6.8 ಅಡಿಯ ಈ ಬೌಲರ್​, ಐಪಿಎಲ್​ನ ಅತೀ ವೇಗದ ಸರದಾರ..!

ಟಿ20 ಫಾರ್ಮ್ಯಾಟ್​​ನಲ್ಲಿ ಬೌಲರ್​ ವೇಗ ಕೊಂಚ ಕಡಿಮೇನೆ ಅಂತ ಹೇಳ್ಬಹುದು. ವೇಗದಲ್ಲಿ ಬೌಲ್​ ಎಸೆದ್ರೇ ಬ್ಯಾಟ್ಸ್​​ಮನ್​ಗಳೂ ಅಷ್ಟೇ ವೇಗದಲ್ಲಿ ಚೆಂಡನ್ನ ಬೌಂಡರಿ ಗೆರೆ ದಾಟಿಸಿಬಿಡ್ತಾರೆ. ಈ ಬಾರಿಯ ಐಪಿಎಲ್​ನಲ್ಲಿ ಸ್ಪಿನ್ನರ್​ಗಳೇ ಹೈಲೈಟ್​ ಆಗುತ್ತಿರುವ ಮಧ್ಯೆಯೂ ಕೆಲ ವೇಗದ ಬೌಲರ್​ಗಳೂ ಸಖತ್​ ಪರ್ಫಾರ್ಮನ್ಸ್​ ನೀಡ್ತಿದ್ದಾರೆ. ಅವ್ರಲ್ಲಿ ಎಸ್​ಆರ್​ಎಚ್​ ವೇಗಿ ಬಿಲ್ಲಿ ಸ್ಟ್ಯಾನ್​ಲೇಕ್​ ಕೂಡ ಒಬ್ಬರು.

ಮೂಲತಃ ಆಸ್ಟ್ರೇಲಿಯಾದ ಈ ವೇಗಿ ಸದ್ಯ ಎಸ್​ಆರ್​ಎಚ್​​ನಲ್ಲಿ ಭುವನೇಶ್ವರ ಕುಮಾರ್​ ಜೊತೆಗೆ ಮಿಂಚಿನ ವೇಗ ಹರಿಸ್ತಿದ್ದಾರೆ. ವಿಶೇಷ ಅಂದ್ರೆ ಈ ಬಾರಿಯ ಐಪಿಎಲ್​ನಲ್ಲಿ ಬಿಲ್ಲಿ, ಅತ್ಯಂತ ಹೆಚ್ಚು ವೇಗದಲ್ಲಿ ಚೆಂಡನ್ನ ಎಸೆದಿದ್ದಾರೆ.

151.38 ಕಿಲೋಮೀಟರ್ ಪರ್​ ಅವರ್​

ಈ ಬಾರಿಯ ಐಪಿಎಲ್​ನ ಇಲ್ಲಿಯವರೆಗಿನ ಟಾಪ್​ ಟೆನ್​ ಫಾಸ್ಟ್​​ ಬೌಲ್​ಗಳಲ್ಲಿ ಸ್ಟ್ಯಾನ್​​ಲೇಕ್​ ಅವರ ಎಸೆತಗಳೇ ರಾರಾಜಿಸುತ್ತಿವೆ. ಇವುಗಳಲ್ಲಿ 151.38 ಕಿಲೋಮೀಟರ್ ಪರ್​ ಅವರ್​ ವೇಗದ ಎಸೆತ ಟಾಪ್​ ಸ್ಥಾನದಲ್ಲಿದೆ. ಇನ್ನು, 149.50 ಎರಡನೇ ಅತ್ಯಧಿಕ ವೇಗ ಕೂಡ ಸ್ಟ್ಯಾನ್​ಲೇಕ್​ ಎಸೆತದಲ್ಲೇ ದಾಖಲಾಗಿದೆ. ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಉಮೇಶ್ ಯಾದವ್ 148.98 ಕೆಎಂಪಿಎಚ್​ ವೇಗದಲ್ಲಿ ಬೌಲ್​ ಮಾಡಿದ್ದು, ಮೂರನೇ ಸ್ಥಾನದಲ್ಲಿದೆ.

👍👍 ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ 👍👍