ಚಾಕ್​​​​​ಲೇಟ್​​​ ಧೋನಿ ಬಗ್ಗೆ ನಿಮಗೆಷ್ಟು ಗೊತ್ತು..? ತಿಳಿಯಲು ಈ ಸುದ್ದಿ ಓದಿ.

ಕ್ರಿಕೆಟ್​ ದಿಗ್ಗಜ ಸಿಚಿನ್ ತೆಂಡೂಲ್ಕರ್ ಹಾಗೂ ಟೀಮ್ ಇಂಡಿಯಾದ ಕ್ಯಾಪ್ಟನ್ ವಿರಾಟ್ ಕೊಹ್ಲಿ ಅವರ ಮೇಣದ ಪ್ರತಿಮೆ ಆಯ್ತು. ಇದೀಗ ಭಾರತ ಕ್ರಿಕೆಟ್​​​ ತಂಡದ ಮಾಜಿ ಕೂಲ್ ಕ್ಯಾಪ್ಟನ್​​ ಮಹೇಂದ್ರ ಸಿಂಗ್ ಧೋನಿ ಸರದಿ.

ಚಾಕ್​​​ಲೇಟ್​​​ನಲ್ಲಿ ಅರಳಲಿರುವ ಧೋನಿ
ಪ್ರತಿಷ್ಠಿತ ಚಾಕ್​​ಲೇಟ್​​ ಕಂಪನಿಯೊಂದು ತಿನ್ನುವ ಚಾಕ್​​​ಲೇಟ್​​​ನಲ್ಲಿಯೇ ಧೋನಿ ಪ್ರತಿಮೆ ನಿರ್ಮಿಸಲು ಮುಂದಾಗಿದೆ. ಒಟ್ಟು 386 ಕೆ.ಜಿ ಚಾಕ್​​ಲೇಟ್​​​ನಲ್ಲಿ 5 ಫೀಟ್ 9 ಇಂಚಿನ ಮಹಿ ಮೂರ್ತಿಯನ್ನು ತಯಾರಿಸಲಾಗಿದೆ. ಇನ್ನು ಇದನ್ನ ನಿರ್ಮಿಸಲು ಬರೋಬ್ಬರಿ 151 ಗಂಟೆ ಹಿಡಿದಿದ್ದು, ಈ ಪ್ರತಿಮೆ ಮುಂದಿನ ತಿಂಗಳು ಚೆನ್ನೈನಲ್ಲಿರುವ ಆರ್​.ಕೆ. ಸಲೈ ಕಾಫಿ ಎಂಬಲ್ಲಿ ತಲೆ ಎತ್ತಲಿದೆ.
ಇನ್ನು ಮೇಡಮ್‌ ಟುಸ್ಸಾಡ್ಸ್‌ನ ನವದೆಹಲಿ ಶಾಖೆಯಲ್ಲಿ ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಅವರ ಮೇಣದ ಪ್ರತಿಮೆ ಶೀಘ್ರವೇ ತಲೆ ಎತ್ತಲಿದೆ. ಲಂಡನ್‌ ಮೂಲದ ವಿಶ್ವಪ್ರಸಿದ್ಧ ಕಲಾವಿದರ ತಂಡದವರು ಕೊಹ್ಲಿ ಪ್ರತಿಮೆಯನ್ನ ತಯಾರಿಸುತ್ತಿದ್ದಾರೆ.

👍👍 ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ 👍👍