ಸೋತು ಸುಣ್ಣವಾದ ಬಹುತೇಕ ಸಚಿವರು : ಅಬ್ಬಬ್ಬಾ.. ಇಲ್ಲಿದ್ದಾರೆ ನೋಡಿ, ಮಕಾಡೆ ಮಲಗಿದ ಕಾಂಗ್ರೆಸ್ ನ ಪ್ರಮುಖ ನಾಯಕರು..!!

ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶ ಹೊರ ಬಿದ್ದಿದೆ. ಮತದಾರರು ಸಿಎಂ ಸಿದ್ದರಾಮಯ್ಯ ಸರ್ಕಾರಕ್ಕೆ ತಪರಾಕಿ ಕೊಟ್ಟಿದ್ದಾರೆ. ರಾಜ್ಯದ ಜನ ನೀಡಿದ ಮಹಾತೀರ್ಪಿಗೆ ಜನನಾಯಕ ತಲೆಬಾಗಿದ್ದಾನೆ. ವಿಶೇಷ ಅಂದ್ರೆ ಕೆಲಸ ಮಾಡದ ನಾಯಕರಿಗೆ ಮತದಾರ ಚೆನ್ನಾಗಿಯೇ ಪಾಠ ಕಲಿಸಿದ್ದಾನೆ. ಅದ್ರಲ್ಲೂ ಸಿದ್ದರಾಮಯ್ಯ ಸಂಪುಟದ ಅನೇಕ ಸಚಿವರು ಮಕಾಡೆ ಮಲಗಿದ್ದಾರೆ. ಪಟ್ಟಿ ಇಲ್ಲಿದೆ:

ಅಭಯ್ ಚಂದ್ರ ಜೈನ್

 

ಈ ಹಿಂದೆ ಮೀನುಗಾರಿಕೆ ಸಚಿವರಾಗಿದ್ದ ಅಭಯ್ ಚಂದ್ರ ಜೈನ್, ಮೂಡಬಿದಿರೆಯ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಸಚಿವರಾಗಿ, ಶಾಸಕರಾಗಿ ಜನರ ಒಳಿತಿಗೆ ಸರಿಯಾಗಿ ಕೆಲಸ ಮಾಡದೇ ಇದ್ದದ್ರಿಂದ ಭಾರೀ ಮುಖಭಂಗ ಅನುಭವಿಸಿದ್ದಾರೆ. ಬಿಜೆಪಿಯ ಅಭ್ಯರ್ಥಿ ಉಮಾನಾಥ ಕೋಟ್ಯಾನ್ ವಿರುದ್ಧ 19,980 ಮತಗಳ ಅಂತರದಿಂದ ಅಭಯ್ ಚಂದ್ರ ಜೈನ್ ಸೋಲನ್ನು ಕಂಡಿದ್ದಾರೆ.

ಕಿಮ್ಮನೆ ರತ್ನಾಕರ್

ಸಿದ್ದರಾಮಯ್ಯ ಅವ್ರ ಸಚಿವ ಸಂಪುಟದಲ್ಲಿ ಶಿಕ್ಷಣ ಮಂತ್ರಿಯಾಗಿ ಮೂರೂವರೆ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಬಳಿಕ ಅವರು ತಮ್ಮ ಕರ್ತವ್ಯವನ್ನು ನಿಭಾಯಿಸುವಲ್ಲಿ ವಿಫಲಾರಾದ ಹಿನ್ನೆಲೆಯಲ್ಲಿ ಸಚಿವ ಸ್ಥಾನವನ್ನು ಕಳೆದುಕೊಂಡಿದ್ದರು. ಈ ಬಾರಿಯೂ ತೀರ್ಥಹಳ್ಳಿ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆದರೆ ಬಿಜೆಪಿ ಅಭ್ಯರ್ಥಿ ಅರಗ ಜ್ಞಾನೇಂದ್ರ ವಿರುದ್ಧ ಹೀನಾಯ ಸೋಲು ಕಂಡಿದ್ದಾರೆ.

