ಕಾಂಗ್ರೆಸ್ ಅತೃಪ್ತರ ಸಾಲಿನಲ್ಲಿ ಉಡುಪಿಯ ಪ್ರತಾಪ್ ಚಂದ್ರ ಶೆಟ್ಟಿ ಹೆಸರು : ಮಂತ್ರಿಗಿರಿಗಾಗಿ ಪಟ್ಟು ಹಿಡಿದ ಬೆಂಬಲಿಗರ ತೀವ್ರ ಆಕ್ರೋಶ..!

ಬೆಂಗಳೂರು: ಮೈತ್ರಿ ಸರ್ಕಾರದಲ್ಲಿ ಅತೃಪ್ತ ಸಚಿವರ ಹಾಗೂ ಶಾಸಕರ ಪಟ್ಟಿ ಬೆಳೆಯುತ್ತಲೇ ಹೋಗ್ತಿದೆ. ಈ ಪಟ್ಟಿಗೆ ವಿಧಾನ ಪರಿಷತ್ ಸದಸ್ಯ ಪ್ರತಾಪ್ ಚಂದ್ರ ಶೆಟ್ಟಿ ಈಗ ಸೇರ್ಪಡೆಯಾಗಿದ್ದಾರೆ.

ಪ್ರತಾಪ್ ಚಂದ್ರ ಶೆಟ್ಟಿಯವರಿಗೆ ಸಚಿವ ಸ್ಥಾನ ಕೊಡುವಂತೆ ಅವರ ಬೆಂಬಲಿಗರು ಒತ್ತಾಯಿಸಿದ್ದಾರೆ. ಈ ಹಿನ್ನೆಲೆ ಡಿಸಿಎಂ ಡಾ.ಜಿ.ಪರಮೇಶ್ವರ್​ ಅವರ ಸದಾಶಿವನಗರದ ಮನೆಯ ಮುಂದೆ ಶೆಟ್ಟಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಉಡುಪಿ ಜಿಲ್ಲೆಗೆ ಅನ್ಯಾಯ ಆಗಿದೆ. ಪ್ರತಾಪ್ ಚಂದ್ರ ಶೆಟ್ಟಿ ಅವರಿಗೆ ಸಚಿವ ಸ್ಥಾನ ಕೊಡಿ ಅಂತಾ ಒತ್ತಾಯಿಸಿದ್ರು. ಪ್ರತಾಪ್  ಚಂದ್ರ ಶೆಟ್ಟಿ 2ನೇ ಬಾರಿಗೆ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

ದಕ್ಷಿಣ ಕನ್ನಡದಿಂದ ಈಗಾಗಲೇ ಯು.ಟಿ.ಖಾದರ್​ಗೆ ಸಚಿವ ಸ್ಥಾನ ಕೊಟ್ಟಿದ್ದಾಗಿದೆ. ಅಲ್ಲದೇ, ವಿಧಾನ ಪರಿಷತ್ ಸದಸ್ಯೆ ಜಯಮಾಲ ಅವರಿಗೆ ಕೂಡ ಈಗಾಗಲೇ ಸಚಿವಸ್ಥಾನ ಕೊಡಲಾಗಿದೆ. ಇನ್ನು ಪ್ರತಾಪ್ ಚಂದ್ರ ಶೆಟ್ಟಿ ಮತ್ತು ಬೆಂಬಲಿಗರ ಮನವಿಯನ್ನು ಡಾ.ಜಿ.ಪರಮೇಶ್ವರ್ ಸ್ವೀಕರಿಸಿದ್ದಾರೆ ಎನ್ನಲಾಗಿದೆ.

ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಕನ್ನಡನಾಡಿ.com ಪೇಜ್ ಲೈಕ್ ಮಾಡಿ..