ಶ್ರೀಲಂಕಾ ವಿರುದ್ಧದ ಸರಣಿಗೆ ಆಯ್ಕೆಯಾದ ಸಚಿನ್ ಪುತ್ರ..! ಉತ್ತಮ ಆಲ್​​ರೌಂಡರ್ ಆಗಿರುವ ಅರ್ಜುನ್ ತೆಂಡೂಲ್ಕರ್ ಮುಂದಿನ 2019 ರ ಐಪಿಎಲ್ ಆಡ್ತಾರಾ..?

ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ಅಂಡರ್ 19 ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ಭಾರತದ ಅಂಡರ್ 19 ತಂಡ ಜುಲೈನಲ್ಲಿ ಲಂಕಾ ಪ್ರವಾಸ ಕೈಗೊಳ್ಳಲಿದ್ದು, ಶ್ರೀಲಂಕಾ ವಿರುದ್ಧ 4 ದಿನಗಳ 2 ಪಂದ್ಯ ಹಾಗೂ 5 ಏಕದಿನ ಪಂದ್ಯಗಳನ್ನು ಆಡಲಿದೆ. ಈ ಪೈಕಿ 4 ದಿನಗಳ ಪಂದ್ಯಗಳಿಗೆ ಆಲ್​​​ರೌಂಡರ್ ಅರ್ಜುನ್ ತೆಂಡೂಲ್ಕರ್ ಆಯ್ಕೆಯಾಗಿದ್ದಾರೆ.

ದೆಹಲಿಯ ವಿಕೆಟ್ ಕೀಪರ್ ಬ್ಯಾಟ್ಸ್​​​ಮನ್ ಅನುಜ್ ರಾವತ್ 4 ದಿನಗಳ ತಂಡಕ್ಕೆ ನಾಯಕರಾಗಿದ್ದಾರೆ. ಇನ್ನು ಏಕದಿನ ಪಂದ್ಯಗಳ ತಂಡವನ್ನು ಅರ್ಯನ್ ಜುಯಾಲ್ ಮುನ್ನಡೆಸಲಿದ್ದಾರೆ.

2019 ಐಪಿಎಲ್​​​​ಗೆ ಮರಿ ಸಚಿನ್

ಇದೀಗ ತಾನೆ ಕ್ರಿಕೆಟ್​​ನಲ್ಲಿ ಅಂಬೆಗಾಲು ಇಡುತ್ತಿರುವ 18 ವರ್ಷ ವಯಸ್ಸಿನ ಅರ್ಜುನ್ ತೆಂಡೂಲ್ಕರ್ ಇತ್ತೀಚೆಗೆ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಗ್ಲೋಬಲ್ ಟ್ವೆಂಟಿ20 ಸರಣಿಯಲ್ಲಿ ಆಡಿ ಉತ್ತಮ ಪ್ರದರ್ಶನ ನೀಡಿ, 27 ಎಸೆತಗಳಲ್ಲಿ 48ರನ್ ಸಿಡಿಸಿದ್ದರು.

ಉತ್ತಮ ಆಲ್​​ರೌಂಡರ್ ಆಗಿರುವ ಅರ್ಜುನ್ ಮುಂದಿನ 2019 ಐಪಿಎಲ್​​​ಗೆ ಎಂಟ್ರಿ ಕೊಡ್ತಾರೆ ಎನ್ನುವ ಮಾತುಗಳು ಕೇಳಿಬಂದಿದೆ.

ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಕನ್ನಡನಾಡಿ.com ಪೇಜ್ ಲೈಕ್ ಮಾಡಿ..