ಉಮಾಶ್ರೀ

ತೇರದಾಳದಿಂದ ಎರಡನೇ ಬಾರಿಗೆ ವಿಧಾನಸಭೆ ಪ್ರವೇಶಿಸುವ ಮಾಜಿ ಉಮಾಶ್ರೀ ಅವ್ರ ಕನಸು ನನಸಾಗಿಲ್ಲ. ಬಾಗಲಕೋಟೆ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಹಾಗೂ ಬಿಜೆಪಿ ಅಭ್ಯರ್ಥಿ ಸಿದ್ದು ಸವದಿ ಎದುರು 17, 980 ಮತಗಳ ಅಂತರದಿಂದ ಸೋಲುಂಡಿದ್ದಾರೆ. ಕ್ಷೇತ್ರದಲ್ಲಿ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಕೆಲವರಿಗಷ್ಟೇ ಮಣೆ ಹಾಕಿದ್ದು ಪಕ್ಷದ ಮುಖಂಡರಾದ ಸುರೇಶ್‌ ಬನಹಟ್ಟಿ, ಮಹಾಲಿಂಗಪ್ಪ ಕೋಳಿಗುಡ್ಡ, ನಗರಸಭೆ ಮಾಜಿ ಅಧ್ಯಕ್ಷ ಕನೆಪ್ಪ ಹಾರೋಗೆರಿ ಅವರ ಮುನಿಸಿಗೆ ಕಾರಣವಾಗಿತ್ತು. ಈ ಭಿನ್ನಮತ ತಳಮಟ್ಟದ ಕಾರ್ಯಕರ್ತರ ಮೇಲೂ ಪರಿಣಾಮ ಬೀರಿತ್ತು. ಹಾಗಾಗಿ ಉಮಾಶ್ರೀ ಸೋಲುಂಡಿದ್ದಾರೆ.

ಹೆಚ್​. ಆಂಜನೇಯ

ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಸಚಿವ ಹೆಚ್. ಆಂಜನೇಯಗೆ ಭಾರೀ ಸೋಲಾಗಿದೆ. ಬಿಜೆಪಿ ಅಭ್ಯರ್ಥಿ ಎಂ.ಚಂದ್ರಪ್ಪ ಆಂಜನೇಯ ವಿರುದ್ಧ ಗೆಲುವು ಸಾಧಿಸಿದ್ದಾರೆ. ಸಮಾಜ ಕಲ್ಯಾಣ ಸಚಿವರಾಗಿದ್ದ ಅವರು ಹೇಳಿಕೊಳ್ಳುವಂತಹ ಕೆಲಸವೇನೂ ಮಾಡಿರಲಿಲ್ಲ

ವಿನಯ್ ಕುಲಕರ್ಣಿ

ಧಾರವಾಡದಲ್ಲಿ ಸಚಿವ ವಿನಯ್ ಕುಲಕರ್ಣಿಗೆ ಸೋಲಾಗಿದೆ. ಬಿಜೆಪಿ ಅಮೃತ್ ದೇಸಾಯಿ ಗೆದ್ದಿದ್ದಾರೆ. ಲಿಂಗಾಯಿತ ಸಮಾಜವನ್ನು ಒಡೆಯುವ ಹುನ್ನಾರಕ್ಕೆ ಸತತ ಯತ್ನ ನಡೆಸಿದ್ದ ವಿನಯ್ ಕುಲಕರ್ಣಿ ವಿರುದ್ಧ ರಾಜ್ಯಾದ್ಯಂತ ವೀರಶೈವ ಲಿಂಗಾಯಿತ ಸಮಾಜದ ಅಸಮಾಧಾನ ಭುಗಿಲೆದ್ದಿತು. ಅಲ್ಲದೇ ಅವರ ಆಡಳಿತದ ಅವಧಿಯಲ್ಲಿ ಹಲವು ಆಪಾದನೆಗೆ ಒಳಗಾಗಿದ್ದರು.

ಸಂತೋಷ್ ಲಾಡ್

ಕಾರ್ಮಿಕ ಸಚಿವ ಸಂತೋಷ್ ಲಾಡ್ ಕೂಡ ಭಾರೀ ಮುಖಭಂಗ ಅನುಭವಿಸಿದ್ದಾರೆ. ಕಲಘಟಗಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅವರು ಬಿಜೆಪಿಯ ಸಿ.ಎಂ. ನಿಂಬಣ್ಣನವರ ಅವರಿಂದ ಹೀನಾಯ ಸೋಲನ್ನು ಕಂಡಿದ್ದಾರೆ.

ಬಿ.ರಮಾನಾಥ ರೈ

ಬಂಟ್ವಾಳ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ್ ರೈಗೆ ಹೀನಾಯ ಸೋಲು ಉಂಡಿದ್ದಾರೆ. ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್ ವಿರುದ್ಧ ಸೋಲು ಕಂಡಿದ್ದಾರೆ.

ಹೆಚ್.ಸಿ.ಮಹದೇವಪ್ಪ

ಟಿ.ನರಸಿಪುರ ಕ್ಷೇತ್ರದಲ್ಲಿ ಸಿಎಂ ಸಿದ್ದರಾಮಯ್ಯ ಆಪ್ತ ಹಾಗೂ ಲೋಕೋಪಯೋಗಿ ಸಚಿವ ಎಚ್.ಸಿ ಮಹದೇವಪ್ಪ ಹೀನಾಯವಾಗಿ ಸೋತಿದ್ದಾರೆ.

