ಸಿಎಂ ಸಿದ್ದರಾಮಯ್ಯ ಉತ್ತರಕ್ಕೆ ಯುವಕ ಗಪ್ ಚುಪ್..!! 5 ವರ್ಷ ಏನ್ಮಾಡಿದ್ದೀರಿ ಎಂದ ಯುವಕನಿಗೆ ಸಿಎಂ ಕೊಟ್ಟ ಉತ್ತರವೇನು ಗೊತ್ತಾ..?

ಮೈಸೂರು: ಸಿಎಂ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದ ನಾಗನಹಳ್ಳಿಯಲ್ಲಿ ಮತಯಾಚನೆ ಮಾಡುವ ವೇಳೆ ಯುವಕನೊಬ್ಬ ನೀವು ನಮ್ಮ ಊರಿಗೆ ಬಂದು ಐದು ವರ್ಷ ಆಯ್ತು, ಏನ್ ಮಾಡಿದ್ದೀರಿ ಎಂದು ಪ್ರಶ್ನೆ ಮಾಡಿದ್ದಾನೆ. ಇದಕ್ಕೆ ಉತ್ತರಿಸಿದ ಸಿಎಂ ಕೃಷಿಸಾಲ ಮನ್ನಾ ಮಾಡಿದ್ದು ಯಾರು? ಇದರಲ್ಲಿ ನಿನ್ನ ಸಾಲಾನೂ ಮನ್ನಾ ಆಗಿರಬೇಕು ಅಲ್ವಾ ಎಂದು ಯುವಕನನ್ನೇ ಪ್ರಶ್ನೆ ಮಾಡಿದ್ದಾರೆ.

ಮಕ್ಕಳಿಗೆ ಉಚಿತ ಹಾಲು, ಗ್ರಾಮದ ಯುಜಿಡಿ, ರಸ್ತೆ ಮಾಡಿದ್ದು, ಬಡವರಿಗೆ ಅಕ್ಕಿ ಕೊಟ್ಟಿದ್ದು, ಪಶುಭಾಗ್ಯ, ಮನಸ್ವಿನಿಗಳಂತಹ ಅನೇಕ ಭ್ಯಾಗ್ಯಗಳನ್ನು ರಾಜ್ಯದ ಜನರಿಗೆ ಕೊಟ್ಟಿದ್ದು ಯಾರು ಹೇಳು? ಅವನ್ನೆಲ್ಲಾ ನಮ್ಮ ಸರ್ಕಾರದ ಅವಧಿಯಲ್ಲಿ ನಾನೇ ಕೊಟ್ಟಿದ್ದು ಎಂದು ಸಿಎಂ ಹೇಳಿದ್ರು.

ಉತ್ತರ ಹೇಳುತ್ತಿದ್ದಂತೆ ಯುವಕ ಗಪ್​ಚುಪ್ ಆಗಿದ್ದಾನೆ. ಬಳಿಕ ಪ್ರಜಾಪ್ರಭುತ್ವದಲ್ಲಿ ಯಾರಿಗಾದ್ರೂ ಮತ ಕೇಳುವ ಹಕ್ಕಿದೆ. ನಾನು ಕೆಲಸ ಮಾಡಿದ್ದೀನಿ, ನನಗೆ ಓಟ್ ಕೊಡಿ ಎಂದು ಕೇಳಿದ್ದಾರೆ.

👍👍 ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ 👍👍

>
%d bloggers like this: