ಇಂಗ್ಲೆಂಡ್​​ ಏಕದಿನ ಸರಣಿಗೆ ಕೊಹ್ಲಿ ಸೈನ್ಯದಲ್ಲಿ ಯಾರು ಯಾರು..? ಇಲ್ಲಿದೆ ಡೀಟೇಲ್ಸ್

ಇಂಗ್ಲೆಂಡ್​ ಪ್ರವಾಸಕ್ಕಾಗಿ ಕೊಹ್ಲಿ ಪಡೆ ಸಕಲ ರೀತಿಲ್ಲೂ ಸಜ್ಜಾಗಿದೆ. ಆಂಗ್ಲರ ನೆಲದಲ್ಲಿ 3 ಟಿ-20, 5 ಟೆಸ್ಟ್​​ ಸೇರಿದಂತೆ 3 ಏಕದಿನ ಪಂದ್ಯಗಳನ್ನಾಡಲಿರುವ ಕೊಹ್ಲಿ ಪಡೆ, ಎಚ್ಚರಿಕೆಯ ಹೆಜ್ಜೆ ಇಟ್ಟಿದೆ. ಮುಂಬರುವ ವರ್ಲ್ಡ್​​​ ಕಪ್​ ತಯಾರಿಗಾಗಿ ಅನುಭವಿ ಹಾಗೂ ಯಂಗ್ ಪ್ಲೇಯರ್​​ ಕಾಂಬಿನೇಷನ್​​ನಲ್ಲಿ ತಂಡವನ್ನು ಆಯ್ಕೆ ಮಾಡಿಕೊಂಡಿದೆ. ​

ಓಪನರ್​​ಗಳಾಗಿ ಶಿಖರ್​​-ರೋಹಿತ್​​
ಇಂಗ್ಲೆಂಡ್​​ನಲ್ಲಿ 3 ಏಕದಿನ ಪಂದ್ಯಗಳನ್ನಾಡಲಿರುವ ಟೀಮ್ ಇಂಡಿಯಾ, ಭರ್ಜರಿಯಾಗಿ ತಯಾರಾಗಿದೆ. ಭಾರತದ ಪರ ಎಂದಿನಂತೆ ಓಪನರ್​​ಗಳಾಗಿ ಶಿಖರ್​ ಧವನ್​ ಹಾಗೂ ರೋಹಿತ್​ ಶರ್ಮ ಮಿಂಚಲಿದ್ದು, ಕನ್ನಡಿಗ ರಾಹುಲ್​ ಕೂಡ ಇನಿಂಗ್ಸ್​ ಆರಂಭಿಸುವ ಲೀಸ್ಟ್​​​ನಲ್ಲಿದ್ದಾರೆ.

ಮಿಡಲ್​ ಆರ್ಡರ್​ನಲ್ಲಿ ಯಂಗ್​ ಟೈಗರ್​​
ಇನ್ನು ಟೀಮ್ ಇಂಡಿಯಾದ ಮಿಡಲ್ ಆರ್ಡರ್​​ ನೋಡೋದಾದ್ರೆ, ಕ್ಯಾಪ್ಟನ್​ ವಿರಾಟ್​​ ಕೊಹ್ಲಿ ಜೊತೆಗೆ, ಶ್ರೇಯಸ್​​ ಅಯ್ಯರ್​​​, ಕೆ.ಎಲ್​ ರಾಹುಲ್​. ಸುರೇಶ್​​ ರೈನಾ ಸೇರಿದಂತೆ ಮಹೇಂದ್ರಸಿಂಗ್​ ಧೋನಿ ಇದ್ದು ಅತ್ಯಂತ ಶಕ್ತಿಯುತವಾಗಿದೆ. ಕ್ಯಾಫ್ಟನ್ ಕೊಹ್ಲಿಗೆ ಈ ವಿಭಾಗದಲ್ಲಿ ಆಯ್ಕೆಗಳು ಹೆಚ್ಚಾಗಿವೆ.