ರುದ್ರಪ್ಪ ಲಮಾಣಿ

ಹಾವೇರಿಯಿಂದ ಸ್ಪರ್ಧಿಸಿದ್ದ ಮುಜರಾಯಿ ಸಚಿವ ರುದ್ರಪ್ಪ ಲಮಾಣಿ ಬಿಜೆಪಿಯ ನೆಹರೂ ಓಲೇಕಾರ್ ವಿರುದ್ಧ ಸೋಲನುಭವಿಸಿದ್ದಾರೆ. ಇನ್ನು ಜೆಡಿಎಸ್​ನಿಂದ ಡಾ. ಸಂಜಯ್ ಢಾಂಗೆ ಸ್ಪರ್ಧಿಸಿದ್ದರು.

ಬಸವರಾಜ್ ರಾಯರೆಡ್ಡಿ

ಯಲಬುರ್ಗಾದಲ್ಲಿ ಸಚಿವ ಬಸವರಾಜ ರಾಯರೆಡ್ಡಿ ಸೋಲನುಭವಿಸಿದ್ದಾರೆ. ಹಾಲಪ್ಪ ಆಚಾರ್ ವಿರುದ್ಧ ಬಸವರಾಜ ರಾಯರೆಡ್ಡಿ ಹೀನಾಯ ಸೋಲನ್ನು ಕಂಡಿದ್ದಾರೆ.

ಟಿ.ಬಿ ಜಯಚಂದ್ರ

ಸಿದ್ದರಾಮಯ್ಯ ಸಂಪುಟದಲ್ಲಿ ಪ್ರಭಾವಿ ಸಚಿವರಾಗಿದ್ದ ಕಾನೂನು ಖಾತೆ ಸಚಿವ ಟಿ.ಬಿ ಜಯಚಂದ್ರ ಕೂಡ ಸೋತಿದ್ದಾರೆ. ಜೆಡಿಎಸ್ ಅಭ್ಯರ್ಥಿ ಬಿ.ಸತ್ಯನಾರಾಯಣ ವಿರುದ್ಧ ಭಾರೀ ಅಂತರ ಮತಗಳಿಂದ ಸೋಲನ್ನು ಕಂಡಿದ್ದಾರೆ. ಬಿಜೆಪಿಯಿಂದ ಎಸ್​​ಆರ್​. ಗೌಡ ಬಿಗ್​ ಫೈಟ್ ನೀಡಿದ್ದರು.

ಪ್ರಮೋದ್ ಮದ್ವರಾಜ್

ಉಡುಪಿಯಲ್ಲಿ ಪ್ರಮೋದ್ ಮದ್ವರಾಜ್ ಹೀನಾಯವಾಗಿ ಸೋತಿದ್ದಾರೆ. ಉಡುಪಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಪ್ರಮೋದ್ ಮದ್ವರಾಜ್ ಬಿಜೆಪಿ ಅಭ್ಯರ್ಥಿ ರಘುಪತಿ ಭಟ್​ ವಿರುದ್ಧ ಹೀನಾಯ ಸೋಲು ಕಂಡಿದ್ದಾರೆ.

ಹೆಚ್.ಎಂ.ರೇವಣ್ಣ

ಸಾರಿಗೆ ಸಚಿವ ಎಚ್.ಎಂ.ರೇವಣ್ಣ ಕೂಡ ಹೀನಾಯ ಸೋಲನುಭವಿಸಿದ್ದಾರೆ. ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕಾಂಗ್ರೆಸ್ ಹೆಚ್​.ಎಂ.ರೇವಣ್ಣ ಹೆಚ್​.ಡಿ.ಕುಮಾರಸ್ವಾಮಿ ವಿರುದ್ಧ ಸೋತಿದ್ದಾರೆ.

ಡಾ.ಶರಣಪ್ರಕಾಶ ಪಾಟೀಲ್‌

ಮಾಜಿ ಸಿಎಂ ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ವೈದ್ಯಕೀಯ ಶಿಕ್ಷಣ ಸಚಿವರಾಗಿರುವ ಡಾ.ಶರಣಪ್ರಕಾಶ್​ ಪಾಟೀಲ್ ಕೂಡ ಸೋಲು ಅನುಭವಿಸಿದ್ದಾರೆ. ಸೇಡಂ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ರಾಜಕುಮಾರ್ ಪಾಟೀಲ್ ತೆಲ್ಕೂರ ವಿರುದ್ಧ ಹೀನಾಯ ಸೋಲು ಕಂಡಿದ್ದಾರೆ.

ವಿನಯ್ ಕುಮಾರ್ ಸೊರಕೆ

ಕಾಪು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಬಿಜೆಪಿ ಅಭ್ಯರ್ಥಿ ಲಾಲಾಜಿ ಮೆಂಡನ್ ವಿರುದ್ಧ ಹೀನಾಯ ಸೂಲು ಕಂಡಿದ್ದಾರೆ.

