ಅಜಾತಶತ್ರು ಎನಿಸಿಕೊಂಡಿದ್ದ, ಇದೀಗ ಖಾಯಿಲೆಗೆ ತುತ್ತಾಗಿರುವ ವಾಜಪೇಯಿ ದಿನಚರಿ ಹೇಗಿದೆ ಗೊತ್ತಾ..?

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನವದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬಿಜೆಪಿ ಮೂಲಗಳು ನಿಯಮಿತ ತಪಾಸಣೆಗೆ ವಾಜಪೇಯಿ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದಿವೆ. 93 ವರ್ಷದ ವಾಜಪೇಯಿ ಅನೇಕ ವರ್ಷಗಳ ಹಿಂದೆಯೇ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ.

ವಾಜಪೇಯಿ ಡಿಮೆನ್ಶಿಯಾ ಖಾಯಿಲೆಯಿಂದ ಬಳಲುತ್ತಿದ್ದಾರೆ. 2009ರಿಂದಲೇ ವಾಜಪೇಯಿ ವೀಲ್ ಚೇರ್ ನಲ್ಲಿ ಕುಳಿತುಕೊಳ್ಳುವುದು ಅನಿವಾರ್ಯವಾಗಿದೆ. ಬಿಬಿಸಿ ಜೊತೆ ಮಾತನಾಡಿದ ವಾಜಪೇಯಿ ಆಪ್ತ ಶಿವಕುಮಾರ್ ಶರ್ಮಾ, ವಾಜಪೇಯಿ ಆರೋಗ್ಯದ ಬಗ್ಗೆ ಹೇಳಿದ್ದಾರೆ.

ವಾಜಪೇಯಿ ತುಂಬಾ ಕಡಿಮೆ ಮಾತನಾಡುತ್ತಾರಂತೆ. ಅವ್ರ ಕಣ್ಣು ಹಾಗೂ ಮುಖಭಾವದಿಂದಲೇ ಅವ್ರು ಗುರುತು ಹಿಡಿದಿದ್ದಾರೆಂಬುದು ಗೊತ್ತಾಗುತ್ತದೆಯಂತೆ. ಓದಲು ಬರೆಯಲು ವಾಜಪೇಯಿಗೆ ಸಾಧ್ಯವಾಗ್ತಿಲ್ಲ. ಟಿವಿಯನ್ನು ಹೆಚ್ಚಾಗಿ ನೋಡ್ತಾರಂತೆ. ಹಳೆ ಹಿಂದಿ ಚಿತ್ರ ಹಾಗೂ ಹಾಡುಗಳನ್ನು ಹೆಚ್ಚಾಗಿ ನೋಡ್ತಾರಂತೆ.

ವೈದ್ಯರ ಒಂದು ತಂಡ 24 ಗಂಟೆ ಅವ್ರ ಬಳಿ ಇರುತ್ತದೆ. ನಾಲ್ಕು ಫಿಜಿಯೋಥೆರಪಿಸ್ಟ್ ಪ್ರತಿ ದಿನ ವಾಜಪೇಯಿ ಚಿಕಿತ್ಸೆಗೆ ಬರ್ತಾರಂತೆ. ಘನ ಆಹಾರವನ್ನು ಅವ್ರು ಸೇವನೆ ಮಾಡುವುದಿಲ್ಲ. ದ್ರವ ಆಹಾರ ತೆಗೆದುಕೊಳ್ಳುತ್ತಾರೆ.

ಕೆಲವು ಅಪರೂಪದ ಚಿತ್ರಗಳು :

ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಕನ್ನಡನಾಡಿ.com ಪೇಜ್ ಲೈಕ್ ಮಾಡಿ..