ಲೋವರ್​ ಮಿಡಲ್ ಆರ್ಡರ್​​​​ನಲ್ಲಿ ಡಿಕೆ & ಪಾಂಡ್ಯಾ
ಕೊಹ್ಲಿ ಪಡೆಯ ಲೋವರ್​ ಮಿಡಲ್ ಆರ್ಡರ್​​ ನೋಡೋದಾದ್ರೆ, ನಿದಹಾಸ್​ ಟ್ರೋಫಿ ಹೀರೋ ದಿನೇಶ್​​ ಕಾರ್ತಿಕ್ ಹಾಗೂ ಹಾರ್ದಿಕ್​ ಪಾಂಡ್ಯಾ ಆಯ್ಕೆಗಳಾಗಿದ್ದಾರೆ. ಕೆಳ ಕ್ರಮಾಂಕದಲ್ಲಿ ಸಂದರ್ಭಕ್ಕೆ ತಕ್ಕಂತೆ ತಂಡಕ್ಕೆ ಆಸರೆಯಾಗಲಿರುವ ಇವರಿಬ್ಬರು, ಮ್ಯಾಚ್​ ಫಿನಿಷರ್​ಗಳಾಗಿ ಕೂಡ ಮಿಂಚುವ ಪವರ್​ ಹೊಂದಿದ್ದಾರೆ.

ಸ್ಪಿನ್​ ಶಕ್ತಿಯಾಗಿದ್ದಾರೆ ಕುಲ್ಚಾ..!
ಕುಲ್ಚಾ ಖ್ಯಾತಿ ಯಜುವೇಂದ್ರ ಚಹಾಲ್ ಹಾಗೂ ಕುಲ್​ದೀಪ್​ ಯಾದವ್, ಒಡಿಐನಲ್ಲಿ​ ಕೊಹ್ಲಿ ಪಡೆಯ ಸ್ಟಾರ್ ಸ್ಪಿನ್ನರ್​​​​ಗಳಾಗಿದ್ದಾರೆ. ಮುಂಬರುವ ವಿಶ್ವಕಪ್​ ದೃಷ್ಠಿಯಿಂದ ಇಂಗ್ಲೆಂಡ್​ ನೆಲದಲ್ಲಿ ಇವರಿಬ್ಬರ ಪರ್ಫಾರ್ಮನ್ಸ್​​ ಬಹಳಷ್ಟು ಮುಖ್ಯವಾಗಿದ್ದು, ದಕ್ಷಿಣ ಆಫ್ರಿಕಾದಂತೆ ಇಂಗ್ಲೆಂಡ್​​ನಲ್ಲೂ ಕಮಾಲ್ ಮಾಡೋದಕ್ಕೆ ಸಜ್ಜಾಗಿದ್ದಾರೆ.

ವೇಗದ ಬೌಲಿಂಗ್​ನಲ್ಲಿದೆ ಸಾಕಷ್ಟು ಆಯ್ಕೆಗಳು..!
ವೇಗದ ಬೌಲಿಂಗ್​ನಲ್ಲಿ ಭಾರತ ಸಾಕಷ್ಟು ಆಯ್ಕೆಗಳನ್ನು ಹೊಂದಿದೆ. ಅನುಭವಿಗಳಾದ ಭುವನೇಶ್ವರ್​ ಕುಮಾರ್​​​,ಜಸ್ಪ್ರಿತ್​​ ಬೂಮ್ರಾ, ಉಮೇಶ್​​ ಯಾದವ್​ ಅಷ್ಟೇ ಅಲ್ಲದೇ ಐಪಿಎಲ್​ ಹೀರೋ, ಸಿದ್ದಾರ್ಥ ಕೌಲ್​ ಕೂಡ ಆಡುವ 11ರ ಬಳಗದಲ್ಲಿ ಆಯ್ಕೆಗಳಾಗಿದ್ದಾರೆ.

ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಕನ್ನಡನಾಡಿ.com ಪೇಜ್ ಲೈಕ್ ಮಾಡಿ..