ಕಾಗೋಡು ತಿಮ್ಮಪ್ಪ

ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಸಚಿವ ಕಾಗೋಡು ತಿಮ್ಮಪ್ಪಗೆ ಹೀನಾಯ ಸೋಲಾಗಿದೆ. ಬಿಜೆಪಿ ಅಭ್ಯರ್ಥಿ ಹರತಾಳು ಹಾಲಪ್ಪ ವಿರುದ್ಧ ಕಾಗೋಡು ತಿಮ್ಮಪ್ಪ ಸೋಲಿಗೆ ಶರಣಾಗಿದ್ದಾರೆ. ಬಿಜೆಪಿಯಿಂದ ಬೇಳೂರು ಗೋಪಾಲಕೃಷ್ಣಗೆ ಟಿಕೆಟ್ ಸಿಗುತ್ತೆ ಎನ್ನಲಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಬಿಜೆಪಿ ಬೇಳೂರಿಗೆ ಕೈಕೊಟ್ಟು ಹಾಲಪ್ಪಗೆ ಟಿಕೆಟ್ ನೀಡಿತ್ತು. ಇದರಿಂದ ಮುನಿಸಿಕೊಂಡಿದ್ದ ಬೇಳೂರು ಕಾಂಗ್ರೆಸ್​ ಪಕ್ಷಕ್ಕೆ ಸೇರ್ಪಡೆಗೊಂಡು ಬಿಜೆಪಿ ವಿರುದ್ಧ ತೊಡೆ ತಟ್ಟಿ ನಿಂತಿದ್ದರು. ಅಲ್ಲದೇ ತನ್ನ ಮಾವ ಕಾಗೋಡು ಜೊತೆಗಿನ ಹಳೆಯ ದ್ವೇಷವನ್ನು ಮರೆತು ಒಂದಾಗಿದ್ದರು. ಅಳಿಯ ಬೇಳೂರು ಮಾವ ಕಾಗೋಡು ಒಟ್ಟಿಗೆ ಪ್ರಚಾರ ನಡೆಸಿದ್ದರು. ಆದರೆ ಸಾಗರ ಕ್ಷೇತ್ರದ ಜನ ಹಾಲಪ್ಪರನ್ನು ಕೈ ಹಿಡಿದಿದ್ದಾರೆ. ಈ ಮೂಲಕ ಹಾಲಪ್ಪ, ಅಳಿಯ-ಮಾವನನ್ನು ಸೋಲಿಸಿ ಸಂಭ್ರಮಾಚರಣೆಯಲ್ಲಿ ಮುಳುಗಿದ್ದಾರೆ.

ಎಸ್.​ಎಸ್.​ ಮಲ್ಲಿಕಾರ್ಜುನ್

ದಾವಣಗೆರೆ ಉತ್ತರ ಕ್ಷೇತ್ರದಲ್ಲಿ ಕಳೆದ ಬಾರಿ ಭಾರೀ ಅಂತರದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದ ಎಸ್.ಎಸ್.ಮಲ್ಲಿಕಾರ್ಜುನ ಬಿಜೆಪಿ ಅಭ್ಯರ್ಥಿ ಮುಂದೆ ಮಂಡಿಯೂರಿದ್ದಾರೆ. ದಾವಣಗೆರೆ ಉತ್ತರ ಕ್ಷೇತ್ರದಿಂದ ಮಾಜಿ ಸಚಿವ ಎಸ್.ಎ.ರವೀಂದ್ರನಾಥ್ ಈ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು, ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರ ಮಲ್ಲಿಕಾರ್ಜುನರ ಸೋಲಿಗೆ ಕಾರಣ ಎನ್ನಲಾಗಿದೆ. ಪ್ರತ್ಯೇಕ ಧರ್ಮದ ವಿಚಾರದಲ್ಲಿ ಯಾವುದೇ ನಿಲುವು ಸೂಚಿಸಿದೇ ತಟಸ್ಥವಾಗಿದ್ದ ಮಲ್ಲಿಕಾರ್ಜುನ ನಡೆಯನ್ನು ಮತದಾರ ಖಂಡಿಸಿದ್ದಾನೆ. ಜೊತೆಗೆ ತೋಟಗಾರಿಕಾ ಹಾಗೂ ದಾವಣಗೆರೆ ಉಸ್ತುವಾರಿ ಸಚಿವರಾಗಿ ಸ್ಮಾರ್ಟ್ ಸಿಟಿ ದಾವಣಗೆರೆಯನ್ನು ಅಭಿವೃದ್ಧಿ ಮಾಡದೇ ಸುಮ್ಮನಿದ್ದ ಜನಪ್ರತಿನಿಧಿಯನ್ನು ಮತದಾರ ಮನೆಗೆ ಕಳುಹಿಸಿದ್ದಾನೆ.

👍👍 ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ 👍👍