದನವಿರಾಮ ಘೋಷಿಸಿದ್ದರ ಬಗ್ಗೆ ಪ್ರಶ್ನಿಸಿರುವ ಠಾಕ್ರೆ, ಭಯೋತ್ಪಾದನೆ ಮತ್ತು ಧರ್ಮಕ್ಕೂ ಯಾವುದೇ ಸಂಬಂಧವಿಲ್ಲ. ಆದ್ರೂ ನೀವ್ಯಾಕೆ ಕದನ ವಿರಾಮಕ್ಕೆ ಒಪ್ಪಿದಿರಿ? ಇದೇ ನೀತಿಯನ್ನ ಗಣೇಶ ಹಬ್ಬಕ್ಕೋ, ದಸರಾ ಸಂದರ್ಭದಲ್ಲೋ ಪಾಕಿಸ್ತಾನವೂ ಅನುಸರಿಸುತ್ತಾ ಅಂತ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು.

ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಕನ್ನಡನಾಡಿ.com ಪೇಜ್ ಲೈಕ್ ಮಾಡಿ..